ಮುಂದಿನ ವಾರ `ಭಜರಂಗಿ-2′ ಆಟ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಬಿಡುಗಡೆಗೊಂಡ ಕೋಟಿಗೊಬ್ಬ ಮತ್ತು ಸಲಗ ಚಿತ್ರಗಳು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದವು. ಈ ಚಿತ್ರಗಳು ಬಿಡುಗಡೆಯಾದ ಎರಡು ವಾರಗಳ ನಂತರ ಮತ್ತೊಂದು ಬಿಗ್ ಬಜೆಟ್ ಮತ್ತು ಗಾಂನಗರದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿರುವ ಭಜರಂಗಿ-2 ಪ್ರೇಕ್ಷಕರ ಮುಂದೆ ಬರುತ್ತಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು, ಸುಮಾರು ದಿನಗಳ ನಂತರ ತಮ್ಮ ನಾಯಕನನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ತುದಿಗಾಲಲ್ಲಿ ನಿಂತಿದ್ದರು. ಇವರ ಕುತೂಹಲಕ್ಕೆ ಬ್ರೇಕ್ ಹಾಕಲು ಇದೇ ತಿಂಗಳು 29 ರಂದು ಭಜರಂಗಿ-2 ಬಿಡುಗಡೆಯಾಗಲಿದೆ.

ಅದ್ಧೂರಿ ಬಜೆಟ್‍ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಶಿವಣ್ಣನಿಗಾಗಿ ಭಜರಂಗಿ, ವಜ್ರಕಾಯದಂತಹ ಅದ್ಧೂರಿ ಸಿನಿಮಾಗಳನ್ನು ಮಾಡಿ, ಗಾಂನಗರ ಗಲ್ಲಾ ಪೆಟ್ಟಿಗೆಯಲ್ಲಿ ಸೌಂಡ್ ಮಾಡಿದ್ದ ನಿರ್ದೇಶಕ ಹರ್ಷ ಮತ್ತೆ ಭಜರಂಗಿ-2 ಮೂಲಕ ಗಾಂನಗರದಲ್ಲಿ ಧೂಳೆಬ್ಬಿಸಲು ರೆಡಿಯಾಗಿದ್ದಾರೆ.

ಈಗಾಗಲೇ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ ಹಾಡುಗಳು ಮತ್ತು ಚಿತ್ರದ ಟ್ರೈಲರ್‍ಗಳು ಪ್ರೇಕ್ಷಕರ ಮನಗೆದ್ದಿವೆ. ಶಿವರಾಜ್ ಕುಮಾರ್ ಗೆಟಪ್ ತುಂಬಾ ರಗಡ್ ಆಗಿದ್ದು, ಕಥೆಯಲ್ಲಿ ಯಾವ ರೀತಿ ಕಾಣುತ್ತಾರೆ ಅನ್ನೋ ಕುತೂಹಲವಂತು ಸಿನಿರಸಿಕರಿಗಿದೆ.

Facebook Comments