ಭುವನೇಶ್ವರ್, ಠಾಕೂರ್’ಗೆ ಅನ್ಯಾಯ : ವಿರಾಟ್ ಸಿಡಿಮಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಪುಣೆ, ಮಾ. 29- ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ 7 ರನ್‍ಗಳಿಂದ ವಿರೋಚಿತ ಗೆಲುವು ಸಾಧಿಸಿ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡರೂ ಕೂಡ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸಿಡಿಮಿಡಿಗೊಂಡಿದ್ದಾರೆ. ಪಂದ್ಯ ಮುಗಿದ ನಂತರ ಭಾರತ ಪಂದ್ಯ ಜಯಿಸಲು ಕಾರಣವಾಗಿರುವ ಶಾರ್ದೂಲ್ ಠಾಕೂರ್ ಅವರಿಗೆ ಪಂದ್ಯ ಪುರುಷೋತ್ತಮ ಹಾಗೂ ಸರಣಿಯುದ್ದಕ್ಕೂ ಬ್ಯಾಟಿಂಗ್ ಪಿಚ್‍ನಲ್ಲಿ ಉಪಯುಕ್ತ ಬೌಲಿಂಗ್ ಮಾಡಿದ್ದ ವೇಗಿ ಭುವನೇಶ್ವರ್‍ಕುಮಾರ್‍ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗಳು ಲಭಿಸಬಹುದು ಎಂದು ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಕ್ರೀಡಾಪ್ರೇಮಿಗಳು ಲೆಕ್ಕಾಚಾರಗಳು ಹಾಕಿಕೊಂಡಿದ್ದರು.

ನಿನ್ನೆಯ ಪಂದ್ಯದಲ್ಲಿ ಶಾರ್ದೂಲ್ ಬ್ಯಾಟಿಂಗ್‍ನಲ್ಲಿ 30 ರನ್ ಗಳಿಸಿದ್ದರೆ ಬೌಲಿಂಗ್‍ನಲ್ಲಿ 4 ವಿಕೆಟ್ ಕೆಡವಿ ಉತ್ತಮ ಅಲೌಂಡರ್ ಪ್ರದರ್ಶನ ನೀಡಿದ್ದರಾದರೂ ಕೆಚ್ಚೆದೆಯ ಆಟ ಪ್ರದರ್ಶಿಸಿ ಅಜೇಯ 95 ರನ್ ಗಳಿಸಿದ ಇಂಗ್ಲೆಂಡ್‍ನ ಸ್ಯಾಮ್ ಕರನ್‍ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಲಾಗಿತ್ತು.

ಇದೇ ರೀತಿ ಬ್ಯಾಟಿಂಗ್ ಪಿಚ್‍ನಲ್ಲೂ ಲಯಬದ್ಧವಾದ ಬೌಲಿಂಗ್ ಮಾಡಿ ಕೇವಲ 4.65 ಸ್ಟ್ರೆಕ್‍ರೇಟ್‍ನಲ್ಲಿ 3 ಪಂದ್ಯಗಳಿಂದ 6 ವಿಕೆಟ್‍ಗಳನ್ನು ಭುವನೇಶ್ವರ್‍ಕುಮಾರ್ ಕಬಳಿಸಿ ಭಾರತ ಸರಣಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರಾದರೂ ಎದುರಾಳಿ ತಂಡದ ಆಟಗಾರ ಜಾನಿ ಬ್ಯಾರೆಸ್ಟೋ ಅವರಿಗೆ ಸರಣಿ ಪುರುಷೋತ್ತಮ ಪ್ರಶಸ್ತಿ ನೀಡಿದ್ದರಿಂದ ಭಾರತ ತಂಡದ ಶಾರ್ದೂಲ್ ಠಾಕೂರ್ ಹಾಗೂ ಭುವನೇಶ್ವರ್‍ಗೆ ಅನ್ಯಾಯವಾಗಿದೆ ಎಂದು ಕಿಂಗ್ ಕೊಹ್ಲಿ ಸಿಡಿಮಿಡಿಗೊಂಡಿದ್ದಾರೆ. ಕೊಹ್ಲಿಯ ಕೋಪ ಸರಿಯಾಗಿಯೇ ಇದೆಯಾದರೂ ಇಂಗ್ಲೆಂಡ್ ವಿರುದ್ಧ ಮೂರು ಮಾದರಿಯ ಸರಣಿಗಳನ್ನು ಗೆದ್ದಿರುವುದು ಹೋಳಿಹಬ್ಬಕ್ಕೆ ಬಿಗ್‍ಗಿಫ್ಟ್ ಆಗಿದೆ.

Facebook Comments