ಶ್ರೀ ಚನ್ನಕೇಶವಸ್ವಾಮಿಗೆ ಅರುಣ ಸ್ಪರ್ಶ: ಪುಳಕಿತಗೊಂಡ ಭಕ್ತರು

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಏ.23- ವಿಶ್ವ ವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ವರ್ಷಕ್ಕೊಮ್ಮೆ ಶ್ರೀ ಚನ್ನಕೇಶವಸ್ವಾಮಿ ದೇವರ ವಿಗ್ರಹದ ಮೇಲೆ ಬೀಳುವ ಸೂರ್ಯರಶ್ಮಿ ಕಿರಣಗಳು ಬೆಳಗ್ಗೆ 6 ಗಂಟೆ 30 ನಿಮಿಷದಿಂದ 6-42 ರವರೆಗೆ ಶ್ರೀ ಚನ್ನಕೇಶವಸ್ವಾಮಿ ದೇವರ ಪಾದದ ಮೇಲೆ ಬಿದ್ದು ಭಕ್ತರನ್ನು ಪುಳಕಿತಗೊಳಿಸಿತು.

ಸೂರ್ಯರಶ್ಮಿ ಪ್ರವೇಶವು ಸೌರಮಾನ ಕಾಲಗಣನೆಯ ಪ್ರಕಾರ ಮೇಷ ರಾಶಿಯ 9ನೇ ದಿನ ದೇಗುಲದ ನೇರ ಎದುರಿಗೆ ಬ್ರಹ್ಮಸೂತ್ರದ ನೇರಕ್ಕೆ ಸೂರ್ಯೋದಯವಾಗುತ್ತದೆ. ಆದ್ದರಿಂದ ವರ್ಷದಲ್ಲಿ ಒಂದು ದಿನ ಮಾತ್ರ ಸೂರ್ಯೋತ್ಸವವೆಂದು ಆಚರಿಸಲಾಗುತ್ತದೆ.

ಸೂರ್ಯೋತ್ಸವದ ಅಂಗವಾಗಿ ನಿನ್ನೆ ಮುಂಜಾನೆಯಿಂದಲೆ ಗರ್ಭಗುಡಿಯನ್ನು ತೆರೆಯಲಾಗಿತ್ತು. ಸೂರ್ಯರಶ್ಮಿಯೂ ಪ್ರಕಾಶಮಾನವಾಗಿ ನವರಂಗ ಮಂಟಪದ ಮೂಲಕ ಪ್ರವೇಶಿಸಿ ಶ್ರೀಚನ್ನಕೇಶವಸ್ವಾಮಿ ದೇವರ ಉತ್ಸವ ಮೂರ್ತಿ ಹಾಗೂ ಚನ್ನಕೇಶವಸ್ವಾಮಿ ಮೂರ್ತಿಯ ಪಾದದ ಮೇಲೆ ನೇರವಾಗಿ ಬಿದ್ದಿದ್ದು ವಿಶೇಷವಾಗಿತ್ತು.

ಸೂರ್ಯೋದಯದ ನಂತರ 6 ಗಂಟೆ 30ರಿಂದ 6-42ರವರೆಗೆ ಗವಾಕ್ಷಿ ಮೂಲಕ ಸೂರ್ಯನ ಕಿರಣ ಶ್ರೀ ಚನ್ನಕೇಶವ ಸ್ವಾಮಿಯ ಉತ್ಸವಮೂರ್ತಿಯ ಮೇಲೆ ಬಿತ್ತು. ನಂತರ 6.18 ರವರಗೆ ನಿಮಿಷದವರಗೆ ಕೆಂಪು ಬಣ್ಣದ ಮೂಲಕ ಸೂರ್ಯರಶ್ಮಿ ಪ್ರಸರಸಿತು. 6.20ರ ನಂತರ ಹಂತ ಹಂತವಾಗಿ ಕಿರಣಗಳು ಕ್ಷೀಣಿಸಿತು. ಈ ಸೂರ್ಯರಶ್ಮಿಕಿರಣ ಸ್ಪರ್ಶ ಕುತೂಹಲಕರ ಖಗೋಳ ವಿದ್ಯಾಮಾನವು ವೀಕ್ಷಕ ಭಕ್ತರನ್ನು ಪುಳುಕಿತಗೊಳಿಸಿತು.

ಸಂಶೋಧಕ ಡಾ.ಶ್ರೀವತ್ಸವ.ಎಸ್.ವಟಿ ಅವರು ಸೂರ್ಯರಶ್ಮಿ ಕುರಿತು ಮಾತನಾಡಿ, ವರ್ಷಕ್ಕೊಂದು ಬಾರಿ ನೇರವಾಗಿ ದೇವರ ಪಾದದ ಮೇಲೆ ಬೀಳುವುದು ದೇವಾಲಯ ನಿರ್ಮಾಣ ಆರಂಭದಿಂದ ಇದೆ. ಆದರೆ ಈ ಬಾರಿ ಜಾತ್ರೆಯ ಹಿಂದಿನ ದಿನ ಸೂರ್ಯರಶ್ಮಿ ಪ್ರಜ್ವಲಿಸಿರುವುದು ವಿಶೇಷವಾಗಿದೆ ಎಂದರು.

ಸೂರ್ಯನು ತನ್ನ ಅಯನ ಚಲನೆಯ ಕಾರಣ ವರ್ಷದಲ್ಲಿ 6 ತಿಂಗಳು ಉತ್ತರಕ್ಕೂ 6 ತಿಂಗಳು ದಕ್ಷಿಣಕ್ಕೂ ಚಲಿಸುತ್ತಾನೆ. ಇದರಿಂದ ಪ್ರತಿನಿತ್ಯ ಬೇರೆ ದಿಕ್ಕುಗಳಲ್ಲಿ ಸೂರ್ಯೋದಯ ಆಗಲಿದೆ. ಬೇಲೂರು ಶ್ರೀಚನ್ನಕೇಶವ ದೇವಾಲಯ ಭೂಮಧ್ಯೆ ರೇಖೆಗೆ 8 ಡಿಗ್ರಿಯಷ್ಟು ಉತ್ತರಕ್ಕೆ ಇರುವುದರಿಂದ ಬ್ರಹ್ಮಸೂತ್ರ ರೇಖೆಗಳು ನೇರವಾಗಿ ಪ್ರವೇಶಿಸಲಿದೆ.

ಸೂರ್ಯ ಮೇಲೆ ಹೋದಂತೆ ಬಾಗಿಲು ಅಡ್ಡ ಬರುವುದರಿಂದ ಸ್ವಲ್ಪ ಸಮಯ ಸೂರ್ಯಕಿರಣ ಬೀಳುವುದಿಲ್ಲ. ನಂತರ ಮೊದಲ ಕಿಟಕಿಯ ಮೂಲಕ ಚಿನ್ನದ ಬಣ್ಣದ ಕಿರಣಗಳು ದೇವರ ಮೇಲೆ ಬೀಳುತ್ತದೆ. ನಂತರ ಸೂರ್ಯ ಮೇಲೆ ಹೋಗುವುದರಿಂದ ದೇವಾಲಯದ ಪೂರ್ವ ದಿಕ್ಕಿನ ಮಹಾದ್ವಾರ ಅಡ್ಡ ಬರುವುದರಿಂದ ದೇವರ ಮಂಡಿ ಕೆಳಭಾಗಕ್ಕೆ ಮಾತ್ರ ಸೂರ್ಯಕಿರಣ ಬೀಳುತ್ತೆ.

ನಂತರ ಬೆಳಗ್ಗೆ 6-30ರ ಹೊತ್ತಿಗೆ ಬಿಸಿಲು ಚೆನ್ನಾಗಿ ಬೆಳಕಾಗಿ ಗರುಡನ ಮೇಲೆ ಬೀಳುತೆ ನಂತರ ಸೂರ್ಯನ ಕಿರಣಗಳು ಹಿಂದಕ್ಕೆ ಸರಿದು ನವರಂಗದ ಕಲ್ಲಿನ ಮೇಲೆ ಬಿದ್ದು ನವರಂಗದ ಪ್ರತಿಫಲನದಿಂದಾಗಿ ಇಡೀ ದೇವಾಲಯ ಒಳ ಆವರಣ ಹಳದಿ ಬಣ್ಣದಲ್ಲಿ ಕಾಣುತ್ತದೆ. 6-43ರ ಸಮಯಕ್ಕೆ ಸೂರ್ಯನ ಕಿರಣಗಳು ಪ್ರವೇಶದ್ವಾರದಿಂದ ಆಚೆ ಬರುವುದನ್ನು ಕಂಡು ಭಕ್ತು ಪುಳಕಿತರಾದರು.

ಪ್ರದಾನ ಅರ್ಚಕ ಕೃಷ್ಣಸ್ವಾಮಿಭಟ್ಟರ್ ವಿಶೇಷ ಪೂಜೆ ಸಲ್ಲಿಸಿ ಹಾಲಿನ ನೈವೇದ್ಯ ಅರ್ಪಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿದರು.

Facebook Comments