ಬೆಂಗಳೂರು : ಬಾತ್ ರೂಮ್‌ನಲ್ಲಿ ಅರೆಬೆಂದ ವ್ಯಕ್ತಿಯ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.18- ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರ ಸ್ನಾನದ ಕೊಠಡಿಯಲ್ಲಿ ಸುಟ್ಟ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.ಇಂದು ಬೆಳಗ್ಗೆ 10.30ರ ಸಮಯದಲ್ಲಿ ರಾಜಾಜಿನಗರ 5ನೇ ಬ್ಲಾಕ್, 17ನೇ ಬಿ ಕ್ರಾಸ್‍ನ ಮನೆಯೊಂದರ ಬಾತ್‍ರೂಮ್‍ನಲ್ಲಿ ಜಯಕುಮಾರ್ ಅಲಿಯಾಸ್ ದಿಲೀಪ್ ಎಂಬುವರ ಶವ ಕಂಡುಬಂದಿದೆ.

ಜಯಕುಮಾರ್ ಬಟ್ಟೆ ವ್ಯಾಪಾರಿ. ಅವರ ಮಗಳು ಮನೆಯ ಕೆಳಗಿರುವ ಸಂಬಂಧಿಕರ ಮನೆಗೆ ಹೋಗಿಬರುವಷ್ಟರಲ್ಲಿ ಸ್ನಾನದ ಮನೆಯಲ್ಲಿ ಸುಟ್ಟ ರೀತಿಯಲ್ಲಿ ತಂದೆ ಶವವಾಗಿದ್ದರು.

ಜಯಕುಮಾರ್ ಅವರ ಸಾವು ಹೇಗಾಗಿದೆ ಎಂಬುದರ ಬಗ್ಗೆ ಸದ್ಯಕ್ಕೆ ತಿಳಿದುಬಂದಿಲ್ಲ. ಶಾರ್ಟ್ ಸಕ್ರ್ಯೂಟ್‍ನಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಅವರೇ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ಪರಿಶೀಲಿಸಿದ್ದಾರೆ.  ಈ ಬಗ್ಗೆ ರಾಜಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin