ಮೆಜೆಸ್ಟಿಕ್ ನಲ್ಲಿದ್ದ ಓಡಾಡುತ್ತಿದ್ದ ವಿದೇಶದಿಂದ ಬಂದ ವ್ಯಕ್ತಿ ಆಸ್ಪತ್ರೆಗೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.22- ವಿದೇಶದಿಂದ ಬಂದವರು ಮೊದಲು ತವರಿನಲ್ಲಿ ಮೊದಲು ಹೆಮ್ಮೆಯಿಂದ ಸಂಚರಿಸುತ್ತಿದ್ದರು, ಅವರ ನಡವಳಿಕೆಯ ಗತ್ತೆ ಬದಲಾಗಿರುತ್ತಿತ್ತು. ಈಗ ವಿದೇಶದಿಂದ ಬಂದವರು ಸಂಪೂರ್ಣವಾಗಿ ಅಸ್ಪಶ್ಯೃರಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಫಾರಿನ್ ರಿಟರ್ನ್ ಗಳನ್ನು ಕಂಡರೆ ಹಿಡಿದು ಆಂಬ್ಯುಲೆನ್ಸ್ ನಲ್ಲಿ ತುಂಬಿ ಆಸ್ಪತ್ರೆಗೆ ಸಾಗ ಹಾಕಲಾಗುತ್ತಿದೆ.

ವಿದೇಶದಿಂದ ಆಗಮಿಸಿದ ವ್ಯಕ್ತಿ ಇಂದು ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಸಂಚರಿಸುತ್ತಿದ್ದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತುರ್ತು ಸಹಾಯವಾಣಿಗೆ ಕರೆ ಮಾಡಿ 108 ಆಂಬ್ಯುಲೇನ್ಸ್ ನನ್ನು ಕರೆಸಿ ವಿದೇಶದಿಂದ ವಾಪಾಸ್ ಆದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಚೈನೈ ಮೂಲದ ಯುವಕ ಮೆಜೆಸ್ಟಿಕ್ಗೆ ಬಂದು ಬಸ್ ಗಾಗಿ ಕಾಯುತ್ತಿದ್ದ. ಜನತಾ ಕರ್ಪ್ಯೂ ಇರುವ ಹಿನ್ನೆಲೆಯಲ್ಲಿ ಬಸ್ಗಳು ಇರಲಿಲ್ಲ. ಹಾಗಾಗಿ ಹೊಟೇಲ್ನಲ್ಲಿ ರೂಂ ಪಡೆಯಲು ಪ್ರಯತ್ನಿಸಿದ್ದ. ಆತನ ಮುಂಗೈ ಮೇಲೆ ವಿದೇಶದಿಂದ ಬಂದಿದ್ದ ಬಗ್ಗೆ ಸ್ಟಾಂಪ್ ಲಗತ್ತಿಸಿದ್ದರಿಂದ ಯಾವ ಹೊಟೇಲ್ ಕೂಡ ಆತನಿಗೆ ರೂಂ ಕೊಟ್ಟಿರಲಿಲ್ಲ.

ದಿಕ್ಕು ಕಾಣದ ವ್ಯಕ್ತಿ ಮತ್ತೆ ಬಸ್ ನಿರೀಕ್ಷೆಯಲ್ಲಿ ಮೆಜೆಸ್ಟಿಕ್ಗೆ ಬಂದಿದ್ದ. ಆತನ ಸಂಚಾರ ಗಮನಿಸಿದ ಸಾರ್ವಜನಿಕರು ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ 108 ಆಂಬ್ಯುಲೇನ್ಸ್ ಸಿಬ್ಬಂದಿ ವ್ಯಕ್ತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡೆ ವಾಹನ ಹತ್ತಿಸಿಕೊಂಡರು. ಕೂಡಲೇ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಪ್ರತ್ಯೇಕ ನಿಗಾ ವಾರ್ಡ್ಗೆ ಸಾಗಿಸಲಾಗಿದೆ.

# ಮಂಡ್ಯದಲ್ಲೂ ಆತಂಕ:
ಕಳೆದ 3-4 ದಿನಗಳ ಹಿಂದೆ ಕೊಡಗಿನ ವ್ಯಕ್ತಿಯೊಬ್ಬರಿಗೆ ಕೊರೊನಾ ಇರುವುದು ಖಚಿತವಾಗಿದೆ. ಆ ವ್ಯಕ್ತಿ ಬೆಂಗಳೂರಿನಿಂದ ಕೊಡಗಿನ ವರೆಗೆ ಪ್ರಯಾಣಿಸಿದ್ದ. ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯ ಬಳಿ ಆತ ಅಂಗಡಿಯೊಂದರಲ್ಲಿ ಟೀ ಕುಡಿದಿದ್ದ. ರೋಗಿಯಿಂದ ಈ ಮಾಹಿತಿ ಪಡೆದ ಸರ್ಕಾರ ಕೂಡಲೇ ಟೀ ಅಂಗಡಿಯ ಮಾಲೀಕನನ್ನು ಕೂಡ ತೀವ್ರ ನಿಗಾ ಘಟಕದಲ್ಲಿ ಇರಿಸಿದೆ.

ಎರಡು ದಿನಗಳ ಹಿಂದೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ವಿದೇಶದಿಂದ ಯುವತಿಯೊಬ್ಬರು ಬಸ್ ಹತ್ತಲು ಬಂದಾಗ ಸಹ ಪ್ರಯಾಣಿಕರು ವಿರೋಧ ವ್ಯಕ್ತ ಪಡಿಸಿದರು. ಕೊನೆಗೆ ಆ ಯುವತಿಯನ್ನು ಆಂಬ್ಯುಲೆನ್ಸ್ನಲ್ಲಿ ಮನೆಗೆ ಸಾಗಿಸಿ ಪ್ರತ್ಯೇಕವಾಗಿರುವ ವ್ಯವಸ್ಥೆ ಮಾಡಲಾಗಿತ್ತು.

ಈಗ ವಿದೇಶದಿಂದ ಬಂದವರೆಂದರೆ ಗೌರವ ಇರಲಿ, ಮಾತನಾಡಿಸಲು ಜನ ಹೆದರುತ್ತಿದ್ದಾರೆ. ಕೊರೊನಾ ರಾಜ್ಯದಲ್ಲಿ ಹರಡಲು ವಿದೇಶಿ ಪ್ರಯಾಣಿಕರೇ ಪ್ರಮುಖರಾಗಿರುವುದು ಆತಂಕಕಾರಿಯಾಗಿದೆ.

Facebook Comments

Sri Raghav

Admin