ಲಾಕ್‍ಡೌನ್ ಇದ್ದರೂ ಭೀಮನ ಅಮಾವಾಸ್ಯೆ ಬಿಡದ ಜನ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.20-ಭೀಮನ ಅಮಾವಾಸ್ಯೆ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದರು.

ಮಿಷನ್ ರಸ್ತೆಯ ಮಹಾಬಲೇಶ್ವರ ದೇವಸ್ಥಾನ, ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ, ಗವಿಪುರಂ ಗುಟ್ಟಹಳ್ಳಿಯಲ್ಲಿ ಬಂಡಿ ಮಾಕಾಳಿ ದೇವಸ್ಥಾನ, ನಾಗರಬಾವಿ ಸಮೀಪದ ಗಣೇಶ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಇಂದು ಬೆಳಗ್ಗೆ ಭಕ್ತರು ಸಾಲುಗಟ್ಟಿ ನಿಂತು ವಿಶೇಷ ಪೂಜೆ ಸಲ್ಲಿಸಿದರು.

ಲಾಕ್‍ಡೌನ್ ಇದ್ದರೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹಲವಾರು ಜನರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ಕೆಲವು ದೇವಾಲಯಗಳಲ್ಲಿ ಸಾರ್ವಜನಿಕರು ಮಾಸ್ಕ್‍ಗಳನ್ನು ಹಾಕಿಕೊಂಡೇ ಪೂಜೆ ಸಲ್ಲಿಸಿದರೆ, ಇನ್ನೂ ಕೆಲವು ಕಡೆ ಸಾರ್ವಜನಿಕರು ಮಾಸ್ಕ್‍ಗಳನ್ನು ಧರಿಸಿರಲಿಲ್ಲ.

ದೇಶಕ್ಕೆ ತಲೆದೋರಿರುವ ಮಹಾಮಾರಿ ಕೊರೊನಾ ನಿರ್ಮೂಲನೆಯಾಗಲಿ ಎಂದು ದೇವಾಲಯಗಳಲ್ಲಿ ಪೂಜೆ ಕೂಡ ಸಲ್ಲಿಸಲಾಯಿತು.

Facebook Comments

Sri Raghav

Admin