ಸಂಡೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಳ್ಳಿಗಳತ್ತ ಮುಖಮಾಡಿದ ಬೆಂಗಳೂರಿಗರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.25- ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಸಂಡೆ ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ಜನ ಇಂದಿನಿಂದಲೇ ಜನರು ತಮ್ಮ ಸ್ವ ಗ್ರಾಮಗಳತ್ತ ಮುಖ ಮಾಡಿದ್ದಾರೆ.

ಹೀಗಾಗಿ ತುಮಕೂರು ರಸ್ತೆ ನವಯುಗ ಟೋಲ್‍ನಲ್ಲಿ ವಾಹನ ದಟ್ಟಣೆ ಕಂಡುಬಂದಿದೆ.ಕಳೆದ ಲಾಕ್‍ಡೌನ್ ವೇಳೆಯಲ್ಲೂ ಬೆಂಗಳೂರು ಬಿಟ್ಟು ಸಾವಿರಾರು ಜನ ಊರಿಗೆ ಹೋಗಿದ್ದರು.

ಇಂದು ಕೂಡ ಕೆಲವರು ಕಾರು, ಬೈಕ್‍ಗಳಲ್ಲಿ ಹಾಗೂ ಬಸ್, ಲಾರಿಗಳಲ್ಲಿ ಹೋಗುತ್ತಿದ್ದಾರೆ. ಕೆಲವರು ಮನೆಯಲ್ಲಿರುವ ಪೀಠೋಪಕರಣಗಳ ಜತೆಗೆ ಬೆಂಗಳೂರು ತೊರೆಯುತ್ತಿದ್ದಾರೆ.

ಒಂದು ವಾರದ ಲಾಕ್‍ಡೌನ್ ಬಳಿಕ ಪ್ರತಿ ಭಾನುವಾರ ಲಾಕ್‍ಡೌನ್ ಮಾಡುವಂತೆ ಸರ್ಕಾರ ಸೂಚಿಸಿತ್ತು. ಹೀಗಾಗಿ ಸರ್ಕಾರದ ಮಾರ್ಗಸೂಚಿಯಂತೆ ಸಂಡೆ ಲಾಕ್‍ಡೌನ್‍ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Facebook Comments

Sri Raghav

Admin