ಏನಾಶ್ಚರ್ಯ..! : ಯುಎನ್‍ಎಸ್‍ಸಿಯಲ್ಲಿ ಭಾರತಕ್ಕೆ ಬೆಂಬಲ ನೀಡಿದ ಚೀನಾ ಮತ್ತು ಪಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಜೂ.26- ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಎನ್‍ಎನ್‍ಎಸ್‍ಸಿ) ಯಲ್ಲಿ ಎರಡು ವರ್ಷಗಳ ಅವಧಿಗೆ ಶಾಶ್ವತ ರಹಿತ ಸ್ಥಾನಕ್ಕಾಗಿ ಭಾರತದ ಉಮೇದುವಾರಿಕೆಗೆ ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಏಷ್ಯಾ ಪೆಸಿಫಿಕ್ ಸಮೂಹದ 53 ದೇಶಗಳು ಸರ್ವಾನುಮತದ ಬೆಂಬಲ ಸೂಚಿಸಿವೆ.
ಇದು ಭಾರತಕ್ಕೆ ತುಂಬಾ ಮಹತ್ವದ ರಾಜತಾಂತ್ರಿಕ ಗೆಲುವು ಮತ್ತು ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯಕ್ಕೆ ದೊರೆತ ಮನ್ನಣೆಯೂ ಆಗಿದೆ.

ವಿಶ್ವಸಂಸ್ಥೆಯ 15 ಸದಸ್ಯ ರಾಷ್ಟ್ರಗಳ ಭದ್ರತಾ ಮಂಡಳಿಗೆ 2021-22ನೇ ಅವಧಿಗಾಗಿ ಐದು ಶಾಶ್ವತರಹಿತ ಸದಸ್ಯರ ಹುದ್ದೆಗಾಗಿ ಮುಂದಿನ ವರ್ಷ ಜೂನ್‍ನಲ್ಲಿ ಚುನಾವಣೆ ನಡೆಯಲಿದೆ.  ಭಾರತಕ್ಕೆ ಏಷ್ಯಾ ಪೆಸಿಫಿಕ್ ದೇಶಗಳ 55 ದೇಶಗಳು ಒಮ್ಮತದ ಬೆಂಬಲ ಸೂಚಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ.

ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಇಂಡೋನೆಷ್ಯಾ, ಇರಾನ್, ಜಪಾನ್, ಕುವೈತ್, ಕಿರ್ಜಿಸ್ತಾನ್, ಮಲೇಷ್ಯಾ, ಮಾಲ್ಡಿವ್ಸ್, ಮ್ಯಾನ್ಮಾರ್, ನೇಪಾಳ್, ಪಾಕಿಸ್ತಾನ, ಕತಾತ್, ಸೌದಿ ಅರೇಬಿಯಾ, ಶ್ರೀಲಂಕಾ, ಸಿರಿಯಾ, ಟರ್ಕಿ, ಯುಎಇ ಮತ್ತು ಯೆಟ್ನಾಂ ಸೇರಿದಂತೆ 55 ದೇಶಗಳು ಭಾರತದ ಪರ ಒಮ್ಮತದ ಬೆಂಬಲ ದೃಢೀಕರಿಸಿವೆ.

ಪ್ರತಿ ವರ್ಷ ಯುಎಸ್‍ಎಸ್‍ಸಿಯಲ್ಲಿನ ಐದು ತಾತ್ಕಲಿಕ ಸದಸ್ಯತ್ವ ಸ್ಥಾನಗಳಿನ್ನು(ಎರಡು ವರ್ಷಗಳ ಅವಧಿ) ಸಾಮಾನ್ಯ ಸಭೆಯ 193 ದೇಶಗಳು ಆಯ್ಕೆ ಮಾಡಲಿವೆ. ವಿಶ್ವಸಂಸ್ಥೆಯ ಪ್ರಬಲ ಅಂಗಸಂಸ್ಥೆಯಾದ ಭದ್ರತಾ ಮಂಡಳಿಯಲ್ಲಿ ಈಗಾಗಲೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ ಮತ್ತು ಚೀನಾ ಖಾಯಂ ಸದಸ್ಯತ್ವ ಸ್ಥಾನಗಳನ್ನು ಹೊಂದಿವೆ.

ಭಾರತಕ್ಕೆ 55 ದೇಶಗಳು ನೀಡಿರುವ ಸರ್ವಾನುಮತದ ಬೆಂಬಲದ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್, ಎಲ್ಲ ರಾಷ್ಟ್ರಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

Facebook Comments

Sri Raghav

Admin