ಶ್ವಾನ ಚಟುವಟಿಕೆ ಉದ್ಯಾನವನಕ್ಕೆ ಭಾಸ್ಕರ್‌ರಾವ್ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 26-ರಾಜ್ಯ ಶಿಸ್ತು ಹಾಗೂ ಸುರಕ್ಷಿತವಾಗಿ ಇರುವಲ್ಲಿ ಪೊಲೀಸ್ ಇಲಾಖೆಯ ಶ್ವಾನಗಳ ಪಾತ್ರ ಪ್ರಮುಖವಾದದ್ದು. ಈ ನಿಟ್ಟಿನಲ್ಲಿ ನಗರದ ಆಡುಗೋಡಿಯ ಸಿಎಆರ್ ಕೇಂದ್ರದಲ್ಲಿ ಶ್ವಾನ ಚಟುವಟಿಕೆಯ ಉದ್ಯಾನವನವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇಂದು ಉದ್ಘಾಟಿಸಿದರು.

ಈ ಶ್ವಾನ ಚಟುವಟಿಕೆಯ ಪಾರ್ಕ್ ನಿರ್ಮಾಣಕ್ಕೆ ಹ್ಯಾಂಡ್ಲರ್‍ಗಳಾದ ಅಶೋಕ್ ರಾಥೋಡ್, ಜಿತೇಂದರ್ ರಾಥೋಡ್, ರವಿ ಬಳೂದ್, ರವಿ ಬಂಡಾರಿ ಸೇರಿದಂತೆ ಮತ್ತಿತರರು ಹೊಸ ತರಬೇತಿ ವಿಧಾನಗಳನ್ನು ಕಲಿತುಕೊಂಡು ಅಪಾರ ಕೊಡುಗೆ ನೀಡಿದ್ದಾರೆ.

1968 ನೇ ಇಸವಿಯಲ್ಲಿ ಡಿವೈಎಸ್ಪಿ ವಿಲಿಯಮ್ಸ್ ಎಂಬುವರು ಪ್ರಾರಂಭಿಸಿದ ಶ್ವಾನ ಇಲಾಖೆ, ಸಿಎಆರ್ ಸೌತ್ ಬೆಂಗಳೂರು ಕರ್ನಾಟಕ ಪೆÇಲೀಸ್ ಅಡಿಯಲ್ಲಿ ಇಂದು 60 ಕ್ಕೂ ಹೆಚ್ಚು ಮಾದಕ ಹಾಗೂ ಸ್ಪೋಟಕ ವಸ್ತುಗಳನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದೆ. ಕ್ರೈಂ ಐಡೆಂಟಿಫಿಕೇಷನ್ ಹಾಗೂ ಇತರ ಡಿಸಿಪ್ಲಿನ್‍ಗಳನ್ನು ಶ್ವಾನಗಳು ಚೆನ್ನಾಗಿ ಕಲಿತು ನಮ್ಮ ರಾಜ್ಯ ಶಿಸ್ತು ಹಾಗೂ ಸುರಕ್ಷತೆಯಿಂದಿರಲು ಪ್ರಮುಖ ಪಾತ್ರ ವಹಿಸಿವೆ.

ಈ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಟಿ ಸುನೀಲ್ ಕುಮಾರ್ ಅವರು ಶ್ವಾನ ಮನೋ ವೈದ್ಯರಾದ ಡಾಗ್ ಗುರು ಅಮೃತ್ ಅವರನ್ನು ನೇಮಕ ಮಾಡಿದ್ದರು. ಇದರಿಂದ ಶ್ವಾನಗಳಿಗೆ ಆಟ, ಊಟದ ತರಬೇತಿ ಕೊಟ್ಟು ಪಾಸಿಟಿವ್ ರಿ ಇನ್ಪೋರ್ಸ್‍ಮೆಂಟ್ ಎಂಬ ಶೈಲಿಯ ತರಬೇತಿಯಲ್ಲಿ ಶ್ವಾನಗಳಿಗೆ ಕಡಿಮೆ ಸಮಯದಲ್ಲಿ, ಕಡಿಮೆ ಖರ್ಚಿನಿಂದ ತರಬೇತಿ ನೀಡಲು ಸಾಧ್ಯವಾಗಿದೆ.

ಡಿಸಿಪಿ ಯೋಗೇಶ್ ಹಾಗೂ ಅಮೇರಿಕಾನಲ್ಲಿ ತರಬೇತಿ ಹೊಂದಿ ಬಂದಿರುವ ಎಸಿಪಿ ನಿಂಗಾರೆಡ್ಡಿ ಪಾಟೀಲ್ ಅವರು ಈಗಿನ ಶ್ವಾನದಳವನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಆದೇಶದಂತೆ ಎಲ್ಲಾ ರೀತಿಯಲ್ಲೂ ಉನ್ನತೀಕರಣಗೊಳಿಸುತ್ತಿದ್ದಾರೆ. ಬೆಲ್ಜಿಯಂ ಶೆಪರ್ಡ್ ಎಂಬ ಒಂದು ತಳಿ ಪ್ರಪಂಚದ ಅತಿ ಬುದ್ದಿವಂತ ಪೊಲೀಸ್ ನಾಯಿ ಎಂದು ಹೆಸರು ಪಡೆದಿದೆ. ಒಸಾಮ ಬಿನ್ ಲಾಡೇನ್ ಹಾಗೂ ಹಲವಾರು ಪ್ರಪಂಚ ಪ್ರಸಿದ್ದಿ ಉಳ್ಳ ಭಯೋತ್ಪಾದಕರನ್ನು ಕಂಡು ಹಿಡಿದು ಮಟ್ಟ ಹಾಕಲು ಸಹಾಯ ಮಾಡಿದ್ದುಂಟು.

ಹೆಮ್ಮೆಯ ವಿಷಯ ಏನೆಂದರೆ ದೇಶದ ಕೆಲವೇ ರಾಜ್ಯಗಳಲ್ಲಿ ನಮ್ಮ ರಾಜ್ಯ ಮುಂದೆ ನಿಂತು ಈ ಶ್ವಾನಗಳನ್ನು ನಮ್ಮ ಪೊಲೀಸ್ ಶ್ವಾನ ದಳಕ್ಕೆ ಸೇರಿಸಿಕೊಂಡಿದ್ದಲ್ಲದೆ, ಡಾಗ್ ಗುರು ಅಮೃತ್ ಅವರ ಸಲಹೆಯಂತೆ ಅತಿ ಶೀಘ್ರದಲ್ಲಿ ಇವುಗಳನ್ನು ಮಾದಕ ಹಾಗೂ ಸ್ಪೋಟಕ ವಸ್ತುಗಳನ್ನು ಪತ್ತೆ ಹಚ್ಚಲು, ಟೆರರಿಸ್ಟ್‍ಗಳನ್ನು ಮಟ್ಟ ಹಾಕಲು ಅಸಾಲ್ಟ್ ಟ್ರೈನಿಂಗ್ ಗಳಿಗೆ ತರಬೇತಿ ಹೊಂದಿದ್ದಾರೆ.

ಇದನ್ನು ಗಮನಿಸಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆಸಕ್ತಿಯಿಂದ ಶ್ವಾನ ಪಡೆಯನ್ನು ಇನ್ನಷ್ಟು ಬಲಪಡಿಸಲು 50ಕ್ಕೂ ಹೆಚ್ಚು ನಾಯಿಗಳೂ ಹಾಗೂ ಅವುಗಳಿಗೆ ಬೇಕಾದ ತರಬೇತಿ ಪದಾರ್ಥಗಳು ಮತ್ತು ವಸತಿಗೆ ಕೆನಲ್‍ಗಳನ್ನು ಸ್ಥಾಪಿಸಲು 2.5 ಕೋಟಿ ಅನುದಾನ ಪಡೆದಿರುತ್ತಾರೆ.  ಇಂದು ಇದರ ಮೊದಲ ಹೆಜ್ಜೆಯಾಗಿ ಆಯುಕ್ತರಾದ ಭಾಸ್ಕರ್ ರಾವ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಶ್ವಾನ ಚಟುವಟಿಕೆಯ ಉದ್ಯಾವನವನ್ನು ಉದ್ಘಾಟನೆ ಮಾಡಿದ್ದಾರೆ.

ಶ್ವಾನ ಚಟುವಟಿಕೆ ಉದ್ಯಾನವನ: ಶ್ವಾನಗಳಿಗೆ ಚಟುವಟಿಕೆ ಹಾಗೂ ಒಂದು ಉದ್ಯಾನವನ ಇದ್ದಲ್ಲಿ ಸಣ್ಣ ವಯಸ್ಸಿನಿಂದ ಆಟದಿಂದ ಪಾಠ ಕಲಿಯುವುದಕ್ಕೆ ಅತಿ ಶ್ರೇಷ್ಟವಾದ ಶೈಲಿ. ಟನಲ್ – ಸಣ್ಣ ಸುರಂಗದಲ್ಲಿ ಹೋಗಿ ಒಂದು ಬಾಂಬ್ ಹಾಗೂ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವುದರಿಂದ, ಜಂಪ್ ಮಾಡಿ ಒಂದು ಬಸ್ ಅಥವಾ ಟ್ರೈನ್ ಕಿಟಕಿ ಒಳಗೆ ಹೋಗಿ ಅಪರಾಧಿಗಳನ್ನು ಹಿಡಿಯುವುದಲ್ಲದೆ, ಆರು ಅಥವಾ 10 ಅಡಿ ಎತ್ತರದಲ್ಲಿರುವ ಜಾರುವ ಜಾಗಗಳಲ್ಲೂ ತಮ್ಮನ್ನು ತಾವೇ ಬ್ಯಾಲೆನ್ಸ್ ಮಾಡಿಕೊಂಡು ನಡೆಯುವುದು ಹೇಗೆ, ಜನ ಸಾಮಾನ್ಯರ ಕಾಲಿನ ನಡುವೆ ಹಾವಿನಂತೆ ತೆವಳುವುದು ಹೇಗೆ ಎನ್ನುವುದನ್ನು ಕಲಿಯಲು ಅತಿ ಮುಖ್ಯವಾದ ಪ್ರಾಂಗಣ ಈ ಚಟುವಟಿಕೆಯ ಉದ್ಯಾನವನದ್ದು.

ಇದರಲ್ಲಿ ಅವುಗಳಿಗೆ ತರಬೇತಿ ನೀಡಿದ ನಂತರ ಆಟ ಆಡುತ್ತಿದ್ದ ಒಂದು ಶ್ವಾನ ಕೆಲಸ ಮಾಡುವಂತ ಒಬ್ಬ ಪೊಲೀಸ್ ಶ್ವಾನ ಆಗುವುದಕ್ಕೆ ಸಿದ್ದವಾಗಿರುತ್ತದೆ. ತರಬೇತಿಗೆ ಬಹಳ ಮುಖ್ಯವಾದ ಪ್ರಾಂಗಣ ಇದಾಗಿದೆ.  ಮುಂದಿನ 50 ನಾಯಿಗಳಲ್ಲಿ ಜೆರ್ಮನ್ ಶೆಪರ್ಡ್, ಬೆಲ್ಜಿಯಂ ಶೆಪರ್ಡ್, ಲಾಬ್ರೆಡಾರ್, ಗೋಲ್ಡನ್ ರಿಟ್ರೀವರ್ ಹಾಗೂ ಡಾಬೆರ್‍ಮೆನ್ ಜಾತಿಯ ನಾಯಿಗಳನ್ನು ಡಾಗ್ ಗುರು ಅಮೃತ್ ಅವರ ಸಲಹೆಯಂತೆ ಅತಿ ಶೀಘ್ರದಲ್ಲಿ ಅವಶ್ಯಕತೆವುಳ್ಳ ಕೆಲಸ ಕಾರ್ಯಗಳಿಗೆ ತರಬೇತಿ ನೀಡಿ ನಮ್ಮ ರಾಜ್ಯ ಹಾಗೂ ನಾಡನ್ನು ರಕ್ಷಿಸಲು ನೇಮಿಸಲಿದ್ದಾರೆ.

ಆಯುಕ್ತರಾದ ಭಾಸ್ಕರ್ ರಾವ್ ಅವರು ಬೆಂಗಳೂರು ದಕ್ಷಿಣ ಡಿಸಿಪಿ ರೋಹಿಣಿ ಸಪೆಟ್ ಅವರ ನೇತೃತ್ವದಲ್ಲಿ ಕೆಲವು ಭಾರತೀಯ ಬೀದಿ ನಾಯಿಗಳ ಮರಿಗಳನ್ನು ಇಂಡಿಯನ್ ಡಾಗ್ಸ್ ಎಂದು ಗುರುತಿಸಿ ಅವುಗಳಿಗೆ ಡಾಗ್ ಗುರು ಅಮೃತ್ ಹಾಗೂ ಎಸಿಪಿ ನಿಂಗಾರೆಡ್ಡಿ ಪಾಟೀಲ್ ಅವರ ಸಹಾಯದಿಂದ ಪೊಲೀಸ್ ಕಾರ್ಯಗಳಿಗೆ ತರಬೇತಿ ನೀಡಿ, ಇಂತಹ ದೇಸಿಯ ತಳಿ ಶ್ವಾನಗಳೂ ಕೂಡಾ ಸರಿಯಾದ ತರಬೇತಿಯಿಂದ ನಮ್ಮ ದೇಶ ಹಾಗೂ ರಾಜ್ಯವನ್ನು ಕಾಪಾಡಬಲ್ಲವು ಎಂದು ನಿರೂಪಿಸಲು ಹೊರಟಿದ್ದಾರೆ.

Facebook Comments