ಭೀಮಾ ನದಿಯಲ್ಲಿ ಮುಳುಗಿ ನಾಲ್ವರು ಬಾಲಕರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಯಾದಗಿರಿ, ಸೆ.7- ಭೀಮಾ ನದಿ ತೀರದಲ್ಲಿ ಆಟವಾಡಲು ತೆರಳಿದ್ದ ನಾಲ್ವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ನಗರದ ಹೊರವಲಯದ ಗುರುಸಣಗಿ ಬ್ರಡ್ಜ್ ಬಳಿ ನಿನ್ನೆ ಮಧ್ಯಾಹ್ನ ಬಾಲಕರು ಆಟವಾಡುತ್ತಿದ್ದರು. ನಂತರ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿದ್ದಾರೆ.

ಸಂಜೆಯಾದರೂ ಮಕ್ಕಳು ಮನೆಗೆ ಬರದಿದ್ದಾಗ ಅನುಮಾನಗೊಂಡ ಪೋಷಕರು ನದಿ ಬಳಿ ತೆರಳಿದಾಗ ಕೆಲವರು ಮಕ್ಕಳು ಇಲ್ಲಿ ಆಟವಾಡುತ್ತಾ ನದಿಗೆ ಬಿದ್ದಿರಬಹುದು ಎಂದು ತಿಳಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕತ್ತಲಾದ ಕಾರಣ ಕಾರ್ಯಾಚರಣೆಯನ್ನು ನಿಲ್ಲಿಸಿದ ಅಗ್ನಿ ಶಾಮಕ ದಳ ಹಾಗೂ ಎನ್‍ಡಿಆರ್‍ಎಫ್ ಸಿಬ್ಬಂದಿಗಳು ಇಂದು ಬೆಳಗ್ಗೆ ಮೃತ ದೇಹಗಳನ್ನು ನೀರಿನಲ್ಲಿ ಹೊರ ತೆಗೆದಿದ್ದಾರೆ.

ಮೃತ ಬಾಲಕರನ್ನು ಅಮಾನ್(16), ಅಯಾನ(16) , ರೆಹಮಾನ್(16) ಇರ್ಫಾನ್ (15) ಎಂದು ತಿಳಿದು ಬಂದಿದೆ. ಸ್ಥಳಕ್ಕೆ ದೌಡಾಯಿಸಿದ ಎಸ್ಪಿ ಋಷಿಕೇಶ್ , ಭಗವಾನ್ ಸೋನವಣೆ, ತಹಶೀಲ್ದಾರ್ ಸುರೇಶ್ ಆಮಕಲಗಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಸ್ಥಳದಲ್ಲಿ ಮೃತ ಬಾಲಕ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

Facebook Comments