ರಾಜಕೀಯ ಪಕ್ಷಗಳಿಂದ ಬೇಸತ್ತ ಜನತೆ, ಬೇಲೂರು ಪುರಸಭೆ ಕಣದಲ್ಲಿ ಯುವಕರ ದರ್ಬಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು,ಏ.8- ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ದುರಾಡಳಿತಕ್ಕೆ ಬೇಸತ್ತಿರುವ ಯುವ ಜನರನ್ನು ಬೇಲೂರು ಪುರಸಭೆ ಚುನಾವಣೆಯಲ್ಲಿ 23 ವಾರ್ಡ್‍ಗಳಲ್ಲೂ ಕಣಕ್ಕಿಳಿಸಲಾಗುವುದು ಎಂದು ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ್ ತರೀಕೆರೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆಡಳಿತಕ್ಕೆ ಬಂದ ಎಲ್ಲ ಸರ್ಕಾರಗಳು ತಮ್ಮ ಸ್ವಾರ್ಥಕ್ಕಾಗಿ ಚುನಾವಣೆಯಲ್ಲಿ ಹಣ ಹೆಂಡ ಹಂಚುವ ಮೂಲಕ ಮತದಾರರನ್ನು ಬ್ರಷ್ಟರಾನ್ನಾಗಿಸುತಿದ್ದಾರೆ. ಆದರೆ ನಮ್ಮ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷವು ಚುನಾವಣೆಯಲ್ಲಿ ಮತದಾರರಿಗೆ ಯಾವುದೆ ಆಮೀಷ ಒಡ್ಡದೆ ಅವರಿಂದಲೆ ಹಣ ಪಡೆದು ನೇರವಾಗಿ ಚುನಾವಣೆಗೆ ಮುಂದಾಗುತ್ತೇವೆ ಎಂದರು.

ಈ ಹಿನ್ನೆಲೆಯಲ್ಲಿ ಬೇಲೂರು ಪುರಸಭೆ ಚುನಾವಣೆಗೆ ನಿಷ್ಠಾವಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದತೆ ಕೈಗೊಂಡಿದ್ದು ಈಗಾಗಲೆ ಯುವಕರನ್ನು ನಮ್ಮ ಸಮೀತಿಯತ್ತ ಸೆಳೆಯುವ ಕೆಲಸ ಮಾಡಲಾಗುತಿದ್ದು ಈ ಮೂಲಕ ಬ್ರಷ್ಟರನ್ನು ಮಟ್ಟ ಹಾಕುವ ಕೆಲಸ ಮಾಡುವುದಕ್ಕಾಗಿ ಪಟ್ಟಣದ ಜನತೆ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷಕ್ಕೆ ಮತ ಹಾಕಬೇಕು ಎಂದು ತಿಳಿಸಿದರು.

ಹಾಸನ ಜಿಲ್ಲಾ ಸಂಚಾಲಕ ತೇಜಸ್‍ಕುಮಾರ್ ಮಾತನಾಡಿ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷವು ಈಗಾಗಲೆ ರಾಜ್ಯದ ಕೆಲ ಚುನಾವಣೆಯಲ್ಲಿ ಗಮನ ಸೆಳೆದಿದ್ದು ಈಗ ಬೇಲೂರು ಪುರಸಭೆ ಚುನಾವಣೆಯಲ್ಲಿ ಜನರ ಆಶೋತ್ತರಗಳಿಗೆ ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿಯೆ ನಮ್ಮ ಪಕ್ಷದ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ಪುರಸಭೆಯ ಎಲ್ಲ ವಾರ್ಡ್‍ಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದರು.ಸುದ್ದಿಗೋಷ್ಟಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಂಚಾಲಕ ರಾಮ್ ಪ್ರಸಾದ್, ಮುಖಂಡರಾದ ಸಚಿನ್, ಹರ್ಷವರ್ಧನ್ ಹಾಜರಿದ್ದರು.

Facebook Comments