ಕೊರೊನಾ ವಿಚಾರದಲ್ಲಿ ಬೆಂಗಳೂರಿನ ಈ ವಾರ್ಡ್ ಮೋಸ್ಟ್ ಡೇಂಜರಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.28-ಇಡೀ ನಗರದಲ್ಲೇ ಬೆಳ್ಳಂದೂರು ವಾರ್ಡ್ ಮೋಸ್ಟ್ ಡೇಂಜರಸ್ ವಾರ್ಡ್ ಎಂಬ ಕುಖ್ಯಾತಿಗೆ ಒಳಗಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮಹದೇವಪುರ ವಲಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿನ 17 ವಾರ್ಡ್‍ಗಳಲ್ಲೂ ಕೊರೊನಾ ಸೋಂಕು ಅಬ್ಬರಿಸುತ್ತಿದೆ. ಅದರಲ್ಲೂ ಬೆಳ್ಳಂದೂರು ವಾರ್ಡ್‍ನಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿರುವುದರಿಂದ ಆ ವಾರ್ಡ್ ಅನ್ನು ಡೇಂಜರಸ್ ವಾರ್ಡ್ ಎಂದು ಘೋಷಿಸಲಾಗಿದೆ.

ಒಂದು ಲಕ್ಷದ 25 ಸಾವಿರ ಮಂದಿ ವಾಸಿಸುತ್ತಿರುವ ಬೆಳ್ಳಂದೂರು ವಾರ್ಡ್‍ನಲ್ಲಿ ಪ್ರತಿನಿತ್ಯ 700ಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಹದೇವಪುರ ವಲಯದಲ್ಲಿ ಪ್ರತಿನಿತ್ಯ 4 ಸಾವಿರಕ್ಕೂ ಹೆಚ್ಚು ಸೋಂಕು ಪತ್ತೆಯಾಗುತ್ತಿದ್ದರೆ, ಅದರಲ್ಲಿ ಬೆಳ್ಳಂದೂರು ವಾರ್ಡ್‍ನಲ್ಲೆ 700ಕ್ಕೂ ಹೆಚ್ಚು ಮಂದಿ ಸೋಂಕಿಗೆ ಗುರಿಯಾಗುತ್ತಿದ್ದಾರೆ.

700 ಮಂದಿಯಲ್ಲಿ 500ಕ್ಕೂ ಹೆಚ್ಚು ಮಂದಿ ಇಲ್ಲಿನ ಅಪಾರ್ಟ್‍ಮೆಂಟ್ ನಿವಾಸಿಗಳು ಎನ್ನುವುದು ವಿಶೇಷ. ಇಲ್ಲಿನ ಬಹುತೇಕ ಅಪಾರ್ಟ್‍ಮೆಂಟ್‍ಗಳಲ್ಲಿ ಐಟಿ-ಬಿಟಿ ಮಂದಿಯೇ ವಾಸಿಸುತ್ತಿರುವುದು. ಇಂತಹ ಬುದ್ದಿವಂತ ಜನರು ಮಾತ್ರ ಕೊರೊನಾ ನಿಯಮಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿರುವುದರಿಂದಲೇ ಇಲ್ಲಿನ ಅಪಾರ್ಟ್‍ಮೆಂಟ್‍ಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಲು ಕಾರಣ ಎಂದು ತಿಳಿದುಬಂದಿದೆ.

ಬೆಳ್ಳಂದೂರು ವಾರ್ಡ್ ಒಂದರಲ್ಲೇ 1700 ಕ್ಕೂ ಹೆಚ್ಚು ಅಪಾರ್ಟ್‍ಮೆಂಟ್‍ಗಳಿವೆ. ಇನ್ನು 350 ಅಪಾರ್ಟ್‍ಮೆಂಟ್‍ಗಳು ನಿರ್ಮಾಣ ಹಂತದಲ್ಲಿವೆ. ಕಟ್ಟಡ ಕಾಮಗಾರಿಗೆ ವಲಸಿಗ ಕಾರ್ಮಿಕರೇ ಹೆಚ್ಚಾಗಿರುವುದು ಕೊರೊನಾ ಉಲ್ಬಣಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

Facebook Comments