ಡ್ರಗ್ಸ್ ಸಂಪರ್ಕ ಜಾಲ: ಹಾಸ್ಯ ತಾರಾ ಭಾರತಿ ಸಿಂಗ್ ದಂಪತಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.22-ಮಾದಕ ವಸ್ತು ಸಂಗ್ರಹ ಮತ್ತು ಸೇವನೆ ಪ್ರಕರಣದ ಸಂಬಂದ ಖ್ಯಾತ ಹಾಸ್ಯ ನಟಿ ಭಾರತಿ ಸಿಂಗ್ ಮತ್ತು ಅವರ ಪತಿ ಕಾಮಿಡಿಯನ್ ಹರ್ಷ್ ಲಿಂಬಾಚಿಯಾ ಅವರನ್ನು ಮಾದಕವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಕಾರಿಗಳು ಬಂಸಿದ್ದಾರೆ.  ಬಂತ ಹಾಸ್ಯ ತಾರಾ ದಂಪತಿಯನ್ನು ಎನ್‍ಸಿಬಿ ಅಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಡ್ರಗ್ಸ್ ಸಂಪರ್ಕ ಜಾಲದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮುಂಬೈನ ಅಂಧೇರಿಯಲ್ಲಿರುವ ಭಾರತಿ ಸಿಂಗ್ ಅವರ ಅಪಾರ್ಟ್ ಮೆಂಟ್ ಮೇಲೆ ನಿನ್ನೆ ದಾಳಿ ನಡೆಸಿ ಶೋಧ ಕೈಗೊಂಡ ಅಕಾರಿಗಳಿಗೆ ಗಾಂಜಾ ಪತ್ತೆಯಾಯಿತು. ನಂತರ ಭಾರತಿ ಸಿಂಗ್ ಅವರನ್ನು ವಶಕ್ಕೆ ತೆಗೆದುಕೊಂಡರು. ಇದರ ಬೆನ್ನಲ್ಲೇ ಅವರ ಪತಿ ಮತ್ತು ಹಾಸ್ಯ ನಟ ಹರ್ಷ ಲಿಂಬಾಚಿಯಾ ಅವರನ್ನೂ ಸಹ ಬಂಸಲಾಗಿದೆ.

ದಂಪತಿ ಗಾಂಜಾ ಸಂಗ್ರಹ ಮತ್ತು ಸೇವನೆ ಮಾಡುತ್ತಿದ್ದರೆನ್ನಲಾದ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ನಂತರ ನಶೆ ನಂಟಿನ ಜಾಲದ ಜಾಡು ಹಿಡಿದಿರುವ ಎನ್‍ಸಿಬಿ ಅಕಾರಿಗಳಿಗೆ ಬಿ-ಟೌನ್‍ನ ಕೆಲವು ನಟ-ನಟಿಯರು ಮತ್ತು ಕಿರುತೆರೆ ಕಲಾವಿದರು ಡ್ರಗ್ಸ್ ಸಂಗ್ರಹ ಮತ್ತು ಸೇವನೆ ಮಾಡುತ್ತಿರುವ ಪ್ರಕರಣಗಳು ಪತ್ತೆಯಾಗುತ್ತಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

Facebook Comments