ಮಾದಕ ವಸ್ತು ಮಾರಾಟ : ವಿದೇಶಿ ಪ್ರಜೆ ಸೇರಿದಂತೆ 15 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.26- ಮಾರಣಾಂತಿಕ ಕೋವಿಡ್‍ ಸಂದರ್ಭದಲ್ಲೂ ಮಾದಕ ವಸ್ತು ಮಾರಾಟ ಮಾಡುವ ಮತ್ತು ಅದನ್ನು ಸೇವಿಸುವ ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ವಿದೇಶಿ ಪ್ರಜೆ ಸೇರಿದಂತೆ 15 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಭಾನುವಾರ ಕಾರ್ಯಾಚರಣೆ ನಡೆಸಿದ್ದು ಮೂರು ಜನ ಮಾದಕ ವಸ್ತು ಸಾಗಾಣಿಕೆದಾರರು ಮತ್ತು 12 ಮಂದಿ ಗ್ರಾಹಕರನ್ನು ಬಂಧಿಸಿದ್ದಾರೆ. ಏಕಕಾಲಕ್ಕೆ ಹಲವಾರು ಠಾಣೆಗಳಲ್ಲಿ ಕಾರ್ಯಾಚರಣೆ ನಡೆದಿದೆ. ಬಾಣಸವಾಡಿ ಠಾಣೆಯ ಪೊಲೀಸರು ವಿದೇಶಿ ಪ್ರಜೆ ಆರ್‍.ಎಂ.ನಗರದ ನಿವಾಸಿ ಚೂಕ್ವಾಮೇಕಾ ಇಜೀಬೈ(35)ನನ್ನು ಬಂಧಿಸಿ 5 ಗ್ರಾಂ ಎಂಡಿಎಂಎ ಎಂಬ ಮಾದಕವಸ್ತುವನ್ನು ವಶ ಪಡಿಸಿಕೊಳ್ಳಲಾಗಿದೆ.

ಹೆಣ್ಣೂರು ಠಾಣೆಯ ಪೊಲೀಸರು ಹೆಣ್ಣೂರಿನ ನಿವಾಸಿ ಆನಂದ ಎಂಬಾತನ್ನು ಬಂಧಿಸಿ 600 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ಸೇವನೆ ಮಾಡುತ್ತಿದ್ದ ವಿಶಾಲ್‍ (20)ನನ್ನು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿ ಠಾಣೆಯ ಪೊಲೀಸರು ಸೈಯದ್‍ ನಾಜೀಮ್ ಎಂಬಾತನನ್ನು ಬಂಧಿಸಿ 1 ಕೆ.ಜಿ.ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ. ಹಲಸೂರು ಠಾಣೆಯ ಪೊಲೀಸರು ಕೃತಿಕ್‍ಕುಮಾರ್‍, ಕಾರ್ತಿಕ್‍ ಕುಮಾರ್, ಭಾರತಿನಗರ ಠಾಣೆಯ ಪೊಲೀಸರು ಸೈಯದ್‍ ರಜಾಕ್‍, ಅಕ್ಬರ್‍ ನವಾಜ್‍, ಡಿ.ಜೆ.ಹಳ್ಳಿಯ ಪೊಲೀಸರು ನಜೀರ್ ಅಹಮದ್‍, ಇಂದಿರಾನಗರ ಠಾಣೆಯ ಪೊಲೀಸರು ಗೌತಮ್‍, ಮೋಹನ್‍, ಶಿವಾಜಿನಗರದ ಶಶಿಕುಮಾರ್, ಅಬ್ದುಲ್‍ ರಜಾಕ್‍, ಮೊಹಮ್ಮದ್‍ ಜುನೇದ್‍ರನ್ನು ಬಂಧಿಸಲಾಗಿದೆ.

Facebook Comments

Sri Raghav

Admin