Friday, March 29, 2024
Homeಬೆಂಗಳೂರುಸಿಸಿಬಿ ಪೊಲೀಸರ ಕಾರ್ಯಾಚರಣೆ : 10 ಕೋಟಿ ಮೌಲ್ಯದ ಡ್ರಗ್ಸ್ ವಶ

ಸಿಸಿಬಿ ಪೊಲೀಸರ ಕಾರ್ಯಾಚರಣೆ : 10 ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು,ನ.10- ನಗರದ ಹೊರವಲ ಯದ ಮನೆಯೊಂದರಲ್ಲಿ ಅಡುಗೆ ಮಾಡುವ ಪ್ರೆಜರ್‍ಕುಕ್ಕರ್ ಬಳಸಿ ಸಿಂಥೆಟಿಕ್ ಡ್ರಗ್ಸ್ ತಯಾರು ಮಾಡಿ ದೇಶ-ವಿದೇಶಗಳಿಗೆ ಸರಬರಾಜು ಮಾಡಿ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 10 ಕೋಟಿ ಮೌಲ್ಯದ ಎಂಡಿಎಂಎ ಮಾದಕವಸ್ತು ಹಾಗೂ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನೈಜೀರಿಯ ದೇಶದ ಪ್ರಜೆ ಬೆಂಜಮಿನ್(40) ಬಂಧಿತ ಡ್ರಗ್ ಪೆಡ್ಲರ್. ಈತ ಬಿಸ್ನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದನು. ವೀಸಾ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ನಗರದಲ್ಲಿ ನೆಲೆಸಿದ್ದು,
ಬಟ್ಟೆ ವ್ಯಾಪಾರಿ ಎಂದು ಮನೆ ಬಾಡಿಗೆ ಪಡೆದುಕೊಂಡಿದ್ದನು.

ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದೇಶಿ ಮೂಲದ ವ್ಯಕ್ತಿಯೊಬ್ಬ ನಿಷೇಧಿತ ಮಾದಕವಸ್ತು ಮನೋಪರಿಣಾಮಕ ವಸ್ತುವಾದ ಎಂಡಿಎಂಎ ಕ್ರಿಸ್ಟಲ್ ತಯಾರು ಮಾಡಿ ನಗರ ಸೇರಿದಂತೆ ರಾಜ್ಯ ಹಾಗೂ ದೇಶವಿದೇಶಗಳಲ್ಲಿ ಇರುವ ಗಿರಾಕಿಗಳಿಗೆ ಮತ್ತು ಸಬ್ ಪೆಡ್ಲರ್‍ಗಳಿಗೆ ಸರಬರಾಜು ಹಾಗೂ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ರಾಜ್ಯದ 1673 ಸಣ್ಣ ಕೆರೆಗಳಲ್ಲಿ ಭರ್ತಿಯಾಗಿದ್ದು ಕೇವಲ 428 ಮಾತ್ರ

ತಕ್ಷಣ ಖಚಿತ ಮಾಹಿತಿ ಮೇರೆಗೆ ಕೇಂದ್ರ ಅಪರಾಧ ವಿಭಾಗದ ಮಾದಕದ್ರವ್ಯ ನಿಗ್ರಹದ ದಳದ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಿ ಆತ ನೀಡಿದ ಮಾಹಿತಿ ಮೇರೆಗೆ ನಗರದ ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತನ್ನ ಮನೆಯಲ್ಲಿ ಕುಕ್ಕರ್ ಬಳಸಿ ಸಿಂಥೆಟಿಕ್ ಡ್ರಗ್ಸ್ ತಯಾರು ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದ 10 ಕೋಟಿ ರೂ. ಮೌಲ್ಯದ 5 ಕೆಜಿ ಎಂಡಿಎಂಎ ಮಾದಕವಸ್ತು, ಎಂಡಿಎಂಎ ತಯಾರು ಮಾಡಲು ಬೇಕಾದ ಕಚ್ಚಾ ಪದಾರ್ಥಗಳಾದ ಎಂಎಸ್‍ಎಂ 12.450 ಕೆಜಿ, ಸೋಡಿಯಂ ಹೈಡ್ರಾಕ್ಸೈಡ್ ಕ್ರಿಸ್ಟಲ್ 5 ಕೆಜಿ, ಹೈಡ್ರೋಕ್ಲೋರಿಕ್‍ಆ್ಯಸಿಡ್ 5 ಲೀಟರ್, ಅಸೆಟ್‍ಟೊನ್ 2.5 ಲೀಟರ್ ಹಾಗೂ 5 ಲೀಟರ್ ಕುಕ್ಕರ್, ಸ್ಟವ್, ಗ್ಯಾಸ್ ಸಿಲಿಂಡರ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್, 2 ಡಿಜಿಟಲ್ ತೂಕದ ಯಂತ್ರ, ಒಂದು ಎನ್‍ಟ್ರಾಕ್ ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯು ಡ್ರಗ್ಸ್ ತಯಾರಿಕೆಗೆ ಬಳಸುವ ಕಚ್ಚಾ ಸಾಮಾಗ್ರಿಗಳನ್ನು ದೆಹಲಿ ಹಾಗೂ ಇನ್ನಿತರೆ ಕಡೆಗಳಿಂದ ತರಿಸಿಕೊಳ್ಳುತ್ತಿದುದ್ದು ವಿಚಾರಣೆಯಿಂದ ಗೊತ್ತಾಗಿದೆ. ಆರೋಪಿ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯ್ದೆ ಹಾಗೂ 14 ಫಾರಿರ್ನರ್ಸ್ ಆಕ್ಟ್‍ನಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ.20ರವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ.

ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಸತೀಶ್‍ಕುಮಾರ್, ಉಪಪೊಲೀಸ್ ಆಯುಕ್ತರು ಅಪರಾಧ-2 ಶ್ರೀನಿವಾಸ್ ಗೌಡ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಮಾದಕದ್ರವ್ಯ ನಿಗ್ರಹದಳದ ಅಧಿಕಾರಿ ಹಾಗೂ ಸಿಬ್ಬಂದಿ ತಂಡವು ಕಾರ್ಯಾಚರಣೆ ಕೈಗೊಂಡಿರುತ್ತದೆ.

RELATED ARTICLES

Latest News