ಲೆಬನಾನ್ ಭೀಕರ ಸ್ಪೋಟದಲ್ಲಿ ಮೃತರ ಸಂಖ್ಯೆ 180ಕ್ಕೆ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೈರುತ್, ಆ.14- ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಲೆಬನಾನ್ ರಾಜಧಾನಿ ಬೈರುತ್‍ನಲ್ಲಿ ಸಂಭವಿಸಿದ ಭಾರೀ ಸೋಟ ದಲ್ಲಿ ಮೃತಪಟ್ಟವರ ಸಂಖ್ಯೆ 180ಕ್ಕೆ ಏರಿದೆ. ಈ ದುರ್ಘಟನೆಯಲ್ಲಿ 6,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕನಿಷ್ಠ 30 ಜನರು ನಾಪತ್ತೆಯಾಗಿದ್ದಾರೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಸೋಟದಿಂದಾಗಿ ಬೈರುತ್ ನಗರದ 6 ಪ್ರಮುಖ ಆಸ್ಪತ್ರೆಗಳು , 20 ಕ್ರಿನಿಕ್‍ಗಳು ಮತ್ತು 55 ಪ್ರಾಥಮಿಕ ಚಿಕಿತ್ಸಾ ಘಟಕಗಳಿಗೆ ಭಾರೀ ಹಾನಿಯಾಗಿದ್ದು , ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗಿದೆ.

ಸೋಟ ಸಂಭವಿಸಿದ ಸ್ಥಳದಿಂದ 25 ಕಿ.ಮೀ ಪರಿಯಲ್ಲಿರುವ ಪ್ರಾಚೀನ ಕೋಟೆ ಕೊತ್ತಲಗಳು , ಐತಿಹಾಸಿಕ ಅರಮನೆ ಮತ್ತು ಪುರಾತನ ಸ್ಮಾರಕಗಳು ಭಾರೀ ಹಾನಿಯಾಗಿದೆ.

ಬೈರುತ್ ನಗರಿಯ ಬಂದರು ಸಮೀಪ 3,000 ಟನ್ ಅಮೋನಿಯಂ ನೈಟ್ರೇಟ್ ದಾಸ್ತಾನು ಮಾಡಿದ್ದ ಪ್ರದೇಶದಲ್ಲಿ ಸಂಭವಿಸಿದ ಈ ಸೋಟದಿಂದ ಬೈರುತ್ ನಗರ ತತ್ತರಿಸಿದೆ.

ಈ ಘಟನೆ ಆಕಸ್ಮಿಕವೋ ಅಥವಾ ಉಗ್ರಗಾಮಿಗಳ ಕೃತ್ಯವೋ ಎಂಬ ಬಗ್ಗೆ ತನಿಖೆ ಮುಂದುವರೆದಿದೆ.

Facebook Comments

Sri Raghav

Admin