ಬೆಂಗಳೂರು ಇಂದೇ ಅನ್‍ಲಾಕ್ ಆಯ್ತಾ..? ಎಲ್ಲೆಲ್ಲೂ ಟ್ರಾಫಿಕ್ ಜಾಮ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.11- ಉದ್ಯಾನ ನಗರಿ ಅನ್‍ಲಾಕ್‍ಗೆ ಇನ್ನೂ ಎರಡು ದಿನ ಬಾಕಿ ಇದೆ. ಆದರೆ, ನಗರದ ಇಂದಿನ ಚಿತ್ರಣ ನೋಡಿದರೆ ಇಂದೆ ಲಾಕ್‍ಡೌನ್ ತೆರವಾದಂತೆ ಗೋಚರಿಸುತ್ತಿದೆ.ಎಲ್ಲಿ ನೋಡೊದರೂ ಜನ, ವಾಹನಗಳದ್ದೇ ಕಾರು ಬಾರು. ಕೊರೊನಾ ನಡುವೆಯೂ ಜನರು ಮತ್ತು ಆರ್ಥಿಕ ಹಿತ ದೃಷ್ಟಿಯಿಂದ ಕೆಲ ನಿರ್ಬಂಧಗಳೊಂದಿಗೆ ಸೋಮವಾರದಿಂದ ಬೆಂಗಳೂರು ಅನ್‍ಲಾಕ್ ಆಗಲಿದೆ. ಆದರೆ ಜನ ಮಾತ್ರ ಇಂದೇ ಲಾಕ್ ಓಪನ್ ಆಗಿ ಬಿಟ್ಟಿದೆ ಎಂದು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್ ಕಂಡು ಬರುತ್ತಿದೆ.

ಬೆಳಗ್ಗೆ 6 ರಿಂದ 10 ಗಂಟೆ ವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಸಮಯದಲ್ಲಿ ನಗರದ ವಿವಿಧ ಕಡೆ ಭಾಗಶಃ ಎಲ್ಲಾ ಅಂಗಡಿಗಳು ಓಪನ್ ಆಗಿದ್ದವು. 10 ಗಂಟೆ ನಂತರ ಅಂಗಡಿಗಳು ಬಂದ್ ಆದರೂ ಜನರ ಓಡಾಟ ಮಾತ್ರ ಕಡಿಮೆಯಾಗಿಲ್ಲ.

ಇಂದೇ ಅನ್‍ಲಾಕ್ ಆಗಿದೆ. ಸ್ವತಂತ್ರವಾಗಿ ಓಡಾಡಬಹುದೆಂದು ಜನರು ಮಾತ್ರ ಅನಗತ್ಯವಾಗಿ ಓಡಾಡುತ್ತಿದ್ದ ದೃಶ್ಯಗಳು ಕಂಡು ಬಂದವು,ಚಾಲುಕ್ಯ ವೃತ್ತ, ಮೈಸೂರು ರಸ್ತೆ, ಮಾಗಡಿ ರಸ್ತೆ, ಕೆಂಗೇರಿ, ವಿಜಯನಗರ, ಗೊರಗುಂಟೆಪಾಳ್ಯ, ಹೆಬ್ಬಾಳ, ಮೆಜೆಸ್ಟಿಕ್, ಕೆಆರ್, ಮಾರುಕಟ್ಟೆ ಸೇರಿದಂತೆ ಬಹತೇಕ ಕಡೆ ಇಂದು ಬೆಳಗ್ಗೆ ವಾಹನ ದಟ್ಟಣೆ ಹೆಚ್ಚಾಗಿತ್ತು. ಕೆಲವು ಕಡೆ ಏಕಮುಖ ಸಂಚಾರ , ರಸ್ತೆ ವೈಟ್ ಟಾಪಿಂಗ್ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿದ್ದ ಇದರಿಂದ ಮತ್ತಷ್ಟು ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ವಾಹನಗಳ ಸಂಚಾರ ದಟ್ಟಣೆ ಹಿನ್ನಲೆಯಲ್ಲಿ ಬಂದ್ ಆಗಿದ್ದ ಸಿಗ್ನಲ್ ಲೈಟ್‍ಗಳು ಆನ್ ಆಗಿದ್ದು, ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಇಂದು ಬೆಳಗ್ಗೆ ಕೆಲವು ಕಡೆ ಹರಸಾಹ ಪಡುವಂತಾಗಿತ್ತು.ಹೆಚ್ಚಿದ ವಾಹನಗಳ ಸಂಖ್ಯೆ: ಅಂಗಡಿಗಳ ಓಪನ್ ಆಗಿರುವುದನ್ನು ಗಮನಿಸಿದರೆ ಬೆಂಗಳೂರು ಸಹಜಸ್ಥಿತಿಗೆ ಬಂದಿದೆ ಎನ್ನಿಸುತ್ತದೆ. ಕೊರೊನಾ ಹೆಚ್ಚಾದ ಕಾರಣ ಊರುಗಳನ್ನು ಸೇರಿದ್ದ ಜನ ಸೊಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದಂತೆ ಜನರು ವಾಪಸ್ ಬರುತ್ತಿದ್ದಾರೆ. ಇದರಿಂದ ಕೆಲವು ಕಡೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ಪ್ರತಿ ನಿತ್ಯ ಸಾವಿರಾರು ವಾಹನಗಳು ನಗರ ಪ್ರವೇಶಿಸುತ್ತಿವೆ. ಪೆÇಲೀಸರು ಕೆಲವು ಕಡೆ ತಪಾಸಣೆಯನ್ನು ಸಡಿಲ ಗೊಳಿಸಿದ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿದೆ ಎಂದು ಹೆಳಬಹುದು. ಆದರೂ ನಗರದ ವಿವಿಧೆಡೆ 10 ಗಂಟೆ ನಂತರ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ನಿಯಮಕ್ಕಿಲ್ಲ ಕಿಮ್ಮತ್ತು: ನಗರದ ಕೆಲ ಮಾರುಕಟ್ಟೆ ಮುಖ್ಯರಸ್ತೆಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿದ್ದು, ಜನರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಮರೆತು ವ್ಯಾಪಾರ-ವಹಿವಾಟಿನಲ್ಲಿ ತೊಡಗಿಕೊಂಡಿರುವುದು ಕಂಡು ಬಂತು.

ಮರು ವಲಸೆ: ನಗರದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದಂತೆ ಊರುಗಳನ್ನು ಸೇರಿದ್ದ ಜನರು ಮತ್ತೆ ಮರು ವಲಸೆ ಪ್ರಾರಂಭಿಸಿದ್ದು, ರಾಜಧಾನಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಎಚ್ಚರ… ಎಚ್ಚರ… ಕೊರೊನಾ ಸಂಪೂರ್ಣವಾಗಿ ಇನ್ನೂ ನಿರ್ಮೂಲನೆಯಾಗಿಲ್ಲ. ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಅಷ್ಟೇ. ಈ ಹಿನ್ನೆಲೆಯಲ್ಲಿ ಎಚ್ಚರದಿಂದ ಇರುವುದು ಒಳಿತು. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾತ್ರ ನಿಲ್ಲಿಸದಿರಿ. ನಿರಂತರವಾಗಿ ಬಳಕೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ.

Facebook Comments

Sri Raghav

Admin