ಎಸ್‍ಎಸ್‍ಎಲ್‍ಸಿ ರಿಸಲ್ಟ್ ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ಗೀಳು ನನಗಿಲ್ಲ : ಭವಾನಿ ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಕಳೆದ ಬಾರಿ ಹಾಸನ ಜಿಲ್ಲೆ ಎಸ್.ಎಸ್.ಎಲ್. ಸಿ‌ ಫಲಿತಾಂಶದಲ್ಲಿ ಪ್ರಥಮ ಸ್ಥಾನಗಳಿಸಿದ ವಿಷಯ ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ಗೀಳಿಲ್ಲ ಅದರ ಅವಶ್ಯಕತೆಯೂ ನನಗಿಲ್ಲಾ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭವಾನಿ ರೇವಣ್ಣನವರು ಹೇಳಿದರು.

ನಗರದ ಜ್ಞಾನಾಕ್ಷಿ ಕನ್ವೆನ್ಷನ್ ಹಾಲ್ ನಲ್ಲಿಂದು ನಡೆದ ಜಿಲ್ಲೆಯಲ್ಲಿ ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯಲು ಶ್ರಮಿಸಿದ ಜಿಲ್ಲೆಯ ಪ್ರೌಢಶಾಲೆ ಶಿಕ್ಷಕರುಗಳನ್ನು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕೆಲವರು ಫಲಿತಾಂಶದ ವಿಷಯ ಬಳಸಿಕೊಂಡು ಭವಾನಿ ಅವರು ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಅದರೆ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎಚ್.ಡಿ.ರೇವಣ್ಣ ಅವರ ಕೊಡುಗೆ ಅಪಾರವಿದೆ ಇಂದು ಅದರ ಫಲ ದೊರೆತಿದ್ದು ಇದರಲ್ಲಿ ಪೊಷಕರು , ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ, ಫಲಿತಾಂಶದ ವಿಚಾರದಲ್ಲಿ ಪ್ರಚಾರ ಪಡೆಯುವ ಅವಶ್ಯಕತೆ ನನಗೆ ಇಲ್ಲ ಎಂದು ಸ್ಪಷ್ಟಪಡಿಸಿದರು‌.

# ಪ್ರಥಮ‌ ಸ್ಥಾನ ಕಾಯ್ದುಕೊಳ್ಳಿ;
ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕೇವಲ 72 ದಿನಗಳು ಬಾಕಿಯಿದ್ದು, 2019-2020 ರಲ್ಲಿಯೂ ಪ್ರಥಮ ಸ್ಥಾನದ ಫಲಿತಾಂಶವನ್ನು ಜಿಲ್ಲೆಗೆ ಉಳಿಸಿಕೊಡುವಲ್ಲಿ ಡಿ.ಡಿ.ಪಿ.ಐ., ಬಿ.ಇ. ಒ. ಮತ್ತು ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು ಶ್ರಮಿಸಬೇಕು ಹಾಗೂ ಈ ಬಾರಿಯೂ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವಂತೆ ಹೇಳಿದರು‌.

ಕಳೆದ ಬಾರಿ ಜಿಲ್ಲೆಯನ್ನು ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಮೊದಲ ಸ್ಥಾನ ಬರಲು ಶ್ರಮವಹಿಸಿದ ಶಿಕ್ಷಕರಿಗೆ, ಪೋಷಕರಿಗೆ ಮತ್ತು ವಿದ್ಯಾರ್ಥಿಗಳನ್ನು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರಶಂಶಿಸಿ, ಇಡೀ ರಾಜ್ಯದಲ್ಲಿ ಸರ್ಕಾರಿ ಶಾಲಾ ಹಂತದಲ್ಲಿ ಸಭೆ ಮಾಡೋದು ಹಾಸನ ಜಿಲ್ಲೆಯಲ್ಲಿ ಮಾತ್ರ ಅದಕ್ಕೆ ಪೋಷಕರು, ಶಿಕ್ಷಕರು ಮುಖ್ಯವಾಗಿ ಸಹಕಾರ ನೀಡಿದ್ದು, ಈ ಬಾರಿಯೂ ವಿದ್ಯಾರ್ಥಿಗಳ‌ ಮತ್ತು ಪೊಷಕರಿಗೆ ಪ್ರತ್ಯೇಕವಾಗಿ ಸಭೆ ನಡೆಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಶಿಕ್ಷಕರೆಂದರೇ ಭಯದ ಮನೋಭಾವ ಮೂಡಿಸದೆ ಆತ್ಮೀಯ ಭಾವನೆ ‌ಮೂಡುವಂತೆ ವರ್ತಿಸುವಂತೆ ಮತ್ತು ವಿದ್ಯಾರ್ಥಿ ಪೋಷಕರೊಂದಿಗೂ ಸೌಜನ್ಯದಿಂದ ವರ್ತಿಸಿ ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಲು ತಿಳಿಸಿದರು.ಕೆಲವು ವಿಷಯದಲ್ಲಿ ಚುರುಕಿಲ್ಲದ ವಿದ್ಯಾರ್ಥಿಗಳ ಕಡೆ ಹೆಚ್ಚು ಗಮನಹರಿಸಿ ಉತ್ತೇಜಿಸುವ ಕೆಲಸ‌ ಆಗಬೇಕು, ಅನಗತ್ಯವಾಗಿ ಸಮಯ ವ್ಯಯಿಸದೇ, ಮೊಬೈಲ್ ಗಳಿಂದ ದೂರ ಇರುವುದು, ಊಟದ ಶೈಲಿ, ಓದುವ ವಿಧಾನ ಕುರಿತು ಶಿಕ್ಷಕರು ತಿಳಿ ಹೇಳುವಂತೆ ಭವಾನಿ ರೇವಣ್ಣ ಅವರು ಹೇಳಿದರು.

ಜಿ.ಪಂ. ಉಪಕಾರ್ಯದರ್ಶಿ ಚಂದ್ರಶೇಖರ್ ಅವರು ಮಾತನಾಡಿ ಶಿಲೆಯಲ್ಲಿ ಕಾಣುವ ಕಳೆಗೆ ಶಿಲ್ಪಿ ಕಾರಣವಾದ್ದಂತೆ ಕಳೆದ ವರ್ಷದ ಪ್ರೌಢ ಶಾಲಾ ಶಿಕ್ಷಣ ಫಲಿತಾಂಶದ ಹಿಂದಿನ ಶಿಲ್ಪಿಗಳಾಗಿ ಅಧ್ಯಾಪಕ, ಪೋಷಕರಿದ್ದಾರೆ ಅದೇ ರೀತಿ ಈ ಬಾರಿಯೂ ಸಹಕರಿಸಿರಿ ಎಂದು ಹೇಳಿದರು.ಡಿ.ಡಿ.ಪಿ.ಐ. ಪ್ರಕಾಶ್ ಅವರು ಮಾತನಾಡಿ ಇಲಾಖೆಯು 50 ಅಂಶಗಳ ಹೊತ್ತಿಗೆಯನ್ನು ಸಿದ್ದಪಡಿಸಿದ್ದು, ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಿಗೆ ತಲುಪಿಸಲಾಗುವುದು ಅದರನ್ವಯ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತರಬೇತುಗೊಳಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷರಾದ ಸ್ವರೂಪ್, ಎಲ್ಲಾ ತಾಲ್ಲೂಕುಗಳ ಬಿ.ಇ.ಓ.ಗಳು ಮತ್ತು ಜಿಲ್ಲೆಯ ಎಲ್ಲಾ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin