ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿ ಜೊತೆ ಪ್ರಧಾನಿ ಮೋದಿ ಸಂವಾದ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.27-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಯಾನನಗರದ ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿ(ಬಿಎಸ್‍ಎಸ್)ಯ ಕೆಲವು ಸದಸ್ಯರೊಂದಿಗೆ ಕಥೆ ಹೇಳುವ ಮಹತ್ವದ ಸಂಗತಿ ಕುರಿತು ಸಂವಾದ ನಡೆಸಿದ್ದಾರೆ.

ಇಂದಿನ 69ನೆ ಮನ್ ಕಿ ಬಾತ್ ಬಾನುಲಿ ಪ್ರಸಾರದಲ್ಲಿ ಅವರು ಬಿಎಸ್‍ಎಸ್‍ನ ಕೆಲವು ಸದಸ್ಯರೊಂದಿಗೆ ಸಂವಾದ ನಡೆಸಿ. ಕಥೆ ಹೇಳುವ ಸಂಸ್ಕøತಿಯನ್ನು ಈಗಲೂ ಮುಂದುವರಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಕಥೆ ಹೇಳುವುದು ನಮ್ಮ ನಾಗರಿಕತೆಯಷ್ಟೇ ಪ್ರಾಚೀನವಾದುದು. ಅದರೆ ಇಂದು ಕಥೆ ಹೇಳುವಿಕೆ ಕಡಿಮೆಯಾಗುತ್ತಿದ್ದರೂ, ಇದಕ್ಕೆ ಹೊಸ ಸ್ಪರ್ಶ ಲಭಿಸಿದೆ. ವಿಜ್ಞಾನಕ್ಕೆ ಸಂಬಂಸಿದ ಕಥೆಗಳು ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿವೆ ಎಂದು ಅವರು ಹೇಳಿದರು.

ಭಾರತವು ಕಥೆ ಹೇಳುವ ವೈಭವ ಸಂಸ್ಕøತಿಯನ್ನು ಹೊಂದಿದೆ. ಈಗಲೂ ಭಾರತದ ಅನೇಕ ಮಂದಿ ಕಥೆ ಹೇಳುವ ಪ್ರವೃತ್ತಿಯನ್ನು ಜನಪ್ರಿಯಗೊಳಿಸಿದ್ದಾರೆ ಎಂದು ಪ್ರಧಾನಿ ತಿಳಿಸಿದರು.  ಕಥೆ ಹೇಳುವುದರಿಂದ ಅದರಲ್ಲಿಯೂ ನೀತಿ ಕಥೆಗಳು ಎಲ್ಲರನ್ನೂ ಅರಿವು ಮೂಡಿಸಲು ನೆರವಾಗುತ್ತದೆ.

ದೇಶದ ಪ್ರತಿ ಕುಟುಂಬಗಳು ಕಥೆಗಳ ವಿನಿಯಮಕ್ಕೆ ಕೆಲಕಾಲವನ್ನು ಮೀಸಲಿಡಬೇಕೆಂದು ಸಲಹೆ ಮಾಡಿದ ಅವರು, ಇದು ಪ್ರತಿಯೊಬ್ಬರಿಗೂ ಅದ್ಭುತ ಅನುಭನ ನೀಡುತ್ತದೆ ಎಂದು ತಿಳಿಸಿದರು.

Facebook Comments

Sri Raghav

Admin