ಭವಾನಿಪುರ ಬೈಎಲೆಕ್ಷನ್ ರಿಸಲ್ಟ್: 50 ಸಾವಿರಕ್ಕೂ ಅಧಿಕ ಮತಗಳಿಂದ ಮಮತಾ ಮುನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತ್ತಾ, ಅ.3- ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿಯನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿತ್ತು, ಆದರೆ ನಂದಿ ಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಒಂದು ಕಾಲದ ತಮ್ಮ ಆಪ್ತ ಹಾಗೂ ಬಿಜೆಪಿ ಅಭ್ಯರ್ಥಿ ಸುವೇಂಧು ಅಧಿಕಾರಿ ವಿರುದ್ಧ ಸೋಲು ಕಂಡಿದ್ದರು.

2:00:04 PM  50 ಸಾವಿರಕ್ಕೂ ಅಧಿಕ ಮತಗಳಿಂದ ಮಮತಾ ಮುನ್ನಡೆ

19 ನೇ ಸುತ್ತಿನ ಎಣಿಕೆಯ ನಂತರ, ಮಮತಾ ಬ್ಯಾನರ್ಜಿ ಅಸಾಧಾರಣ 50,000 ಗಡಿ ದಟ್ಟಿದ್ದಾರೆ. ಅವರು ಹಿಂದಿನ 2011 ರಲ್ಲಿ 54,213 ದಾಖಲೆ ಮಾಡಿದ್ದರು. ಕೊನೆಯ ಎರಡು ಸುತ್ತುಗಳ ಅಂತ್ಯದ ವೇಳೆಗೆ ತನ್ನ ದಾಖಲೆಯನ್ನು ಮುರಿಯಬಹುದು.
ಟಿಎಂಸಿ: 76,413
ಬಿಜೆಪಿ: 24,396
ಮಮತಾ 52,017 ಮುನ್ನಡೆ ಸಾಧಿಸಿದ್ದಾರೆ

1:33:16 PM; ಬಂಗಾಳ ಉಪಚುನಾವಣೆ ಫಲಿತಾಂಶ: ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ 16 ಸುತ್ತುಗಳ ನಂತರ
ಟಿಎಂಸಿ 62,760
ಬಿಜೆಪಿ 20,468
ಮಮತಾ ಮತಗಳ ಮುನ್ನಡೆ: 42,292

12:46:19 PM : 11 ನೇ ಸುತ್ತಿನ ನಂತರ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 34,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಬಂಗಾಳ ಉಪಚುನಾವಣೆ ಫಲಿತಾಂಶಗಳು: 10 ಸುತ್ತುಗಳ ನಂತರ, ಮಮತಾ 31,645 ಮತಗಳ ಮುನ್ನಡೆ ಸಾಧಿಸಿದ್ದಾರೆ

ಟಿಎಂಸಿ – 42,122
ಬಿಜೆಪಿ – 10,477
ಸಿಪಿಐಎಂ – 1,234

ಬಂಗಾಳ ಉಪಚುನಾವಣೆ ಫಲಿತಾಂಶಗಳು: ಭವಾನಿಪುರ ಉಪಚುನಾವಣೆ ಫಲಿತಾಂಶದ ಆರನೇ ಸುತ್ತಿನ ನಂತರ ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶಗಳು ಪ್ರಕಾರ
ಟಿಎಂಸಿ; 28,355
ಬಿಜೆಪಿ: 4398
ಸಿಪಿಐಎಂ: 398
ಮಮತಾ 23,957 ಮತಗಳ ಮುನ್ನಡೆಯಲ್ಲಿದ್ದರೆ ಮುನ್ನಡೆಸಿದ್ದಾರೆ

 

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು 12,435 ಮತಗಳಿಂದ ಭಬನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಮುನ್ನಡೆಸಿದ್ದಾರೆ.

ಭಬನಿಪುರ ಉಪಚುನಾವಣೆ ಫಲಿತಾಂಶದ ಮೂರನೇ ಸುತ್ತಿನ ನಂತರ ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶಗಳು

* ಟಿಎಂಸಿ 9974
* ಬಿಜೆಪಿ 3828
*  ಸಿಪಿಐಎಂ 250

ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದ ಕಾರಣಕ್ಕೆ ಅದರ ಅನಾಯಕಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯೂ ಆದರು. ಆರು ತಿಂಗಳ ಒಳಗೆ ಶಾಸನ ಸಭೆಗೆ ಅವರು ಆಯ್ಕೆಯಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು ನಿಗದಿತ ಕಾಲಾವಯಲ್ಲಿ ಉಪಚುನಾವಣೆ ನಡೆಯದಿದ್ದರೆ ರಾಜ್ಯದಲ್ಲಿ ಸಾಂವಿಧಾನಿಕ ತುರ್ತು ಪರಿಸ್ಥಿತಿ ಎದುರಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಖಾಲಿ ಇದ್ದ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ಇತ್ತೀಚೆಗೆ ಚುನಾವಣೆ ನಡೆಸಿತ್ತು. ಅವುಗಳ ಪೈಕಿ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಿಂದ ಆಯ್ಕೆ ಬಯಸಿ ರ್ಸಧಿಸಿದ್ದರು. ಬಿಜೆಪಿ ಪ್ರಿಯಾಂಕ ತಿಬ್ರುವಾಲ್‍ರನ್ನು ಕಣಕ್ಕಿಳಿಸಿತ್ತು. ಸಿಪಿಐ(ಎಂ) ಶ್ರೀಜಿಬ್ ಬಿಸ್ವಾಸ್‍ರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಮಮತಾರನ್ನು ಬೆಂಬಲಿಸಿ ತನ್ನ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಶೇ.57ರಷ್ಟು ಮತದಾನ ನಡೆದಿತ್ತು.

ಇಂದು ಮತ ಎಣಿಕೆ ನಡೆದು ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ತ್ರಿಬ್ರುವಾಲ್ ಅವರನ್ನು ಆರಂಭದಿಂದಲೂ ಹಿಂದಿಕ್ಕಿದ್ದರು.ಒಂದು ಹಂತದಲ್ಲಿ ಬಿಜೆಪಿ ಅಭ್ಯರ್ಥಿ ಪೈಪೋಟಿ ಹಂತಕ್ಕೆ ಬಂದರಾದರೂ ನಿರಂತರ ಮುನ್ನೆಡೆ ಕಾಯ್ದುಕೊಳ್ಳಲು ವಿಫಲರಾದರು.

ಆರಂಭದಲ್ಲಿ ಹಿನ್ನೆಡೆ ಮುನ್ಸೂಚನೆ ದೊರೆಯುತ್ತಿದ್ದಂತೆ ಬಿಜೆಪಿ ಕಚೇರಿಯಲ್ಲಿ ಜನರಿಲ್ಲದೆ ಬೀಕೋ ಎನ್ನುತ್ತಿತ್ತು. ಫಲಿತಾಂಶ ಘೋಷಣೆಗೂ ಮುನ್ನವೇ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.

Facebook Comments