BIG BREAKING : ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ಚಾಕು ಇರಿತ..!

ಈ ಸುದ್ದಿಯನ್ನು ಶೇರ್ ಮಾಡಿ

Lokayukta--01-Stabbed

ಬೆಂಗಳೂರು, ಮಾ.7-ವಿಚಾರಣೆಗೆಂದು ಬಂದಿದ್ದ ವ್ಯಕ್ತಿಯೊಬ್ಬ ಲೋಕಾಯುಕ್ತ ಕಚೇರಿಯಲ್ಲಿಯೇ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.   ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‍ಶೆಟ್ಟಿ ಅವರನ್ನು ಚಿಕಿತ್ಸೆಗೆ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.೧೮ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ತೇಜಸ್ ಶರ್ಮಾ ಎಂಬುವನು ಲೋಕಾಯುಕ್ತ ನ್ಯಾಯಮೂರ್ತಿಗಳ ಭೇಟಿಗೆಂದು ಬಂದ ಸಂದರ್ಭದಲ್ಲಿ ಆರೋಪಿ ತೇಜಸ್ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಚಾಕುವಿನಿಂದ ಸತತ ಮೂರು ಬಾರಿ ಇರಿದಿದ್ದಾನೆ. ಪಕ್ಕೆಗೆ ಹಾಗೂ ಕೈಗೆ ಗಾಯಗಳಾಗಿವೆ.

 

Vishvanath-Shetty--01

ಕೂಗಾಟ ಕೇಳಿ ಕೂಡಲೇ ಕೊಠಡಿಯೊಳಗೆ ಪ್ರವೇಶಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚಾಕುವಿನಿಂದ ಇರಿತಕ್ಕೊಳಗಾದ ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ಚಿಕಿತ್ಸೆಗಾಗಿ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಧಾನಸೌಧದ ಕೂಗಳತೆ ದೂರದಲ್ಲಿರುವ ಲೋಕಾಯುಕ್ತ ಕಚೇರಿಯಲ್ಲೇ ಹಾಡಹಗಲೇ ಈ ಘಟನೆ ನಡೆದಿರುವುದು ಎಲ್ಲರನ್ನು ದಿಗ್ಭ್ರಾಂತಗೊಳಿಸಿದೆ.

ವಿವಿಧ ಪ್ರಕರಣಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಎನ್ನಲಾಗಿದ್ದು, ಇವುಗಳ ಸಂಬಂಧ ವಿವರ ಪಡೆಯಲು ನಿನ್ನೆಯಿಂದ ಲೋಕಾಯುಕ್ತರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದ್ದು, ಅವಕಾಶ ಸಿಕ್ಕಿರಲಿಲ್ಲ. ಇಂದು ವಕೀಲ ಕುಮಾರ್ ಎಂಬ ಹೆಸರಿನಲ್ಲಿ ಲೋಕಾಯುಕ್ತರ ಕಚೇರಿಗೆ ಪ್ರವೇಶ ಪಡೆದು ಈ ಘಟನೆ ನಡೆಸಿದ್ದಾನೆ. ರಾಜಸ್ಥಾನ ಮೂಲದವನಾದ ತೇಜಸ್ ಶರ್ಮಾ ತುಮಕೂರಿನ ಸೋಮೇಶ್ವರ ನಗರದಲ್ಲ್ಲಿ ವಾಸವಾಗಿದ್ದ. ಫರ್ನಿಚರ್ ಅಂಗಡಿ ನಡೆಸುತ್ತಿದ್ದ ಈತ ಫರ್ನಿಚರ್ ಟೆಂಡರ್ ಪ್ರಕ್ರಿಯೆ ಸಂಬಂಧ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ. ಇದರ ಸಂಬಂಧ ಲೋಕಾಯುಕ್ತರನ್ನು ಭೇಟಿ ಮಾಡಲು ಕಚೇರಿಗೆ ಆಗಮಿಸಿದ್ದ.

 

 

Lokayukta--011

ಇಂದು ಲೋಕಾಯುಕ್ತ ಸಂಸ್ಥೆಯ ಸಾಮಾನ್ಯ ಸಭೆ ಇದ್ದ ಸಂಬಂಧ ಸಭೆಗೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತರು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಬಂದ ಈತ ಅವರ ಮೇಲೆ ಚಾಕುವಿನಿಂದ ಪಕ್ಕೆಗೆ ಹಾಗೂ ಕೈಗೆ ಹಲ್ಲೆ ಮಾಡಿದ್ದಾನೆ. ಆಗ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಕೂಗಾಡಿದಾಗ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಅವರನ್ನು ಕೂಡಲೇ ಮಲ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತನನ್ನ ಬಂಧಿಸಿದ್ದಾರೆ.

ಸ್ಥಳಕ್ಕಾಗಮಿಸಿರುವ ವಿಧಿವಿಜ್ಞಾನ ತಂಡದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಂಧಿತ ದುಷ್ಕರ್ಮಿಗಳಿಂದ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಿರಿಯ ಸಚಿವರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಲೋಕಾಯುಕ್ತರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದರು.

 

 

Lokayukta--3

 

Facebook Comments

Sri Raghav

Admin