ಚೇಸ್ ಮಾಡಿ ಸುಲಿಗೆಕೋರನನ್ನು ಸೆರೆ ಹಿಡಿದ ಸಾಹಸಿ ಪೊಲೀಸರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ. 28-ವ್ಯಕ್ತಿಯೊಬ್ಬರನ್ನು ಥಳಿಸಿ ಮೊಬೈಲ್ ಕಿತ್ತು ಬೈಕ್‍ನಲ್ಲಿ ಪರಾರಿ ಯಾಗುತ್ತಿದ್ದ ಇಬ್ಬರು ಸುಲಿಗೆಕೋರರ ಬೆನ್ನತ್ತಿದ ಸಂಚಾರಿ ಪೊಲೀಸರು ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿ ದ್ದಾರೆ.

ಪುಲಿಕೇಶಿನಗರ ಸಂಚಾರಿ ಠಾಣೆಯ ಕಾನ್ಸ್‍ಟೇಬಲ್ ಪರಮೇಶ್ ಹಾಗೂ ಹೆಡ್‍ಕಾನ್ಸ್‍ಟೇಬಲ್ ನಾಗೇಂದ್ರ ಸುಲಿಗೆಕೋರನನ್ನು ಬಂಸಿದ ಸಾಹಸಿ ಪೊಲೀಸರು.

ನಿನ್ನೆ ರಾತ್ರಿ ಪರಮೇಶ್ ಬಂಬೂಬಜಾರ್ ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಕ್ಟೀವಾ ಸ್ಕೂಟರ್‍ನಲ್ಲಿ ಬಂದ ಇಬ್ಬರು ಅಪರಿಚಿತರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಆತನ ಮೊಬೈಲ್ ಕಸಿದು ಬೈಕ್‍ನಲ್ಲಿ ಪರಾರಿಯಾಗುತ್ತಿದ್ದರು.

ಈ ಸಂದರ್ಭದಲ್ಲಿ ಕರ್ತವ್ಯ ಮೇಲಿದ್ದ ಸಂಚಾರಿ ಕಾನ್ಸ್‍ಟೇಬಲ್ ಪರಮೇಶ್ ಹಾಗೂ ರಾತ್ರಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಹೆಡ್‍ಕಾನ್ಸ್‍ಟೇಬಲ್ ನಾಗೇಂದ್ರ ಅವರು ಬೈಕ್ ಅನ್ನು ಚೇಸ್ ಮಾಡಿ ಆರೋಪಿಗಳಿಬ್ಬರಲ್ಲಿ ಒಬ್ಬನಾದ ಚಾಲ್ರ್ಸ್‍ನನ್ನು ಸ್ಕೂಟರ್ ಸಹಿತ ಸೆರೆಹಿಡಿದಿದ್ದಾರೆ.

ಆರೋಪಿ ಚಾಲ್ರ್ಸ್‍ನನ್ನು ಭಾರತಿನಗರ ಪೊಲೀಸ್ ಠಾಣೆಗೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ ಹಲ್ಲೆಗೊಳಗಾದ ಸತೀಶ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಭಾರತಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಂಚಾರ ದಟ್ಟಣೆ ನಿರ್ವಹಣೆ ಸಮಯದಲ್ಲೂ ಟ್ರಾಫಿಕ್ ಪೆÇಲೀಸರು ತೋರಿಸಿದ ಧೈರ್ಯ, ಸಮಯಪ್ರಜ್ಞೆ ಹಾಗೂ ಕರ್ತವ್ಯ ಪಾಲನೆಗೆ ಸಾರ್ವಜನಿಕರು ಹಾಗೂ ಹಿರಿಯ ಪೊಲೀಸ್ ಅಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin