ಫಿಫಾ ವಿಶ್ವಕಪ್ : 3ನೇ ಸ್ಥಾನದಲ್ಲಿ ವಿಜೃಂಭಿಸಿದ ಬೆಲ್ಜಿಯಂ

ಈ ಸುದ್ದಿಯನ್ನು ಶೇರ್ ಮಾಡಿ

Belgium--1

ಮಾಸ್ಕೋ, ಜು.15-ಫಿಫಾ ವಿಶ್ವಕಪ್ ಫುಟ್ಬಾಲ್-2018ರ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿ ಯಲ್ಲಿ ಬೆಲ್ಜಿಯಂ ಬಲಿಷ್ಠ ಇಂಗ್ಲೆಂಡ್ ವಿರುದ್ಧ 2-0 ಅಂತರದಲ್ಲಿ ರೋಚಕ ಜಯ ದಾಖಲಿಸಿದೆ. ತೃತೀಯ ಸ್ಥಾನ ಗಳಿಸಿದ ಬೆಲ್ಜಿಯಂಗೆ ಇದು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನವಾಗಿದೆ.

ಇಂಗ್ಲೆಂಡ್‍ನನ್ನು ಮಣಿಸುವ ಮೂಲಕ ಬೆಲ್ಜಿಯಂ ಒಂದು ತಿಂಗಳ ಕಾಲ ನಡೆದ ವಿಶ್ವಕಪ್ ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ. ತೃತೀಯ ಸ್ಥಾನಕ್ಕಾಗಿ ನಿನ್ನೆ ನಡೆದ ಪಂದ್ಯದಲ್ಲಿ ಬೆಲ್ಜಿಯಂ, ಇಂಗ್ಲೆಂಡ್ ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸಿತು. ಗೋಲು ಗಳಿಸಲು ಲಭಿಸಿದ ಉತ್ತಮ ಅವಕಾಶಗಳನ್ನು ಕೈ ಚೆಲ್ಲಿದ ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಪಂದ್ಯ ಆರಂಭವಾದ ಕೇಲವ ನಾಲ್ಕನೇ ನಿಮಿಷದಲ್ಲಿ ಬೆಲ್ಜಿಯಂ ತಂಡ ಗೋಲು ಬಾರಿಸುವ ಮೂಲಕ ಶುಭಾರಂಭ ಮಾಡಿತು. ಥಾಮಸ್ ಮ್ಯುನಿಯರ್ ಪ್ರಾರಂಭದಲ್ಲೇ ಭರ್ಜರಿ ಗೋಲು ಬಾರಿಸಿ ಜಯದ ಮುನ್ಸೂಚನೆ ನೀಡಿದರು. ಆ ನಂತರ 82ನೇ ನಿಮಿಷದಲ್ಲಿ ಮತ್ತೆ ಈಡೆನ್ ಹಜಾರ್ಡ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿದ ಬೆಲ್ಜಿಯಂ ತಂಡಕ್ಕೆ ಮತ್ತೊಂದು ಕೊಡುಗೆ ನೀಡಿದರು. ಈ ಹಂತದಲ್ಲಿ ಬೆಲ್ಜಿಯಂ ಗೆಲುವು ಖಚಿತವಾಯಿತು. ಅಂತಿಮ ಪಂದ್ಯದ ನಿಗದಿತ ಅವಧಿ ಮುಕ್ತಾಯಕ್ಕೆ ಬೆಲ್ಜಿಯಂ ತಂಡ 2-0 ಅಂತರದಿಂದ ಆಂಗ್ಲ ಆಟಗಾರರ ವಿರುದ್ಧ ಗೆಲವು ಸಾಧಿಸಿತು. ಟೂರ್ನಿಯಲ್ಲಿ ಮೂರನೇ ಸ್ಥಾನಿಯಾಗಿ ಅಮೋಘ ಪ್ರದರ್ಶನದೊಂದಿಗೆ ನಿರ್ಗಮಿಸಿತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin