ವಾಹನ ಸವಾರರಿಗೊಂದು ಗುಡ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.9- ಸಂಚಾರಿ ಪೊಲೀಸರ ತಪಾಸಣೆ ವೇಳೆ ಕೇಂದ್ರ ಸರ್ಕಾರದ ಡಿಜಿಟಲ್ ಲಾಕರ್ ಅಪ್ಲಿಕೇಷನ್‍ನಲ್ಲಿ ಸಂಗ್ರಹಿಸಿಕೊಂಡಿಕೊಂಡಿರುವ ದಾಖಲಾತಿಗಳನ್ನು ತೋರಿಸಿದರೆ ಅವುಗಳನ್ನು ಮಾನ್ಯ ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಡ್ರೈವಿಂಗ್ ಲೈಸೆನ್ಸ್ ಒಂದನ್ನು ಹೊರತು ಪಡಿಸಿ ವಾಹನಕ್ಕೆ ಸಂಬಂಧಪಟ್ಟಂತ ಆರ್‍ಸಿ ಬುಕ್, ವಿಮೆ ಹಾಗೂ ಇತರ ಕಾಗದ ಪತ್ರಗಳನ್ನು ಸವಾರರು ತಮ್ಮ ಮೊಬೈಲ್‍ನಲ್ಲಿ ಡಿಜಿಟಲ್ ಆ್ಯಪ್‍ನಿಂದಲೂ ಪ್ರಸ್ತುತ ಪಡಿಸಬಹುದು.

ಎಲ್ಲಾ ದಾಖಲಾತಿಗಳನ್ನು ಕಾಗದ ಪತ್ರ ಸ್ವರೂಪದಲ್ಲೇ ಇಟ್ಟುಕೊಳ್ಳಲು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ವಾಹನ ಸವಾರರಿಗೆ ಸಲಹೆ ನೀಡಿದರು. ದಂಡದ ಪ್ರಮಾಣ ದುಬಾರಿ ಆದ ನಂತರ ಸಾರ್ವಜನಿಕರಲ್ಲಿ ವ್ಯಾಪಕವಾದ ಜಾಗೃತಿ ಮೂಡಿಸಲಾಗುತ್ತಿದೆ.

ಕಾನೂನು ಕೇವಲ ದಂಡ ವಸೂಲಿ ಮಾಡುವುದಕ್ಕಾಗಲಿ, ಸರ್ಕಾರದ ಬೊಕ್ಕಸ ತುಂಬುವುದಕ್ಕಾಗಿ ಅಲ್ಲ. ಜನರ ಜೀವನ ರಕ್ಷಣೆ ಅದರ ಮಹದುದ್ದೇಶ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಮೊಹರಂ ಹಬ್ಬದ ವರೆಗೂ ಬೆಂಗಳೂರು ಪೊಲೀಸರಿಗೆ ಕಾನೂನು ಸುವ್ಯವಸ್ಥೆ ರಕ್ಷಣೆ ಕಾರ್ಯದ ಒತ್ತಡ ಇದೆ. ಆ ಬಳಿಕ ಎಲ್ಲಾ ಪೆÇಲೀಸ್ ಸಿಬ್ಬಂದಿಗಳನ್ನು ಬಳಸಿಕೊಂಡು ಹೆಚ್ಚಿನ ಜನಜಾಗೃತಿ ಮೂಡಿಸಲಾಗುವುದು. ಅಪಘಾತಕ್ಕೆ ಕಾರಣವಾಗುವ ಏಕಮುಖ ಸಂಚಾರ, ನೋ ಪಾರ್ಕಿಂಗ್, ಪರವಾನಗಿ ರಹಿತ ಚಾಲನೆಯಂತಹ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.

ಮಿರರ್ ಇಲ್ಲದೇ ಇರುವಂತಹ ಸಣ್ಣಪುಟ್ಟ ಪ್ರಕರಣಗಳ ಬಗ್ಗೆ ಮೃದು ಧೋರಣೆ ಅನುಸರಿಸಲಾಗುತ್ತಿದೆ. ಈಗಾಗಲೇ ಓಲಾ ಕ್ಯಾಬ್ ಅಸೋಸಿಯೇಷನ್, ಆಟೋ ಚಾಲಕರ ಸಂಘ, ಶಾಲಾ ಬಸ್‍ಗಳ ಚಾಲಕರು ಮತ್ತು ಮಾಲೀಕರ ಸಂಘದೊಂದಿಗೆ ಚರ್ಚೆ ಮಾಡಿ ತಿಳುವಳಿಕೆ ಮೂಡಿಸಲಾಗಿದೆ. ನಿನ್ನೆ ಒಂದೇ ದಿನ ಶಾಲಾ ಬಸ್ ಒಂದಕ್ಕೆ 17 ಸಾವಿರ ದಂಡ ವಿಧಿಸಲಾಗಿದೆ. ಕಾನೂನನ್ನು ಅತ್ಯಂತ ನಿರ್ಲಕ್ಷ್ಯದಿಂದ ಕಾಣುವ ಮೂಲಕ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದನ್ನು ತಡೆಗಟ್ಟಲು ನಾವು ದಿಟ್ಟ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ಮೂಲಸೌಲಭ್ಯ ಕೊರತೆಯ ನೆಪ ಹೇಳಿ ಕಾನೂನು ಉಲ್ಲಂಘನೆ ಮಾಡುವುದು ಸರಿಯಲ್ಲ. ಪೊಲೀಸ್ ಇಲಾಖೆ ಬಿಬಿಎಂಪಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಮೂಲ ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಇವೆಲ್ಲ ಸರಿಯಲ್ಲ. ಕಾನೂನು ಜನರ ರಕ್ಷಣೆಗಾಗಿಯೇ ಇದೆ . ದಿನವೊಂದಕ್ಕೆ ಕರ್ನಾಟಕದಲ್ಲಿ 33 ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. 300 ಜನ ಗಾಯಗೊಳ್ಳುತ್ತಿದ್ದಾರೆ. ಜೀವ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೇವೆ. ಜನ ಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು ಎಂದರು.

ಅಕ್ರಮ ವಲಸಿಗರ ಬಗ್ಗೆ ಕೇಂದ್ರ ಸರ್ಕಾರದಿಂದ ಇನ್ನು ಯಾವುದೇ ಮಾಹಿತಿ ಬಂದಿಲ್ಲ. ಸೂಚನೆ ಬಂದ ತಕ್ಷಣ ನಾವು ಕ್ರಮ ಕೈಗೊಳ್ಳುತ್ತೇವೆ. ಮೊಬೈಲ್ ಹಾಗೂ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ಬೇಡ. ಅಪರಾಧಿಗಳನ್ನು ಪತ್ತೆಹಚ್ಚಿ ಮಾಲನ್ನು ವಶಪಡಿಸಿಕೊಂಡು ಮಾಲೀಕರಿಗೆ ಒಪ್ಪಿಸುತ್ತಿದ್ದೇವೆ. ಶೇ.70ರಷ್ಟು ಅಪರಾಧಗಳು ಪತ್ತೆಯಾಗುತ್ತಿವೆ ಎಂದು ಹೇಳಿದರು.

ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವ ಐದು ಮಂದಿ ಚಿಣ್ಣರನ್ನು ಇಂದುಒಂದು ದಿನದ ಪೊಲೀಸ್ ಆಯುಕ್ತರನ್ನಾಗಿ ಕೂರಿಸಿ ಇಲಾಖೆಗೆ ಪರಿಚಯ ಮಾಡಿಸಲಾಯಿತು. ಆ ಮಕ್ಕಳ ಆಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದೇವೆ ಎಂದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ