ಜೂನ್‍ನಲ್ಲಿ ಭಾರತಕ್ಕೆ ಕಾದಿದೆ ಕೊರೋನಾ ಗಂಡಾಂತರ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 23-ಭಾರತದಲ್ಲಿ ಭಾರೀಗಂಡಾಂತರಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ದಾಳಿ ಜೂನ್ ತಿಂಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂಬ ಆತಂಕ ಎದುರಾಗಿದೆ.

ಮುಂದಿನ ತಿಂಗಳು 21 ರಿಂದ 28ರ ನಡುವೆ ದೇಶದಲ್ಲಿ ಕೋವಿಡ್-19 ವೈರಸ್ ಸೋಂಕು ಪ್ರಕರಣದಲ್ಲಿ ಭಾರೀ ಏರಿಕೆಯಾಗಲಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಜಾಧವ್‍ಪುರ್ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ನಂದದು ಲಾಲ್ ಬೈರಾಗಿಅವರು ನಡೆಸಿ ಅಧ್ಯಯನದ ಪ್ರಕಾರಜೂನ್ ನಾಲ್ಕು ಮತ್ತುಐದನೇ ವಾರದ ನಡುವೆ ದೇಶದಲ್ಲಿ ಪ್ರತಿದಿನ 7,000 ದಿಂದ 7,500 ಸೋಂಕು ಪ್ರಕರಣಗಳು ಕಂಡುಬರಲಿದೆ.

ಈ ಅವಯಲ್ಲಿ ದೇಶಗಂಡಾಂತರ ಪರಿಸ್ಥಿತಿಗೆ ಸಿಲುಕುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಜುಲೈ ಎರಡನೇ ವಾರದ ಬಳಿಕ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡುಬರಲಿದೆ ಎಂದು ಸಹ ವಿವರಿಸಲಾಗಿದೆ.

ಮೇ ತಿಂಗಳಿನಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಪ್ರಕರಣಗಳಲ್ಲಿ ಏರಿಕೆಯಾಗಲಿದೆ ಎಂದು ಏಪ್ರಿಲ್‍ನಲ್ಲಿ ಕೆಲವು ಅಧ್ಯಯನ ವರದಿಗಳು ಮುನ್ಸೂಚನೆ ನೀಡಿದ್ದವು. ಇದು. ಜೂನ್‍ನಲ್ಲಿ ಮತ್ತಷ್ಟು ಹೆಚ್ಚಾಗುವುದು ಬಹುತೇಕ ಖಚಿತವಾಗಿದೆ.

Facebook Comments

Sri Raghav

Admin