ಕ್ಷೀಣಿಸುತ್ತಿದ್ದ ಜಿರಾಫೆ ಕುಟುಂಬಕ್ಕೆ ಸಂತಸ ತಂದ ಲವ್ಲಿ ಬೇಬಿ ಬಾಯ್ ಜನನ..!

ಈ ಸುದ್ದಿಯನ್ನು ಶೇರ್ ಮಾಡಿ

ds

ಬೆಲ್ಜಿಯಂ ಮೃಗಾಲಯದಲ್ಲಿ ಈಗ ನವಜಾತ ಜಿರಾಫೆ ಮರಿ ಜನನದಿಂದ ಸಂಭ್ರಮ ಮನೆ ಮಾಡಿದೆ. ಭೂಮಂಡಲದ ಅತ್ಯಂತ ಎತ್ತರದ ಪ್ರಾಣಿ ಜಿರಾಫೆಯ ಸಂತತಿ ವೃದ್ದಿಯಾಗುತ್ತಿರುವುದು ಪ್ರಾಣಿ ಪ್ರಿಯರಿಗೆ ಖುಷಿ ನೀಡಿದೆ. ಬನ್ನಿ ಈ ಮುದ್ದಾದ ಬೇಬಿ ಬಾಯ್‍ನನ್ನು ನೋಡೋಣ. ಜಿರಾಫೆ-ಭೂಮಿ ಮೇಲಿನ ಅತ್ಯಂತ ಎತ್ತರದ ವಿಸ್ಮಯ ಪ್ರಾಣಿ. ಅವನತಿಯತ್ತ ಸಾಗುತ್ತಿರುವ ಜಿರಾಫೆಯ ಸಂತತಿ ವೃದ್ದಿಯಾಗುತ್ತಿರುವುದು ಸಂತಸದ ಬೆಳವಣಿಗೆ. ಬೆಲ್ಜಿಯಂ ರಾಜಧಾನಿ ಬ್ರುಸ್ಸೆಲ್ಸ್ ನಿಂದ 20 ಕಿಮೀ ದೂರದಲ್ಲಿರುವ ಮೆಚೆಲಾನ್‍ನ ಪ್ಲಾಂಕೆಂಡಾಯಿಲ್ ಮೃಗಾಲಯದಲ್ಲಿ ಮುದ್ದಾದ ಗಂಡು ಜಿರಾಫೆ ಮರಿಯೊಂದು ಜನಿಸಿದೆ. ಈ ಮರಿಗೆ ಟ್ವಿಗಾ ಎಂದು ಹೆಸರಿಡಲಾಗಿದೆ. ಆಫ್ರಿಕಾದ ಸ್ವಾಹಿಲಿ ಭಾಷೆಯಲ್ಲಿ ಟ್ವಿಗಾ ಎಂದರೆ ಉದ್ದನೆ ಪ್ರಾಣಿ ಎಂದರ್ಥ.

ds-1

ಉದ್ದನೆಯ ಹೆಣ್ಣು ಜಿರಾಫೆಗಳು ಮರಿಗೆ ಜನ್ಮ ನೀಡುವಾಗ ಮಲಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವು ಸುಮಾರು ಏಳು ಅಡಿ ಎತ್ತರದಿಂದ ಮರಿಯನ್ನು ಹಾಕುತ್ತವೆ. ಈಗ ಜನಿಸಿರುವ ಟ್ವಿಗಾ ಮರಿ ಈಗಲೇ ಏಳು ಅಡಿಗಳಷ್ಟು ಎತ್ತರವಾಗಿವೆ. ಈ ಬೇಬಿ ಬಾಯ್ ಜಿರಾಫೆ ಧರೆಗೆ ಅವತರಿಸಿದ ಕೇವಲ 20 ನಿಮಿಷಗಳಲ್ಲೇ ಓಡಾಡಲು ಆರಂಭಿಸಿತು. ಬಾರ್ಬಿ ಎಂಬ ಹೆಣ್ಣು ಜಿರಾಫೆಗೆ ಜನಿಸಿದ ಆರನೇ ಮರಿ ಇದಾಗಿದೆ. ಈ ಮರಿ ಅತ್ಯಂತ ಕ್ರಿಯಾಶೀಲ ವಾಗಿದ್ದು, ತುಂಟಾಟದಿಂದಾಗಿ ಮೃಗಾಲಯದ ಮುದ್ದಿನ ಕಣ್ಮಣಿ ಎನಿಸಿದೆ ಎನ್ನುತ್ತಾರೆ ಪ್ರಾಣಿ ರಕ್ಷಕರಾದ ಸಿಲ್ ವಾಮ್ಯಾನ್ಸ್. 2016ರಲ್ಲಿ ಇಂಟರ್‍ನ್ಯಾಷನಲ್ ಯೂನಿಯನ್ ಕನ್ಸರ್‍ವೇಷನ್ ಆಫ್ ನೇಚರ್(ಐಯುಸಿಎನ್) ಜಿರಾಫೆಯನ್ನು ಅಪಾಯದಲ್ಲಿರುವ ಪ್ರಬೇಧಗಳ ಕೆಂಪು ಪಟ್ಟಿಗೆ ಸೇರಿಸಿದೆ. ವಿಶ್ವದ ಅರಣ್ಯಗಳಲ್ಲಿ ಈಗ ಸುಮಾರು ಒಂದು ಲಕ್ಷ ಜಿರಾಫೆಗಳಿವೆ. ಮೂರು ದಶಕಗಳಲ್ಲಿ ಇವುಗಳ ಸಂಖ್ಯೆಯಲ್ಲಿ ಶೇಕಡ 40ರಷ್ಟು ಕುಸಿತ ಕಂಡುಬಂದಿರುವುದು ಆತಂಕಕಾರಿಯಾಗಿದೆ.

Facebook Comments

Sri Raghav

Admin