ನೈತಿಕ ಪೊಲೀಸ್‍ಗರಿಗೆ ಅವಕಾಶ ಕೊಡಲ್ಲ: ಪೊಲೀಸ್‍ ಆಯುಕ್ತ ಭಾಸ್ಕರ ರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.14-ಪ್ರೇಮಿಗಳ ದಿನಾಚರಣೆ ಆಚರಿಸುವುದು ಅವರವರಿಗೆ ಬಿಟ್ಟ ವಿಚಾರ. ನೈತಿಕ ಪೊಲೀಸ್‍ಗರಿಗೆ ಅವಕಾಶ ಕೊಡಲ್ಲ. ಯಾರು ಯಾರಿಗೂ ತೊಂದರೆ ಕೊಡಬಾರದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಆಚರಣೆ ಮಾಡುವ ಸ್ವಾತಂತ್ರ್ಯವಿದೆ ಎಂದರು.

ಸಿಎಎ-ಎನ್‍ಸಿಆರ್ ವಿರೋಧಿ ಬಂದ್ ವೇಳೆ 144ಸೆಕ್ಷನ್ ಜಾರಿ ಮಾಡಿದ್ದು ಸರಿಯಲ್ಲ ಎಂದು ಕೋರ್ಟ್ ಹೇಳಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನನಗೆ ಆರ್ಡರ್ ಕಾಪಿ ಸಿಕ್ಕಿಲ್ಲ. ಆದೇಶದ ಪ್ರತಿ ದೊರೆತ ಬಳಿಕ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.

ಸಂಘಟನೆ ಟೀಕೆಗೆ ಆಯುಕ್ತರು ಗರಂ: ಕೆಲ ಕನ್ನಡಪರ ಸಂಘಟನೆಗಳು ಆಯುಕ್ತರು ಆರ್‍ಎಸ್‍ಎಸ್‍ಗೆ ಸೇರಿಕೊಳ್ಳಲಿ ಎಂದು ಟೀಕಿಸಿರುವುದಕ್ಕೆ ಗರಂ ಆದ ಭಾಸ್ಕರರಾವ್,ï ನಾವು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುತ್ತಿಲ್ಲ. ಬೆಂಗಳೂರಿನ 1.4 ಕೋಟಿ ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದೇವೆ ಎಂದರು. ನಾನು ಹುಟ್ಟು ಕನ್ನಡಿಗ, ನಾನು ಯಾವ ಕನ್ನಡ ಹೋರಾಟಗಾರರಿಂದಲೂ ಕನ್ನಡ ಕಲಿಬೇಕಾಗಿಲ್ಲ. ಇಲ್ಲೇ ನೌಕರಿ ಮಾಡ್ತಿದ್ದೀನಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

Facebook Comments