“ಜನರ ಸಹಕಾರ ಮರೆಯಲಾಗದು, ಆಯುಕ್ತರಾಗಿ ಕೆಲಸ ಮಾಡಿರುವುದು ತೃಪ್ತಿ ತಂದಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.1- ಜನರ ಸಹಕಾರ ಮರೆಯಲಾಗದು. ಒಂದು ವರ್ಷ ಬೆಂಗಳೂರು ಆಯುಕ್ತರಾಗಿ ಕೆಲಸ ಮಾಡಿರುವುದು ತೃಪ್ತಿ ತಂದಿದೆ ಎಂದು ನಿರ್ಗಮಿತ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಹೇಳಿದ್ದಾರೆ.

ಅಧಿಕಾರ ಹಸ್ತಾಂತರಿಸಿದ ವೇಳೆ ತಮ್ಮ ಟ್ವಿಟರ್ ಖಾತೆಯಲ್ಲಿ ನಗರದ ಜನರಿಗೆ ಧನ್ಯವಾದ ಹೇಳಿದ್ದಾರೆ. ಕಳೆದ ಒಂದು ವರ್ಷಗಳ ಕಾಲ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿರುವುದು ತೃಪ್ತಿ ತಂದಿದೆ.

ಇಂದು ಜವಾಬ್ದಾರಿ ಹಸ್ತಾಂತರಿಸಿದ್ದೇನೆ. ನನ್ನ ಹೃದಯಾಳದಿಂದ ಪ್ರತಿಯೊಬ್ಬ ನಾಗರಿಕರಿಗೂ ಧನ್ಯವಾದ ಹೇಳುತ್ತೇನೆ. ಜನರ ತಾಳ್ಮೆ, ಸಹಕಾರ, ಬೆಂಬಲವನ್ನು ಎಂದಿಗೂ ಮರೆಯುವುದಿಲ್ಲ. ನನಗೆ ಮತ್ತು ನನ್ನ ಪೊಲೀಸ್ ತಂಡಕ್ಕೆ ಜನ ಉತ್ತಮ ಸಹಕಾರ ನೀಡಿದ್ದಾರೆ ಎಂದಿದ್ದಾರೆ.

ಕಳೆದ ಆಗಸ್ಟ್‍ನಿಂದ ಈವರೆಗೂ ಅದ್ಭತವಾದ ಬೆಂಬಲ ಸಿಕ್ಕಿದೆ. ನಾನು ಕೂಡ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲೂ ನಿಮ್ಮ ಸ್ನೇಹಿತನಾಗಿ ಮುಂದುವರೆಯುತ್ತೇನೆ ಎಂದು ಟ್ವಟರ್‍ನಲ್ಲಿ ತಮ್ಮ ಭಾವನೆ ಹಂಚಿಕೊಂಡಿದ್ದಾರೆ.

ಇದೇ ವೇಳೆ ಬ್ಯಾಟನ್ ನೀಡುವ ಮೂಲಕ ಕಮಲ್ ಪಂತ್‍ರಿಗೆ ನೂತನ ಪೊಲೀಸ್ ಆಯುಕ್ತರ ಜವಾಬ್ದಾರಿ ಹಸ್ತಾಂತರಿಸಿದರು. ನಿರ್ಗಮನದ ವೇಳೆ ಭಾಸ್ಕರ್ ರಾವ್ ಭಾವೋದ್ವೇಗಕ್ಕೆ ಒಳಗಾದರು ಎಂದು ಹೇಳಲಾಗಿದೆ. ನಗರದಲ್ಲಿ ಕೆಲಸ ಮಾಡುವ ಮಹಿಳಾ ಆಧಿಕಾರಿಗಳು ಭಾಸ್ಕರ್ ರಾವ್ ಅವರೊಂದಿಗೆ ಗ್ರೂಪ್ ಫೋಟೋಸೆಷನ್ ನಡೆಸಿದರು.

Facebook Comments

Sri Raghav

Admin