ಹೊಸ ವರ್ಷಾಚರಣೆ ವೇಳೆ ಕಿಡಿಗೇಡಿಗಳ ಅನುಚಿತ ವರ್ತನೆ ಕುರಿತು ಭಾಸ್ಕರ ರಾವ್ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.1-ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ಆದರೂ ಬೆಂಗಳೂರು ಭಾಸ್ಕರರಾವ್ ಲೀಸರು ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ ಸ್ವಪ್ರೇರಣೆಯಿಂದ ಕ್ರಮಕೈಗೊಳ್ಳಲಿದ್ದಾರೆ ಎಂದು ನಗರ ಭಾಸ್ಕರರಾವ್ ಲೀಸ್ ಆಯುಕ್ತ ಭಾಸ್ಕರರಾವ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷಾಚರಣೆ ಅತ್ಯಂತ ಶಾಂತಿಯುತ ಮತ್ತು ಸುರಕ್ಷಿತವಾಗಿ ನಡೆದಿದೆ. ಇದಕ್ಕೆ ಸಹಕರಿಸಿದ ಸಾರ್ವಜನಿಕರಿಗೆ ಧನ್ಯವಾದ ಹೇಳುತ್ತೇನೆ. ಕೆಲವು ವಾಹಿನಿಯಲ್ಲಿ ಹೊಸ ವರ್ಷಾಚರಣೆ ವೇಳೆ ಮಹಿಳೆಯರು ಮತ್ತು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ವರದಿಯಾಗಿದೆ. ಆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಈವರೆಗೂ ನಮಗೆ ಯಾರೂ ದೂರು ಕೊಟ್ಟಿಲ್ಲ.

ಒಂದು ವೇಳೆ ದೂರು ಬರದೆ ಇದ್ದರೂ ನಾವು ಎಲ್ಲೆಡೆ ಅಳವಡಿಸಿರುವ ಸಿಸಿ ಟಿವಿಯ ದೃಶ್ಯಾವಳಿ ಪರಿಶೀಲನೆ ನಡೆಸುತ್ತೇವೆ. ಅದರಲ್ಲಿ ಅಸಭ್ಯ ವರ್ತನೆ ಕಂಡುಬಂದರೆ ತಪ್ಪು ಮಾಡಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಎಂ.ಜಿ.ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಯುವತಿಯೊಬ್ಬರು ಚಪ್ಪಲಿಯಿಂದ ಹೊಡೆದಿರುವುದನ್ನು ಶ್ಲಾಘಿಸಿದ ಆಯುಕ್ತರು, ಆಕೆಯ ದಿಟ್ಟತನವನ್ನು ಮೆಚ್ಚಬೇಕು ಎಂದರು.

ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚು ಜನ ಸೇರಿದ್ದರು. ಸುಮಾರು ಮೂರೂವರೆ ಲಕ್ಷ ಜನ ಸಾರ್ವಜನಿಕ ಸ್ಥಳದಲ್ಲಿ ಸಮಾವೇಶಗೊಂಡು ವರ್ಷಾಚರಣೆ ಮಾಡಿದ್ದಾರೆ. ಎಂ.ಜಿ.ರಸ್ತೆ, ಬ್ರಿಗೇಡ್‍ರಸ್ತೆ, ಕೋರಮಂಗಲ ಸೇರಿದಂತೆ ಹಲವು ಕಡೆ ಸಂಭ್ರಮಾಚರಣೆ ನಡೆದಿದೆ.  ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತೆಯಾಗಿ ಹಲವು ರೀತಿಯ ಕ್ರಮಕೈಗೊಳ್ಳಲಾಗಿತ್ತು. ಸುಮಾರು 178 ಕಡೆ ಮಹಿಳಾ ಸುರಕ್ಷತಾ ಸ್ಥಳಗಳನ್ನು ನಿರ್ಮಿಸಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಸರ್ಕಾರ ಕೂಡ ಕಾಲ ಕಾಲಕ್ಕೆ ಸುರಕ್ಷತೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ನಾವು ಅದನ್ನು ಪಾಲನೆ ಮಾಡಿದ್ದೇವೆ ಎಂದು ಹೇಳಿದರು.

ಈ ಬಾರಿ ಠಾಣೆಗಳ ಪೊಲೀಸರ ಜೊತೆಗೆ ಸಿಎಆರ್, ಕೆಎಸ್‍ಆರ್‍ಪಿ, ನಾಗರಿಕ ರಕ್ಷಣಾ ಪಡೆಗಳು, ಟ್ರಾಫಿಕ್ ವಾರ್ಡನ್ಸ್ ಮತ್ತು 500 ಮಂದಿ ಸಾರ್ವಜನಿಕರನ್ನು ರಕ್ಷಣಾ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗಿತ್ತು. ಸಾರ್ವಜನಿಕರಿಗೆ ಪೊಲೀಸ್ ಜಾಕೆಟ್‍ಗಳನ್ನು ನೀಡಿದ್ದು, ಅವರು ರಕ್ಷಣಾ ಕಾರ್ಯದಲ್ಲಿ ಯಶಸ್ವಿಯಾಗಿ ಭಾಗಿಯಾಗಿದ್ದರು ಎಂದು ಹೇಳಿದರು.

ಎಎಸ್‍ಐ ಹುದ್ದೆ ಮೇಲ್ದರ್ಜೆಗೆ:
ಪೊಲೀಸ್ ಇಲಾಖೆಯಲ್ಲಿ ಸುಮಾರು 25 ವರ್ಷ ಸೇವೆ ಸಲ್ಲಿಸಿ ಬಡ್ತಿ ಪಡೆದ ಎಎಸ್‍ಐ ಹುದ್ದೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಅವರು ಕಾನ್‍ಸ್ಟೆಬಲ್‍ಗಳಂತೆಯೂ ಇಲ್ಲ, ಇತ್ತ ಅಧಿಕಾರಿಗಳಂತೆಯೂ ಇಲ್ಲ. ಹೀಗಾಗಿ ಅವರಿಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟು ಕೆಲಸ ಮಾಡಿಸಲು ಅವಕಾಶವಿದೆ. ಶೀಘ್ರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

Facebook Comments