ಮನೆಯವರನ್ನು ಕಟ್ಟಿ ಹಾಕಿ 13 ಲಕ್ಷ ನಗ-ನಗದು ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ತಾಲೂಕಿನ ಕಲ್ಮಂಜ ಗ್ರಾಮದ ಮಿಯೋ ನಿವಾಸಿ ಅಡಿಕೆ ವ್ಯಾಪಾರಿ ಅಚ್ಯುತ ಭಟ್ ಎಂಬವರ ಮನೆಗೆ ಶುಕ್ರವಾರ ಮುಂಜಾನೆ 2.30 ರ ಸುಮಾರಿಗೆ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ಸುಮಾರು 13 ಲಕ್ಷ‌ ರೂ. ಮೌಲ್ಯದ ನಗ ನಗದು ದರೋಡೆಗೈದ ಘಟನೆ ನಡೆದಿದೆ.

40 ಪವನ್ ಚಿನ್ನ, ಒಂದು ಕೆಜಿ ಬೆಳ್ಳಿ,25 ಸಾವಿರ ರೂ. ದೋಚಲಾಗಿದೆ. .ತಡ ರಾತ್ರಿ ನಾಯಿಗಳು ಬೊಗಳಿದ ಸದ್ದುಕೇಳಿ ಮನೆಯವರು ಬಾಗಿಲು ತೆರೆದಾಗ ದರೋಡೆಕೋರರು ಮನೆಯೊಳಗೆ ನುಗ್ಗಿ ಅಚ್ಯುತ ಭಟ್ ಸೇರಿದಂತೆ ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಿದ್ದಾರೆ.

.>ನಾಲ್ಕು ಮಂದಿ ದರೋಡೆಕೋರರು ಮುಸುಕುಧಾರಿಗಳಾಗಿ ಮನೆಗೆ ನುಗ್ಗಿದ್ದಾರೆ. ಒಂದು ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೆ ಮನೆಮಂದಿಯ ಜೀವಹಾನಿ ಮಾಡುವುದಾಗಿ ದರೋಡೆಕೋರರು ಬೆದರಿಕೆಯೊಡ್ಡಿದ್ದಾರೆ.

ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿಜಿ ತಂಡದ ನೇತೃತ್ವದಲ್ಲಿ ತನಿಖೆ ನಡೆಯುತಿದ್ದು ಧರ್ಮ ಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin