ದೊಣ್ಣೆಮೆಣಸಿನ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಇಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿ ವ್ಯಕ್ತವಾಗುತ್ತಿದ್ದು ಆರೋಗ್ಯಕರ ಆಹಾರದತ್ತ ಜನರು ಹೆಚ್ಚು ಗಮನ ನೀಡುತ್ತಾರೆ. ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ದೊಣ್ಣೆಮೆಣಸು ಪ್ರಮುಖ ಸ್ಥಾನದಲ್ಲಿದೆ. ದೊಣ್ಣೆಮೆಣಸು ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದರೂ ಪೋಷಕಾಂಶಗಳ ವಿಷಯದಲ್ಲಿ ಇವು ಹಸಿರು ದೊಣ್ಣೆಮೆಣಸಿಗಿಂತ ಭಿನ್ನವೇನೂ ಅಲ್ಲ.

ಚೈನೀಸ್ ಆಹಾರಗಳಲ್ಲಿ ದೊಣ್ಣೆಮೆಣಸು ಇರಲೇಬೇಕು. ದೊಣ್ಣೆಮೆಣಸಿನಲ್ಲಿರುವ ಕ್ಯಾಪ್ಸೈಸಿನ್ ಎಂಬ ಫೈಟೊಕೆಮಿಕಲ್ ಅದರ ವಿಶಿಷ್ಟ ರುಚಿಗೆ ಕಾರಣವಾಗಿದೆ. ಎ,ಸಿ ಮತ್ತು ಇ ವಿಟಾಮಿನ್‌ಗಳು ಅದರಲ್ಲಿ ಸಮೃದ್ಧವಾಗಿವೆ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತವೆ.

ಬಾಲ್ಟ್, ತಾಮ್ರ, ಸತುವು,ಮಾಲಿಬ್ಡಿನಿಯಂ,ಪೊಟ್ಯಾಷಿಯಂ ಮತ್ತು ಮ್ಯಾಂಗನೀಸ್‌ನಂತಹ ಕೆಲವು ಖನಿಜಗಳೂ ದೊಣ್ಣೆಮೆಣಸಿನಲ್ಲಿವೆ.
ದೊಣ್ಣೆಮೆಣಸಿನಲ್ಲಿ ಕೊಬ್ಬು ಮತ್ತು ಕ್ಯಾಲರಿಗಳು ಕಡಿಮೆ ಪ್ರಮಾಣದಲ್ಲಿರುವುದರಿಂದ ಅದರ ಸೇವನೆಯು ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳನ್ನು ಹೆಚ್ಚಿಸುವುದಿಲ್ಲ.

# ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ದೊಣ್ಣೆಮೆಣಸಿನಲ್ಲಿ ಅಧಿಕ ಪ್ರಮಾಣದಲ್ಲಿರುವ ವಿಟಾಮಿನ್ ಸಿ ಬಿಳಿಯ ರಕ್ತಕಣಗಳು ಸೋಂಕುಗಳ ವಿರುದ್ಧ ಹೋರಾಡಲು ಪ್ರಚೋದಿಸುತ್ತದೆ ಮತ್ತು ಇದರಿಂದ ಶರೀರದಲ್ಲಿಯ ರೋಗ ನಿರೋಧಕ ವ್ಯವಸ್ಥೆಯು ಬಲಗೊಳ್ಳುತ್ತದೆ. ವಿಟಾಮಿನ್ ಸಿ ಮತ್ತು ಫ್ಲೇವನಾಯ್ಡೆಗಳು ಶ್ವಾಸಕೋಶ ಸೋಂಕುಗಳು,ಅಸ್ತಮಾ,ಎಂಫಿಸೆಮಾ ಅಥವಾ ವಾತಶೋಥ ಮತ್ತು ಉಬ್ಬಸದಂತಹ ಉಸಿರಾಟದ ಸಮಸ್ಯೆಗಳನ್ನು ತಡೆಯುತ್ತವೆ.

# ಕ್ಯಾನ್ಸರ್‌ನ್ನು ತಡೆಯುತ್ತದೆ : ದೊಣ್ಣೆಮೆಣಸಿನಲ್ಲಿರುವ ಕ್ಯಾಪ್ಸೈಸಿನ್ ಕ್ಯಾನ್ಸರ್‌ಕಾರಕಗಳು ಡಿಎನ್‌ಎ ಜೊತೆ ಸೇರಿಕೊಳ್ಳುವುದನ್ನು ತಡೆಯುವ ಮೂಲಕ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಸರಳವಾಗಿ ಹೇಳಬೇಕೆಂದರೆ ಅದು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ. ಅದನ್ನು ನಿಯಮಿತವಾಗಿ ಸೇವಿಸುವ ಮೂಲಕ ಕ್ಯಾನ್ಸರ್ ವಿರುದ್ಧ ಸ್ವಲ್ಪಮಟ್ಟಿಗೆ ರಕ್ಷಣೆಯನ್ನು ಪಡೆಯಬಹುದು.

# ಜೀವಕೋಶಗಳಿಗೆ ಹಾನಿಯನ್ನು ತಡೆಯುತ್ತದೆ : ಶರೀರದಲ್ಲಿರುವ ಫ್ರೀ ರ್ಯಾಡಿಕಲ್‌ಗಳು ಜೀವಕೋಶಗಳು,ನರಗಳು ಮತ್ತು ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತವೆ. ದೊಣ್ಣೆಮೆಣಸಿನಲ್ಲಿ ಎ ಮತ್ತು ಸಿ ವಿಟಾಮಿನ್‌ಗಳು ಸಮೃದ್ಧವಾಗಿರುತ್ತವೆ ಮತ್ತು ಇವೆರಡೂ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳಾಗಿವೆ. ಇವು ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ ಮತ್ತು ಹೃದ್ರೋಗಗಳು,ಅಸ್ಥಿ ಸಂಧಿವಾತ,ಶ್ವಾಸನಾಳದ ಅಸ್ತಮಾ ಮತ್ತು ಮೋತಿಬಿಂದುವಿನಂತಹ ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ ನೆರವಾಗುತ್ತವೆ.

# ನೋವನ್ನು ಶಮನಿಸುತ್ತದೆ : ಅದರಲ್ಲಿರುವ ಕ್ಯಾಪ್ಸೈಸಿನ್ ಚರ್ಮದಿಂದ ಮಿದುಳು ಬಳ್ಳಿಗೆ ನೋವಿನ ಹರಡುವಿಕೆಯನ್ನು ತಡೆಯುತ್ತದೆ ಎನ್ನಲಾಗಿದೆ. ಇದು ಸರ್ಪಸುತ್ತಿನಿಂದುಂಟಾಗುವ ನೋವು,ಶಸ್ತ್ರಚಿಕಿತ್ಸೆ ನಂತರದ ನೋವು ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಶಮನಿಸುತ್ತದೆ.

# ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ : ದೊಣ್ಣೆಮೆಣಸಿನಲ್ಲಿರುವ ಫ್ಲೇವನಾಯ್ಡೆಗಳು ಹೃದಯನಾಳೀಯ ಹೃದ್ರೋಗವನ್ನು ತಡೆಯುವಲ್ಲಿ ನೆರವಾಗುತ್ತವೆ. ಅದು ರಕ್ತನಾಳಗಳನ್ನು ಹಿಗ್ಗಿಸುವ ಗುಣವನ್ನು ಹೊಂದಿರುವುದರಿಂದ ಕಡಿಮೆ ರಕ್ತದೊತ್ತಡ ಮತ್ತು ಹೃದಯ ಬಡಿತ ದರ ಇಳಿಕೆ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಇದರಿಂದ ರಕ್ತಪರಿಚಲನೆ ಉತ್ತಮಗೊಂಡು ಅಂಗಾಂಗಗಳಿಗೆ ಆಮ್ಲಜನಕ ಪೂರೈಕೆ ಹೆಚ್ಚುತ್ತದೆ.

# ಜಠರಗರುಳು ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ : ದೊಣ್ಣೆಮೆಣಸಿನಲ್ಲಿರುವ ಟ್ಯಾನಿನ್‌ಗಳು ಅತಿಸಾರ,ಬೇಧಿಯಂತಹ ಜಠರಗರುಳು ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಟ್ಯಾನಿನ್‌ಗಳು ಉಂಟುಮಾಡುವ ಗೋಂದಿನಂತಹ ಸಂಯುಕ್ತವು ಜಠರದ ಪದರಕ್ಕೆ ರಕ್ಷಣೆ ನೀಡುತ್ತದೆ ಮತ್ತು ಜಠರದ ಹುಣ್ಣು ಉಂಟಾಗುವುದನ್ನು ತಡೆಯುತ್ತದೆ.

# ದೊಣ್ಣೆಮೆಣಸಿನ ಅಡ್ಡಪರಿಣಾಮಗಳು: ದೊಣ್ಣೆಮೆಣಸಿನ ಅತಿಯಾದ ಸೇವನೆಯು ಎದೆಯುರಿ,ಅತಿಸಾರ,ಹೊಟ್ಟೆನೋವು,ಗಂಟಲು,ಬಾಯಿ ಮತ್ತು ಚರ್ಮದಲ್ಲಿ ಉರಿಯ ಅನುಭವವನ್ನುಂಟು ಮಾಡಬಹುದು. ಕೆಲವರಲ್ಲಿ ಅಲರ್ಜಿಯನ್ನುಂಟು ಮಾಡಬಹುದು.

Facebook Comments