ಡ್ರಗ್ಸ್ ನಿಯಂತ್ರಣಕ್ಕೆ ಸಹಕರಿಸಿ: ನಗರ ಪೊಲೀಸ್ ಆಯುಕ್ತ ಭಾಸ್ಕರ್‍ ರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26- ಮಾದಕ ವಸ್ತು ಸೇವನೆ, ಸಾಗಾಣಿಕೆ, ಮಾರಾಟದಂತಹ ಸಾಮಾಜಿಕ ಪಿಡುಗನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಯವರು ಕೈ ಜೋಡಿಸಿ ಸಹಕರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಮನವಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ, ಸಾಗಾಣಿಕೆ, ಮಾರಾಟ ವಿರೋಧಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದಿನ ವರ್ಷಗಳಲ್ಲಿ ಡ್ರಗ್ಸ್ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರು, ಯುವಜನರಲ್ಲಿ ಅರಿವು ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಜಾಗೃತಿ ಜಾಥಾ ಸೇರಿದಂತೆ ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು.

ಈ ವರ್ಷ ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಇಂದು ಡ್ರಗ್ಸ್ ವಿರೋಧಿ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು. ಸಾರ್ವಜನಿಕರ ಉಪಯೋಗಕ್ಕಾಗಿ 1098 ಟೋಲ್ ಫ್ರೀ ನಂಬರ್ ಒದಗಿಸಲಾಗಿದ್ದು, ಮಾದಕ ವಸ್ತು ಸೇವನೆ, ಸಾಗಾಣಿಕೆ, ಮಾರಾಟ ಮಾಡುವಂತಹದ್ದು ಕಂಡುಬಂದರೆ ಈ ನಂಬರ್‍ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು, ಅಂತಹವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ಹೇಳಿದ್ದಾರೆ.

2019-20ನೆ ಸಾಲಿನಲ್ಲಿ ನಗರ ಪೊಲೀಸರು ಎನ್‍ಡಿಪಿಎಸ್ ಕಾಯ್ದೆ ಅಡಿ 1174 ಪ್ರಕರಣಗಳನ್ನು ದಾಖಲಿಸಿ 1801 ದೇಶೀಯರು, 44 ವಿದೇಶಿಯರನ್ನು ದಸ್ತಗಿರಿ ಮಾಡಿ ಅವರುಗಳಿಂದ 1016 ಕೆಜಿ ಗಾಂಜಾ, 2.9 ಕೆಜಿ ಅಫೀಮು, 1.15 ಕೆಜಿ ಆಶಿಶ್, 85 ಗ್ರಾಂ ಚರಸ್, 345 ಗ್ರಾಂ ಕೊಕೈನ್, 1079 ಕೆಮಿಕಲ್ ಡ್ರಗ್ಸ್ ಟ್ಯಾಬ್ಲೆಟ್, ಬ್ರೌನ್ ಶುಗರ್ ಸೇರಿದಂತೆ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ನಗರ ಪೊಲೀಸರು ಪ್ರಥಮ ಬಾರಿಗೆ ಅಂತರ್ಜಾಲದ ಡಾರ್ಕ್ ವೆಬ್ ಮುಖಾಂತರ ವಿದೇಶಗಳಿಂದ ಡ್ರಗ್ಸ್‍ಗಳನ್ನು ಕೊರಿಯರ್ಸ್/ಪೋಸ್ಟಲ್ ಡಿಪಾರ್ಟ್‍ಮೆಂಟ್ ಪಾರ್ಸಲ್‍ಗಳಲ್ಲಿ ದಂಧೆ ನಡೆಸುತ್ತಿದ್ದ ತಂಡವನ್ನು ಪತ್ತೆ ಮಾಡಿ ಈ ಡ್ರಗ್ಸ್ ಸರಬರಾಜಿನಲ್ಲಿ ಭಾಗಿಯಾಗಿದ್ದ ಅಂಚೆ ಇಲಾಖೆ ನೌಕರರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಅಲ್ಲದೆ, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಡ್ರಗ್ಸ್ ಅಕ್ರಮ ಗಳಲ್ಲಿ ಭಾಗಿಯಾಗುತ್ತಿರುವ ರೂಢಿಗತ ಆರೋಪಿಗಳನ್ನು ಗುರುತಿಸಿ ಅವರುಗಳನ್ನು ಪಿಐಟಿ ಎನ್‍ಡಿಪಿಎಸ್ ಅಡಿಯಲ್ಲಿ ಬಂಧನಕ್ಕೊಳಪಡಿಸ ಲಾಗಿದೆ. ಇಷ್ಟೇ ಅಲ್ಲದೆ ಡ್ರಗ್ಸ್ ದುಷ್ಪರಿಣಾಮಗಳ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರ ಪೆÇಲೀಸರು ಕ್ರಮಗಳನ್ನು ಕೈಗೊಂಡಿದ್ದಾರೆ.

Facebook Comments