ನಾಳೆಯಿಂದ ರಾಜ್ಯಾದ್ಯಂತ ಭಜರಂಗಿ-2 ಅಬ್ಬರ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಬಿಗ್ ಬಜೆಟ್ ಚಿತ್ರ ಮತ್ತು ಗಾಂನಗರದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿರುವ ಭಜರಂಗಿ-2 ಪ್ರೇಕ್ಷಕರ ಮುಂದೆ ಬರುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು, ಸುಮಾರು ದಿನಗಳ ನಂತರ ತಮ್ಮ ನಾಯಕನನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ತುದಿಗಾಲಲ್ಲಿ ನಿಂತಿದ್ದರು. ಇವರ ಕುತೂಹಲಕ್ಕೆ ಬ್ರೇಕ್ ಹಾಕಲು ನಾಳೆ ಬಿಡುಗಡೆಯಾಗಲಿದೆ.

ಅದ್ಧೂರಿ ಬಜೆಟ್‍ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಶಿವಣ್ಣನಿಗಾಗಿ ಭಜರಂಗಿ, ವಜ್ರಕಾಯದಂತಹ ಅದ್ಧೂರಿ ಸಿನಿಮಾಗಳನ್ನು ಮಾಡಿ, ಗಾಂಧಿನಗರ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಿದ್ದ ನಿರ್ದೇಶಕ ಹರ್ಷ ಮತ್ತೆ ಭಜರಂಗಿ-2 ಮೂಲಕ ಗಾಂನಗರದಲ್ಲಿ ಧೂಳೆಬ್ಬಿಸಲು ರೆಡಿಯಾಗಿದ್ದಾರೆ.

ಈಗಾಗಲೇ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ ಹಾಡುಗಳು ಮತ್ತು ಚಿತ್ರದ ಟ್ರೈಲರ್‍ಗಳು ಪ್ರೇಕ್ಷಕರ ಮನಗೆದ್ದಿವೆ. ಶಿವರಾಜ್ ಕುಮಾರ್ ಗೆಟಪ್ ತುಂಬಾ ರಗಡ್  ಆಗಿದ್ದು, ಅವರ ಸುತ್ತಮುತ್ತಲಿರುವ ವಿಲನ್‍ಗಳ ವೇಷಭೂಷಣ, ವೇದ ಪುರಾಣಗಳ ಉಲ್ಲೇಖ, ಚಿತ್ರದ ಶೂಟಿಂಗ್  ಜಾಗಗಳು, ಅದ್ಧೂರಿ ಸೆಟ್‍ಗಳ ವೈಭವ, ಸಂಭಾಷಣೆ ನೋಡುಗನಿಗೆ ಮೈ ರೋಮಾಂಚನವಾಗುತ್ತದೆ.

ಅಳುಮುಂಜಿ ಪಾತ್ರಗಳಲ್ಲಾ ಹೆಚ್ಚು ಮನೆಮಾತಾದ ನಟಿ ಶೃತಿ, ಮೊಟ್ಟ ಮೊದಲ ಬಾರಿಗೆ ಕೈಯಲ್ಲಿ ಸಿಗರೇಟ್ ಹಿಡಿದು, ವಿಚಿತ್ರ ಗೆಟಪ್‍ನಲ್ಲಿ ಸ್ಕ್ರೀನ್ ಮೇಲೆ ಕಾಣುತ್ತಾರೆ. ಹಾಗೆಯೇ ಟಗರು ನಂತರ ಮತ್ತೆ ಶಿವಣ್ಣನ ಜೊತೆ ತೆರೆ ಹಂಚಿಕೊಂಡಿರುವ ಜÁಕಿ ಭಾವನ ಮೊದಲ ಬಾರಿಗೆ ಡಿಗ್ಲಾರ್ಮರ್ ಅಗಿ ಕಾಣಲಿದ್ದಾರೆ.

Facebook Comments