ಪ್ರೇಕ್ಷಕರ ಮುಂದೆ ‘ಬಿಚ್ಚುಗತ್ತಿ’

ಈ ಸುದ್ದಿಯನ್ನು ಶೇರ್ ಮಾಡಿ

ಚಂದನವನದಲ್ಲಿ ಆಗಾಗ ಐತಿಹಾಸಿಕ ಚಿತ್ರಗಳು ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿವೆ. ಆ ನಿಟ್ಟಿನಲ್ಲಿ ಬಹಳಷ್ಟು ನಿರೀಕ್ಷೆಗಳೊಂದಿಗೆ ದುರ್ಗದ ಐತಿಹಾಸಿಕ ಕಥಾನಕ ಬಿಚ್ಚುಗತ್ತಿ ಚಿತ್ರವು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಚಿತ್ರದುರ್ಗದ ಒಂದೊಂದು ಕಲ್ಲೂ ಇತಿಹಾಸವನ್ನು ಸಾರುತ್ತವೆ ಎಂಬ ಮಾತಿದೆ.

ಅಂತೆಯೇ ಅಲ್ಲಿನ ಪಾಳೇಗಾರರ ಕುರಿತು ಹಲವು ಕಥೆ, ಕಾದಂಬರಿಗಳು ಪ್ರಕಟವಾಗಿದ್ದು, ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ ಬಿಚ್ಚುಗತ್ತಿ ತೆರೆಗೆ ಬರಲಿದೆ. ಅಲೆಮಾರಿ ಸಂತು ಎಂದೇ ಹೆಸರಾಗಿರುವ ಹರಿ ಸಂತೋಷ್ ಅವರ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಾಯಕನಾಗಿದ್ದು ನಟಿ ಹರಿಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ.

ಬಾಹುಬಲಿ ಖ್ಯಾತಿಯ ಪ್ರಭಾಕರ್ ಮುದ್ದಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಮೊನ್ನೆ ಈ ಚಿತ್ರದ ಟೈಗರ್ ಟ್ರೇಲರ್ ವಿಶೇಷವಾಗಿ ಲಾಂಚ್ ಆಗಿದೆ. ಈ ವೇಳೆ ಮಾತನಾಡಿ ನಿರ್ದೇಶಕ ಹರಿ ಸಂತೋಷ್, ಇದು ನನ್ನ ನಿರ್ದೇಶನದ 9ನೆ ಸಿನಿಮಾ. ಇಲ್ಲಿ ಹುಲಿಯನ್ನು ಸಿಜಿಯಲ್ಲಿ ತೋರಿಸಿದ್ದೇವೆ. ಅದು ಚಿತ್ರದ ಪ್ರಮುಖ ಭಾಗವಾಗಿದೆ. ಹಂಸಲೇಖ ಅವರ ಮೂಲಕ ಈ ಸಿನಿಮಾ ನನಗೆ ದೊರೆತಿದೆ. ಈ ಚಿತ್ರದ ಹಾಡುಗಳಿಗೆ ಹಂಸಲೇಖ ಹಾಗೂ ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾ ಮಾಡಿದ್ದೇನೆ. ಇಂತಹ ಸಿನಿಮಾ ಮಾಡುವುದು ಸುಲಭದ ಕೆಲಸವಲ್ಲ. ಇಡೀ ತಂಡವೇ ಶ್ರಮಪಟ್ಟು ಕೆಲಸ ಮಾಡಬೇಕಾಗುತ್ತದೆ. ಸಿನಿಮಾ ಇಷ್ಟೊಂದು ಚೆನ್ನಾಗಿ ಮೂಡಿಬರುವುದಕ್ಕೆ ಕ್ಯಾಮರಾ ಮ್ಯಾನ್ ಗುರುಪ್ರಸಾದ್ ರೈ , ನಾಯಕ ರಾಜವರ್ಧನ್, ಹಂಸಲೇಖ ಅವರೇ ಕಾರಣ. ಚಿತ್ರ ಬಹಳ ಸೊಗಸಾಗಿ ಮೂಡಿಬಂದಿದೆ.
ನನಗೆ ಮತ್ತು ನಿರ್ಮಾಪಕರನ್ನು ಪರಿಚಯ ಮಾಡಿಕೊಟ್ಟವರು ನಾಯಕ ರಾಜವರ್ಧನ್. ಸಿನಿಮಾ ಚೆನ್ನಾಗಿ ಮೂಡಿಬರಲಿ ಎಂದು ನಾನು ಕೇಳಿದ ಎಲ್ಲವನ್ನೂ ಒದಗಿಸಿಕೊಟ್ಟಿದ್ದಾರೆ. ಬಾಹುಬಲಿ ಪ್ರಭಾಕರ್ ಅವರು ಮದ್ದಣ್ಣನ ಪಾತ್ರ ಮಾಡಿದ್ದಾರೆ.

ಇಂಥ ಸಿನಿಮಾ ಮಾಡುವಾಗ ಭಾಷಾ ಸ್ಪಷ್ಟತೆಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ಇನ್ನು ಈ ಚಿತ್ರದಲ್ಲಿ ನಟಿ ಹರಿಪ್ರಿಯ ತುಂಬ ಸಹಕಾರ ನೀಡಿದ್ದಾರೆ. ಅವರು ನಟನಾ ಸಾಮಥ್ರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.  ಅದೇ ರೀತಿ ನಾಯಕನ ತಾಯಿ ಪಾತ್ರ ಮಾಡಿರುವ ಸ್ಪರ್ಶರೇಖಾ ಹಾಗೂ ನಟಿ ಕಲ್ಯಾಣಿ, ಹಿರಿಯ ನಟ ಶ್ರೀನಿವಾಸಮೂರ್ತಿ, ಶಿವರಾಮಣ್ಣ ಸೇರಿದಂತೆ ಎಲ್ಲ ಕಲಾವಿದರ ಪ್ರೋತ್ಸಾಹ, ಸಹಕಾರ ತುಂಬ ಉತ್ತಮವಾಗಿತ್ತು.

ಎಡ್ವರ್ಡ್ ಕೆನಡಿ ಕಲಾ ನಿರ್ದೇಶನ ಚಿತ್ರದ ಮತ್ತೊಂದು ಹೈಲೆಟ್ ಎಂದು ಹೇಳಬಹುದು. ಇಡೀ ತಂಡ ಶ್ರಮ ವಹಿಸಿ ಒಂದು ಐತಿಹಾಸಿಕ ಚಿತ್ರವನ್ನು ನೀಡಲು ಸಿದ್ಧರಾಗಿದ್ದೇವೆ. ನಿಮ್ಮೆಲ್ಲರ ಸಹಕಾರ-ಪ್ರೋತ್ಸಾಹ ಬೇಕು ಎಂದು ನಿರ್ದೇಶಕ ಹರಿ ಸಂತೋಷ್ ಕೇಳಿಕೊಂಡರು. ಎರಡು ವರ್ಷದ ಹಿಂದೆ ಇಂಥ ಸಿನಿಮಾ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೆವು ಹೊಸ ಹುಡುಗನಿಗೆ ಇಂಥ ಪಾತ್ರ ಸಿಗೋದು ಕಷ್ಟ. ಹಂಸಲೇಖ ಅವರು ನನಗೆ ಕಾಲ್ ಮಾಡಿ ಈಥರದ ಪಾತ್ರ ಇದೆ ಮಾಡು ಎಂದು ಹೇಳಿದ್ದರು. ಆಗ ನನಗೆ ತುಂಬಾ ಖುಷಿ ಆಯ್ತು, ಶಕ್ತಿ ಮೀರಿ ಈ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ.

ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಮೇಲಿರಲಿ ಎಂದು ನಾಯಕ ನಟ ರಾಜವರ್ಧನ್ ಕೇಳಿಕೊಂಡರು. ನಟಿ ಹರಿಪ್ರಿಯಾ ಮಾತನಾಡಿ, ಇದು ನನ್ನ ಏಳನೆ ಸಿನಿಮಾ. ನನ್ನ ತಾಯಿ ಹೆಚ್ಚು ಪುಸ್ತಕಗಳನ್ನು ಓದುತ್ತಿದ್ದರು. ಶಾಲಾ ದಿನಗಳಲ್ಲೇ ನಾನು ಒನಕೆ ಓಬವ್ವ , ಕಿತ್ತೂರು ಚನ್ನಮ್ಮ ಗೆಟಪ್‍ಗಳನ್ನು ಹಾಕುತ್ತಿದ್ದೆ. ನನ್ನ ತಾಯಿಗೂ ಐತಿಹಾಸಿಕ ಕಥೆ ಎಂದರೆ ತುಂಬಾ ಇಷ್ಟ. ಇದುವೆರೆಗೂ ನಾನು ಐತಿಹಾಸಿಕ ಸಿನಿಮಾ ಮಾಡಿರಲಿಲ್ಲ.

ಕಥೆಯಿದು. ಈ ಸಿನಿಮಾದಲ್ಲಿ ನನ್ನದು ಎರಡು ಶೇಡ್ ಪಾತ್ರವಿದೆ. ಖಂಡಿತ ನಿಮ್ಮೆಲ್ಲರಿಗೂ ಇಷ್ಟವಾಗಲಿದೆ ಎಂದರು.ಸಮಾರಂಭದಲ್ಲಿ ನಾಯಕನ ತಂದೆ ಡಿಂಗ್ರಿ ನಾಗರಾಜ್, ಸಾಹಿತಿ ನಾಗೇಂದ್ರ ಪ್ರಸಾದ್, ಕಲಾವಿದರಾದ ರಮೇಶ್ ಪಂಡಿತ್, ಕಲ್ಯಾಣಿ ಕೂಡ ಹಾಜರಿದ್ದು ಚಿತ್ರದ ಕುರಿತು ಮಾತನಾಡಿದರು.  ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಚ್ಚುಗತ್ತಿ ಬಿಡುಗಡೆಗೆಯಾಗುತ್ತಿದೆ. ಪ್ರೇಕ್ಷಕರ ಗಮನ ಸೆಳೆಯುತ್ತಾರಾ ನೋಡಬೇಕು.

Facebook Comments