ಭಾರತ್ ಬಂದ್‍ಗೆ ವಿವಿಧ ಸಂಘಟನೆಗಳ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಕೆಚ್ಚೆದೆಯ ಹೋರಾಟದ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿರುವ ರೈತ ಸಮುದಾಯವನ್ನು ನಾವು ಹೃತ್ಪೂರ್ವಕವಾಗಿ ಗೌರವಿಸುತ್ತೇವೆ ಹಾಗೂ ಡಿ.8 ರಂದು ಭಾರತ್ ಬಂದ್ ನಡೆಸಬೇಕು ಎಂಬ ಅವರ ನಿರ್ಧಾರವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ.

ಇಡೀ ದೇಶದ ಜನರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಹಾಗೂ ಮಹಾಮಾರಿ ತಂದೊಡ್ಡಿದ ದುಃಖ ದುಮ್ಮಾನಗಳು ಅವರನ್ನು ಕಾಡುತ್ತಿರುವ ಹೊತ್ತಿನಲ್ಲಿ, ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದನ್ನು ಗಮನಿಸಿದರೆ, ಈ ಸರ್ಕಾರ ನಿಜವಾಗಿಯೂ ಯಾರ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಎಐಎಸ್‍ಎಫ್, ಎಸ್‍ಎಫ್‍ಐ, ಎಐಡಿಎಸ್‍ಒ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ನ್ಯಾಯಯುತ ಬೇಡಿಕೆಗಳನ್ನಿಟ್ಟು ಕೊಂಡು ಬೀದಿಗಿಳಿದಿರುವ ರೈತರ ವಿಷಯದಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಕೇಂದ್ರ ಸರ್ಕಾರದ ಉದ್ದೇಶವನ್ನು ಇನ್ನಷ ಸ್ಪಷಪಡಿಸಿದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣದ ಪೆಡಂಭೂತ ಎಲ್ಲಾ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಹುರಿದು ಮುಕ್ಕಿದ ಮೇಲೆ, ಈಗ ಕೃಷಿ ಕ್ಷೇತ್ರಕ್ಕೂ ದಾಂಗುಡಿ ಇಟ್ಟಿದೆ ಎಂದು ತೀವ್ರವಾಗಿ ಖಂಡಿಸಿದೆ.

ಈಗಿನ ಮೂರು ಕರಾಳ ರೈತ ವಿರೋಧಿ ನೀತಿಗಳೂ ಸಹ ಕಾಪೆರ್ರೇಟ್ ಮನೆತನಗಳನ್ನು ಉದ್ಧಾರ ಮಾಡುತ್ತದೆಯೇ ಹೊರತು, ಜನಸಾಮಾನ್ಯರಿಗೆ ಯಾವ ಲಾಭವೂ ಆಗುವುದಿಲ್ಲ. ಇದನ್ನು ಮನದಟ್ಟು ಮಾಡಿಕೊಂಡು, ಹೋರಾಟಕ್ಕೆ ರೈತರು ಧುಮುಕಿದ್ದಾರೆ.  ಮೇಲ್ಕಂಡ ಎಲ್ಲಾ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ಇಡೀ ವಿದ್ಯಾರ್ಥಿ ಸಮೂಹ, ರೈತರ ಈ ಅವಿಸ್ಮರಣೀಯ ಹೋರಾಟಕ್ಕೆ ಬೆಂಬಲ ಸೂಚಿಸುತ್ತವೆ ಹಾಗೂ ಈ ಕರಾಳ ಕಾನೂನುಗಳನ್ನು ಶೀಘ್ರವೇ ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತವೆ.

ರೈತರ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಜನವಿರೋಧಿ ಮತ್ತು ಕಾಪೆರ್Çರೇಟ್ ಪರ ನೀತಿಗಳನ್ನು ಹಿಮ್ಮೆಟ್ಟಿಸಲು ಪ್ರಬಲ ಹೋರಾಟ ಕಟ್ಟಬೇಕೆಂದು ನಾವು ದೇಶದ ಜನರಲ್ಲಿ ಮನವಿ ಮಾಡುತ್ತೇವೆ.

Facebook Comments