ಈಜಲು ಹೋಗಿದ್ದ ಯುವಕ ನೀರು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಅ.9- ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಪ್ರಕರಣ ಬೇಲೂರು ಪಟ್ಟಣ ಸಮೀಪದ ನಿಡಗೋಡು ಗ್ರಾಮದಲ್ಲಿ ನಡೆದಿದ್ದು, ಮೃತರ ಸಂಬಂಧಿಕರ ರೋದನೆ ಹೇಳ ತೀರದಾಗಿತ್ತು. ಬೇಲೂರು ತಾಲೂಕಿನ ನಿಡಗೋಡು ಗ್ರಾಮದ ತಮ್ಮಯ್ಯ ಎಂಬುವವರ ಪುತ್ರ ಪವನ್(16) ಮೃತ ದುರ್ದೈವಿ.

ಈತ ಮಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೆ ಎಸ್‍ಎಸ್‍ಎಲ್‍ಸಿ ಅರ್ದ ವಾರ್ಷಿಕ ಪರೀಕ್ಷೆ ಬರೆದಿದ್ದ, ದಸರ ರಜವಿದ್ದಿದ್ದರಿಂದ ಊರಿಗೆ ಬಂದಿದ್ದನ್ನು. ಆದರೆ ಸೋಮವಾರ ಆಯುಧ ಪೂಜೆ ಆಚರಿಸಿದ ಪವನ್, ಮಂಗಳವಾರ ಗ್ರಾಮದ ಕೆಲ ಸ್ನೇಹಿತರೊಂದಿಗೆ ನಿಡಗೋಡು ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿದ್ದಾನೆ.

ಇದೇ ಸಂದರ್ಭದಲ್ಲಿ ಕೆರೆಯಲ್ಲಿ ಚೀಲಗಳನ್ನು ತೊಳೆಯುತ್ತಿದ್ದ ಯುವಕನ ದೊಡ್ಡಪ್ಪ ಪರ್ವತೇಗೌಡ ಹಾಗೂ ಗ್ರಾಮಸ್ಥರು ಮುಳುಗುತ್ತಿದ್ದ ಪವನ್‍ನನ್ನು ತಕ್ಷಣವೇ ಮೇಲಕ್ಕೆತ್ತಿ, ಆಸ್ಪತ್ರೆಗೆ ವಾಹನದಲ್ಲಿ ಕರೆತಂದಿದ್ದಾರೆ. ಅಷ್ಟರಲ್ಲಾಗಲೆ ಪವನ್ ಮೃತನಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪವನ್ ಮೃತನಾಗಿದ್ದಾನೆ ಎಂಬ ವಿಷಯ ತಿಳಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ರೋದನೆ ಹೇಳ ತೀರದಾಗಿತ್ತು. ವಿಷಯ ಪಟ್ಟಣದ ತುಂಬೆಲ್ಲ ಹರಿದಾಡಿದ್ದರಿಂದ ಮೃತದೇಹ ನೋಡಲು ಸಾರ್ವಜನಿಕರು ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದರು.

Facebook Comments