‘ಇನ್ನು ಮುಂದೆ ನಮಗೆ ನಾವೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು’ : ಭಾಸ್ಕರ್ ರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.6- ಇನ್ನು ಮುಂದೆ ನಮಗೆ ನಾವೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳ ಬೇಕೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ ರಾವ್ ಅವರು ತಿಳಿಸಿದ್ದಾರೆ. ನಗರದಲ್ಲಿ ಸಂಡೆ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 36 ಗಂಟೆಗಳ ಕಾಲ ಲಾಕ್‍ಡೌನ್‍ಗೆ ನಗರದ ಜನತೆ ಸ್ಪಂದಿಸಿದ್ದು, ಅವರಿಗೆ ಧನ್ಯವಾದ ತಿಳಿಸುತ್ತೇನೆಂದು ಟ್ವಿಟ್‍ನಲ್ಲಿ ತಿಳಿಸಿದ್ದಾರೆ.

ಪ್ರತಿಯೊಬ್ಬರೂ ಹೊರಗೆ ಹೋದಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು, ನಿಮಗೆ ಏನೇ ಸಮಸ್ಯೆ ಬಂದರೂ ಕಂಟ್ರೋಲ್ ರೂಮ್ (100)ಗೆ ದೂರವಾಣಿ ಕರೆ ಮಾಡಿದರೆ ತಕ್ಷಣ ತಮ್ಮ ಹೊಯ್ಸಳ ಸಿಬ್ಬಂದಿ ಸ್ಪಂದಿಸುತ್ತಾರೆ ಎಂದು ಟ್ವಿಟ್‍ನಲ್ಲಿ ಆಯುಕ್ತರು ಭರವಸೆ ನೀಡಿದ್ದಾರೆ.

Facebook Comments