ಭೋಪಾಲ್ ಅನಿಲ ದುರಂತ 20ನೇ ಶತಮಾನದ ವಿಶ್ವದ ಅತೀ ಭೀಕರ ಘಟನೆ : ವಿಶ್ವಸಂಸ್ಥೆ ವರದಿ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಏ.20-ಸಹಸ್ರಾರು ಜನರನ್ನು ಆಪೋಶನ ತೆಗೆದುಕೊಂಡ 1984ರ ಭೋಪಾಲ್ ಅನಿಲ ದುರಂತ 20ನೇ ಶತಮಾನದ ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರ್ಘಟನೆಗಳಲ್ಲಿ ಒಂದು ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

ಪ್ರತಿ ವರ್ಷ ವಿಶ್ವದಲ್ಲಿ ಉದ್ಯೋಗಕ್ಕೆ ಸಂಬಂಧಪಟ್ಟ ಅಪಘಾತಗಳು ಮತ್ತು ರೋಗಗಳಿಂದ 2.78 ಲಕ್ಷ ಕಾರ್ಮಿಕರು ದುರಂತ ಸಾವಿಗೀಡಾಗುತ್ತಿದ್ದಾರೆ ಎಂದು ಯುನೈಟೆಡ್ ನೇಷನ್ಸ್(ಯುಎನ್) ವರದಿಯಲ್ಲಿ ತಿಳಿಸಲಾಗಿದೆ.ವಿಶ್ವಸಂಸ್ಥೆಯ ಕಾರ್ಮಿಕ ಘಟಕವಾದ ಇಂಟರ್‍ನ್ಯಾಷನಲ್ ಲೇಬರ್ ಆರ್ಗನೈಸೇಷನ್(ಐಎಲ್‍ಒ) ಈ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿದೆ.

ಮಧ್ಯಪ್ರದೇಶದ ರಾಜಧಾನಿಯ ಯೂನಿಯನ್ ಕಾರ್ಬೈಡ್ ಪೆಸ್ಟಿಸೈಡ್ ಘಟಕದಲ್ಲಿ 1984ರ ಡಿಸೆಂಬರ್ 2ರ ಮಧ್ಯರಾತ್ರಿ 30 ಟನ್ನುಗಳಿಗೂ ಅಧಿಕ ಪ್ರಮಾಣದ ಮಿಥೈಲ್ ಐಸೋಸೈನೇಟ್ ಅನಿಲ ಸೋರಿಕೆಯಾಯಿತು. ಈ ಘೋರ ದುರಂತದಲ್ಲಿ 15,000ಕ್ಕೂ ಹೆಚ್ಚು ಮಂದಿ ಬಲಿಯಾಗಿ. ಸುಮಾರು ಆರು ಲಕ್ಷ ಮಂದಿ ದುಷ್ಪರಿಣಾಮಕ್ಕೆ ಒಳಗಾದರು.

ಈ ದುರಂತದಲ್ಲಿ ಬದುಕಿಳಿದ ಅನೇಕ ಮಂದಿ ಈಗಲೂ ಉಸಿರಾಟದ ತೊಂದರೆ, ಹಾಗೂ ವಿವಿಧ ಅಂಗ ಹಾನಿಯಿಂದ ಬಳಲುತ್ತಿದ್ದಾರೆ. ದಿ ಸೆಫ್ಟಿ ಅಂಡ್ ಹೆಲ್ತ್ ಅಟ್ ದಿ ಹಾರ್ಟ್ ಆಫ್ ದಿ ಫ್ಯೂಚರ್ ಆಫ್ ವರ್ಕ್-ಬಿಲ್ಡಿಂಗ್ ಆನ್ 100 ಇಯರ್ಸ್ ಆಫ್ ಎಕ್ಸ್‍ಪಿರಿಯನ್ಸ್-ಶೀರ್ಷಿಕೆಯ ಈ ವರದಿಯಲ್ಲಿ 1919ರ ನಂತರದ ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರ್ಘಟನೆಗಳಲ್ಲಿ ಭೋಪಾಲ್ ಅನಿಲ ದುರಂತ ಕೂಡ ಒಂದು ಎಂದು ತಿಳಿಸಿದೆ.

20ನೇ ಶತಮಾನದ ವಿಶ್ವದ ಭೀಕರ ಕೈಗಾರಿಕಾ ಅಪಘಾತಗಳಲ್ಲಿ 1986ರ ಉಕ್ರೇನ್‍ನ ಚರ್ನೋಬಿಲ್ ದುರಂತ, ಜಪಾನ್‍ನ 2011ರ ಫಕುಶಿಮಾ ಪರಮಾಣು ದುರ್ಘಟನೆ ಹಾಗೂ ಢಾಕಾದ 2013ರ ರಾಣಾ ಪ್ಲಾಜಾ ಕಟ್ಟಡ ಅವಘಡಗಳೂ ಸೇರಿವೆ.

ಪ್ರತಿ ವರ್ಷ ವಿಶ್ವದಲ್ಲಿ ಉದ್ಯೋಗಕ್ಕೆ ಸಂಬಂಧಪಟ್ಟ ಅಪಘಾತಗಳು ಮತ್ತು ರೋಗಗಳಿಂದ 2.78 ಲಕ್ಷ ಕಾರ್ಮಿಕರು ದುರಂತ ಸಾವಿಗೀಡಾಗುತ್ತಿದ್ದಾರೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ