ದ್ರಾವಿಡ್ ನಿರ್ಧಾರದಿಂದಲೇ ತಂಡ ಗೆದ್ದಿದೆ : ಭುವಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲಂಬೊ, ಜು. 21- ತರಬೇತುದಾರ ರಾಹುಲ್ ದ್ರಾವಿಡ್‍ರ ನಿರ್ಧಾರದಿಂದಲೇ ನಾವು ಗೆದ್ದಿದ್ದೇವೆ ಎಂದು ಭಾರತ ತಂಡದ ಉಪನಾಯಕ ಭುವನೇಶ್ವರ್‍ಕುಮಾರ್ ಅವರು ಸಂತಸದ ನುಡಿಗಳನ್ನಾಡಿದ್ದಾರೆ. ಕಳೆದ ರಾತ್ರಿ ಅತಿಥೇಯ ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳಿಂದ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭುವಿ, ನಮ್ಮ ತರಬೇತುದಾರ ರಾಹುಲ್‍ದ್ರಾವಿಡ್ ಅವರು ಪಂದ್ಯ ಗೆಲ್ಲಲು ಮಾಡಿದ ಕಾರ್ಯತಂತ್ರ ಉತ್ತಮವಾಗಿತ್ತು. ಬಲಿಷ್ಠ ಬ್ಯಾಟ್ಸ್‍ಮನ್‍ಗಳು ಪೆವಿಲಿಯನ್‍ಗೆ ತೆರಳಿದ ನಂತರ ದೀಪಕ್ ಚಹಾರ್‍ರನ್ನು ಮೇಲ್ಪಂಕ್ತಿಯಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಿದ ನಿರ್ಧಾರ ಸರಿಯಾಗಿತ್ತು.

ನಾನು ಹಾಗೂ ಚಹಾರ್ ಕೊನೆಯವರೆಗೂ ಮೈದಾನದಲ್ಲಿ ಉಳಿಯಲು ನಿರ್ಧರಿಸಿದ್ದೆವು, ದೀಪಕ್ ಚಹರ್ ಉತ್ತಮ ಬ್ಯಾಟಿಂಗ್ ಮಾಡಿರುವುದನ್ನು ನೋಡಿದರೆ ಮುಂದೊಂದು ದಿನ ಅವರು ಭಾರತ ತಂಡದ ಉತ್ತಮ ಅಲ್‍ರೌಂಡರ್ ಆಗುವ ಎಲ್ಲಾ ಲಕ್ಷಣಗಳಿವೆ ಎಂದು ಚಹರ್‍ರನ್ನು ಭುವಿ ಹೊಗಳಿದರು.

ಚಹರ್ ಅವರು ಈ ಹಿಂದೆಯೂ ರಣಜಿ ಪಂದ್ಯ ಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ, ಕಳೆದ ರಾತ್ರಿ ಕೂಡ ಶ್ರೀಲಂಕಾ ನೀಡಿದ 276 ರನ್‍ಗಳ ಬೆನ್ನಟ್ಟಿ ದಾಗ ತಂಡವು 193 ರನ್‍ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ನಾನು ಹಾಗೂ ದೀಪಕ್ ಉತ್ತಮ ಜೊತೆಯಾಟ ನೀಡಿದ್ದಲ್ಲದೆ 8 ವಿಕೆಟ್‍ಗೆ 84 ರನ್‍ಗಳನ್ನು ಕಲೆಹಾಕುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದೆವು.

ದೀಪಕ್ ಚಹರ್ ಆಕ್ರಮಣ ಕಾರಿ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಸರಾಸರಿ 6ಕ್ಕಿಂತ ಕಡಿಮೆ ಕುಸಿಯದಂತೆ ನೋಡಿಕೊಂಡರು. ಕೆಲವು ಆಕ್ರಮಣಕಾರಿ ಹೊಡೆತವನ್ನು ಬಾರಿಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಿದರು ಎಂದು ಹೇಳಿದರು. ರಾಹುಲ್ ದ್ರಾವಿಡ್ ಅವರು ಇದೇ ಮೊದಲ ಬಾರಿಗೆ ಹಿರಿಯರ ತಂಡದ ತರಬೇತುದಾರರಾಗಿದ್ದು ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ, ಎರಡು ಪಂದ್ಯಗಳಲ್ಲೂ ನನ್ನ ಬೌಲಿಂಗ್ ತೃಪ್ತಿ ತಂದಿದೆ, ಉಳಿದ ಬೌಲರ್‍ಗಳ ನಿರ್ವಹಣೆಯೂ ಉತ್ತಮವಾಗಿದೆ ಎಂದು ಭುವಿ ಹೇಳಿದರು.

ಶ್ರೀಲಂಕಾ ವಿರುದ್ಧ ನಡೆದ 2ನೆ ಪಂದ್ಯದಲ್ಲಿ ಉತ್ತಮ ಬೌಲಿಂಗ್‍ನಿಂದಲೂ ಗಮನ ಸೆಳೆದಿದ್ದ ದೀಪಕ್ ಚಹರ್ 53 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ 1 ಸಿಕ್ಸ್ ಹಾಗೂ 7 ಬೌಂಡರಿ ನೆರವಿನಿಂದ 69 ರನ್ ಗಳಿಸಿದ್ದಲ್ಲದೆ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Facebook Comments