ಬೆಂಗಳೂರಿನಲ್ಲಿ ಕೆರೆಗಳ ಸಮೀಕ್ಷಾ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.17- ಸುಪ್ರೀಂಕೋರ್ಟ್‍ನ ಹಸಿರು ನ್ಯಾಯಾಧೀಕರಣ ಪೀಠದ ನೇತೃತ್ವದಲ್ಲಿ ಬೆಂಗಳೂರಿನಲ್ಲಿರುವ ಕೆರೆಗಳ ಸಮೀಕ್ಷಾ ಅಭಿಯಾನ ಆರಂಭಗೊಂಡಿದೆ.ಜೂ.15ರಿಂದ 20ರವರೆಗೆ ಬೆಂಗಳೂರಿನ ಉತ್ತರ, ದಕ್ಷಿಣ, ಆನೇಕಲ್ , ಪೂರ್ವ ತಾಲ್ಲೂಕುಗಳ 16 ಹೋಬಳಿ ವ್ಯಾಪ್ತಿಯಲ್ಲಿ 357 ಕೆರೆಗಳು ಸಮೀಕ್ಷೆಗೆ ಒಳಪಡಲಿವೆ.

ಕೆರೆಗಳ ನೀರಿನ ಪ್ರಮಾಣ, ನೀರಿನ ಮಟ್ಟ, ಜಲಚರಗಳು, ಮೀನುಗಾರಿಕೆ ವಿವರ, ಕೆರೆ ಬದಿಯ ಮಣ್ಣಿನ ಏರಿ, ಹೂಳು, ಒತ್ತುವರಿ ವಿವರಗಳ ಮಾಹಿತಿ ಸೇರಿದಂತೆ ಸಮಗ್ರ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಲಾಗುತ್ತಿದೆ ಎಂದು ಬೆಂ.ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ. ಮರಿಸ್ವಾಮಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 421 ಕೆರೆಗಳಿದ್ದವು. ಅವುಗಳ ಪೈಕಿ 21 ಎರೆಗಳನ್ನು ಪುರಸಭೆ ವ್ಯಾಪ್ತಿಗೆ ಹಸ್ತಾಂತರಿಸಲಾಗಿದೆ. ಉಳಿದ 400 ಕೆರೆಗಳ ಪೈಕಿ 357 ಕೆರೆಗಳ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಧೀಕರಣ ಪೀಠಕ್ಕೆ ಮಾಹಿತಿ ನೀಡಬೇಕಿದೆ. ಹೀಗಾಗಿ ಸಮೀಕ್ಷಾ ಕಾರ್ಯಕ್ಕೆ ಹೋಬಳಿ ಮಟ್ಟದಲ್ಲಿ 16 ತಂಡಗಳನ್ನು ರಚಿಸಲಾಗಿದೆ. ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಣಾ ಅಧಿಕಾರಿಗಳು ಇರಲಿದ್ದಾರೆ.

ಆನೇಕಲ್, ಬೆಂಗಳೂರು ಉತ್ತರ, ಯಲಹಂಕ, ದಕ್ಷಿಣ, ಪೂರ್ವ ತಾಲ್ಲೂಕುಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು. ಆನೇಕಲ್, ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಪಿಆರ್‍ಇಡಿ/ ಸಹಾಯಕ ನಿರ್ದೇಶಕರು, ನರೇಗಾ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ, ಕೃಷಿ ಇಲಾಖೆಗಳ ಸಹಾಯಕ ನಿರ್ದೇಶಕರು, ಗ್ರಾಮೀಣ ನೀರು ನೈಓರ್ಮಲ್ಯ ಉಪ ವಿಭಾಗದ ಅಧಿಕಾರಿಗಳನ್ನು ತಂಡಕ್ಕೆ ನಿಯೋಜನೆ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಇಂಜನಿಯರ್‍ಗಳು ಮತ್ತಿತರರು ತಂಡದಲ್ಲಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ.

ಈಗಾಗಲೇ ಕೆಎಫ್‍ಆರ್‍ಎಸ್‍ಎಸಿ ತಯಾರಸಿರುವ ಜಲಾಮೃತ ಮೊಬೈಲ್ ಆ್ಯಪ್‍ನಲ್ಲಿ ಕೆರೆಗಳನ್ನು ಜಿಯೋ ಟ್ಯಾಗ್ ಮಾಡಲಾಗುವುದು ಹಾಗೂ ಕೆರೆಗಳ ವಸ್ತು ಸ್ಥಿತಿಯ ಛಾಯಾಚಿತ್ರಗಳನ್ನು ಕೇಂದ್ರ ಹಸಿರು  ನ್ಯಾಯಾಧೀಕರಣ ಪೀಠಕ್ಕೆ ಅಫೋಡ್ ಮಾಡಲಾಗುವುದು ಎಂದರು.

Facebook Comments