ಅತ್ತ ಸಂಪುಟ ಸರ್ಕಸ್, ಇತ್ತ ಉಪ ಚುನಾವಣೆಗೆ ಅಭ್ಯರ್ಥಿ ಹೆಸರು ಫೈನಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13- ಇದೇ 17 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ಆಗಮಿಸುವ ಸಂದರ್ಭದಲ್ಲೇ ಅಂದೇ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಅಭ್ಯರ್ಥಿ ಹೆಸರು ಫೈನಲ್ ಮಾಡುವ ಸಾಧ್ಯತೆಯಿದೆ. ಹಲವು ವರ್ಷಗಳಿಂದ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಕಾರಣ ಅನೇಕ ಆಕಾಂಕ್ಷಿಗಳು ಟಿಕೆಟ್‍ಗಾಗಿ ಮುಗಿ ಬಿದ್ದಿದ್ದಾರೆ. ಸದ್ಯ ಬೆಳಗಾವಿ ರಾಜಕೀಯ ಗಮನಸಿದರೇ ಈ ಬಾರಿ ಕೂಡ ಯಾವುದೇ ಹೆಚ್ಚಿನ ಪ್ರತಿರೋಧವಿಲ್ಲದೆ ಬಿಜೆಪಿ ವಿಜಯ ಪತಾಕೆ ಹಾರಿಸುವ ಸಾಧ್ಯತೆಯಿದೆ.

ಸುರೇಶ್ ಅಂಗಡಿ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡುವಂತೆ ಹಲವರು ಒತ್ತಡ ಹೇರುತ್ತಿದ್ದಾರೆ, ಕೋವಿಡ್ ಕಾರಣದಿಂದಾಗಿ ಅವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಅನಿವಾರ್ಯವಾಯಿತು.  ತೆರವಾದ ಈ ಸ್ಥಾನಕ್ಕೆ ಅನೇಕ ಪಕ್ಷದ ಮುಖಂಡರು ಟಿಕೆಟ್‍ಗಾಗಿ ಲಾಬಿ ಮಾಡುತ್ತಿದ್ದಾರೆ, ಆರ್ ಎಸ್‍ಎಸ್ ಶ್ರೇಯಾಂಕಗಳು ಮತ್ತು ನವದೆಹಲಿಯ ಬಿಜೆಪಿ ನಾಯಕತ್ವದೊಂದಿಗಿನ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ಏಕೆಂದರೆ, ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಹಂಚಿಕೆ ಮತ್ತು ರಾಜ್ಯ ಸಚಿವ ಸಂಪುಟ ರಚನೆಯಲ್ಲಿ ಆರ್‍ಎಸ್‍ಎಸ್ ವಹಿಸಿದ ಪ್ರಮುಖ ಪಾತ್ರದ ಬಗ್ಗೆ ಅವರಿಗೆ ತಿಳಿದಿರುವ ಕಾರಣ ಕೆಲವರು  ಆರ್ ಎಸ್‍ಎಸ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಸಿಎಂ ಯಡಿಯುರಪ್ಪ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕೆಲವು ನಿಷ್ಠಾವಂತ ಪಕ್ಷದ ಕಾರ್ಯಕರ್ತರು ಆರ್‍ಎಸ್‍ಎಸ್ ನಾಯಕತ್ವದೊಂದಿಗಿನ ಸಂಪರ್ಕದ ಕೊರತೆಯಿಂದಾಗಿ ಟಿಕೆಟ್ ಪಡೆಯುವ ವಿಶ್ವಾಸ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ. ಡಾ.ಗಿರೀಶ್ ಸೊನ್ವಾಲ್ಕರ್ ಅವರು ಇತ್ತೀಚೆಗೆ ಪಕ್ಷಕ್ಕೆ ಸೇರಿದ್ದರೂ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಇವರಿಗೆ ಆರ್ ಎಸ್ ಎಸ್ ಬೆಂಬಲವಿದೆ ಎಂದು ಹೇಳಲಾಗುತ್ತಿದೆ.

 

Facebook Comments