4 ಕ್ರೆಸ್ಟ್ ಗೇಟ್‍ ಓಪನ್, ಕಣ್ಮನ ಸೆಳೆಯುತ್ತಿರುವ ಭದ್ರಾ ಜಲಾಶಯ

ಈ ಸುದ್ದಿಯನ್ನು ಶೇರ್ ಮಾಡಿ

Bhadra-dam--01
ದಾವಣಗೆರೆ, ಜು.25- ಭದ್ರಾ ಜಲಾಶಯವು 184 ಅಡಿ ತಲುಪಿದ್ದು, ಜಲಾಶಯದ ಹಿತದೃಷ್ಟಿಯಿಂದ 4 ಕ್ರೆಸ್ಟ್ ಗೇಟ್‍ಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗಿದೆ.186 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ 69 ಟಿಎಂಸಿ ನೀರು ಸಂಗ್ರಹವಾಗಿದೆ. 20,225 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನಿನ್ನೆ ಮಧ್ಯಾಹ್ನ ಒಂದೊಂದೇ ಕ್ರೆಸ್ಟ್‍ಗೇಟ್‍ನಿಂದ ನೀರು ಬಿಡಲಾಯಿತು. ಈ ಅಪರೂಪದ ದೃಶ್ಯ ನೋಡಗರ ಮನತಣಿಸುವಂತಿತ್ತು. ಭದ್ರಾ ಯೋಜನಾ ಅಧಿಕೃತ ಅಭಿಯಂತರ ದಿವಾಕರ್ ನಾಯಕ್, ಮುಖ್ಯ ಎಂಜಿನಿಯರ್ ಕುಲಕರ್ಣಿ ಮತ್ತಿತರ ಅಧಿಕಾರಿಗಳು ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ನದಿಗೆ ನೀರು ಹರಿಸಿದರು. ಜಲಾಶಯ ವೀಕ್ಷಿಸಲು ಬರುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.

Facebook Comments

Sri Raghav

Admin