BIG NEWS : ಚುನಾವಣಾ ರಣರಂಗಕ್ಕಿಳಿಯುವ 120 ಬಿಜೆಪಿ ಹುರಿಯಾಳುಗಳ ಪಟ್ಟಿ ಫೈನಲ್

ಈ ಸುದ್ದಿಯನ್ನು ಶೇರ್ ಮಾಡಿ

BJP-List

ಬೆಂಗಳೂರು,ಮಾ.13-ವಿಧಾನಸಭೆ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ಕೂಡ ಇದೇ 22ರಂದು 120 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.  ಸದ್ಯಕ್ಕೆ 120 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಲಾಗಿದ್ದು, ಇದೇ 22ರಂದು ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಹಾಲಿ 40 ಶಾಸಕರಿಗೆ ಹಾಗೂ ಸಮಾಜವಾದಿ ಪಕ್ಷ ಬಿಎಸ್‍ಆರ್, ಕೆಜೆಪಿ, ಜೆಡಿಎಸ್‍ನಿಂದ ಬಂದಿರುವ ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಲಿದೆ. ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್, ಕುಡಚಿಯ ರಾಜೀವ್, ಮೊಳಕಾಲ್ಮೂರಿನ ಎಸ್.ತಿಪ್ಪೇಸ್ವಾಮಿ, ರಾಯಚೂರಿನ ಡಾ.ಶಿವರಾಜ್ ಪಾಟೀಲ್, ಲಿಂಗಸೂರಿನ ಮಾನಪ್ಪ ವಜ್ಜಲ್‍ಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ.  120 ಅಭ್ಯರ್ಥಿಗಳ ಪಟ್ಟಿಯಲ್ಲಿ ಬೆಂಗಳೂರು ಮಹಾನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಯಶವಂತಪುರ, ರಾಜರಾಜೇಶ್ವರಿನಗರ, ಬ್ಯಾಟರಾಯನಪುರ, ಗಾಂಧಿನಗರ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಮೊದಲ ಪಟ್ಟಿಯಲ್ಲಿ ಜಾತಿ, ಪ್ರದೇಶವಾರು, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಸಂಘಟನೆ, ರಾಜ್ಯ ಸರ್ಕಾರದ ವಿರುದ್ದ ಹೋರಾಟ, ಪಕ್ಷ ನೀಡಿದ್ದ ಗುರಿಯನ್ನು ಎಷ್ಟರಮಟ್ಟಿಗೆ ತಲುಪಿದೆ, ಸ್ಥಳೀಯ ಮುಖಂಡರ ಅಭಿಪ್ರಾಯ ಸೇರಿದಂತೆ ಹಲವು ಸಮೀಕರಣದ ಮೇಲೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.
ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದ್ದು , 2013ರ ವಿಧಾನಸಭಾ ಚುನಾವಣೆಯಲ್ಲಿ 5-10 ಸಾವಿರ ಮತಗಳ ಅಂತರದಿಂದ ಪರಾಭವಗೊಂಡವರಿಗೂ ಟಿಕೆಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಾಲಿ ಲೋಕಸಭಾ ಸದಸ್ಯರ ಪೈಕಿ ಶಿವಮೊಗ್ಗ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಸದ್ಯಕ್ಕೆ ಟಿಕೆಟ್ ನೀಡಲಾಗಿದೆ. ಬಳ್ಳಾರಿ ಸಂಸದ ಹಾಗೂ ಹಿಂದುಳಿದ ವರ್ಗಗಳ ನಾಯಕ ಶ್ರೀರಾಮುಲುಗೆ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಕೇಂದ್ರ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ. ಉಳಿದಂತೆ ಯಾವುದೇ ಲೋಕಸಭಾ ಸದಸ್ಯರಿಗೆ ಟಕೆಟ್ ನೀಡದಿರಲು ತೀರ್ಮಾನಿಸಲಾಗಿದೆ. ಪ್ರತಿಯೊಬ್ಬ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ 2-3 ಕ್ಷೇತ್ರಗಳ ಉಸ್ತುವಾರಿ ಪಡೆದು ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡಬೇಕು.

ಸುಮಾರು 2-3 ಸಮೀಕ್ಷಾ ವರದಿಗಳನ್ನು ಆಧರಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಪ್ರದೇಶವಾರು, ಜಾತಿ, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ವರಿಷ್ಠರು ನೀಡಿರುವ ಪಕ್ಷದ ಕಾರ್ಯಗಳನ್ನು ಎಷ್ಟರ ಮಟ್ಟಿಗೆ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಎಷ್ಟು ಬಾರಿ ಪ್ರತಿಭಟನೆ ನಡೆಸಲಾಗಿದೆ, ಮತದಾರರ ಜೊತೆ ಹೊಂದಿರುವ ಬಾಂಧವ್ಯ ಸೇರಿದಂತೆ ಹತ್ತು ಹಲವು ಅಂಶಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಂಸ್ಥೆಗಳಿಂದ ಸಮೀಕ್ಷೆ ನಡೆಸಲಾಗಿದೆ.

ಈ ಸಮೀಕ್ಷೆ ನೀಡಿದ ವರದಿ ಆಧರಿಸಿ ಬೆಂಗಳೂರು ಮಹಾನಗರ, ಕರಾವಳಿ ತೀರಾ ಪ್ರದೇಶ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ವ್ಯಾಪ್ತಿಯ 120 ವಿಧಾನಸಭಾ ಕ್ಷೇತ್ರಗಳಿಗೆ ಹೆಸರು ಅಖೈರು ಮಾಡಲಾಗಿದೆ. ಇದೀಗ ಈ ಪಟ್ಟಿ ದೆಹಲಿ ವರಿಷ್ಠರಿಗೆ ತಲುಪಲಿದೆ.
ಚುನಾವಣಾ ಸಮಿತಿ ಅಂತಿಮ ಮುದ್ರೆ ಒತ್ತಿದರೆ ರಾಷ್ಟ್ರಾಧ್ಯಕ್ಷರ ಸೂಚನೆಯಂತೆ ಮೊದಲ ಪಟ್ಟಿ ಬಿಡುಗಡೆಯಾಗಲಿದೆ.

ತೀವ್ರ ಹಣಾಹಣಿಯಿಂದ ಕೂಡಿದ್ದು , ಮೂರಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಚುನಾವಣಾ ದಿನಾಂಕ ಘೋಷಣೆಯಾದ ನಂತರ ಪ್ರಕಟಿಸುವ ಸಾಧ್ಯತೆ ಇದೆ. ಪಕ್ಷದೊಳಗೆ ಯಾವುದೇ ರೀತಿಯ ಭಿನ್ನಮತ ಅಸಮಾಧಾನಕ್ಕೆ ಕಾರಣವಿಲ್ಲದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಚುನಾವಣಾ ಸಮಿತಿ ಪಟ್ಟಿಯನ್ನು ಸಿದ್ದಪಡಿಸುತ್ತಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ಸಹ ಉಸ್ತುವಾರಿ ಪಿಯೂಷ್ ಗೋಯಲ್, ಕೇಂದ್ರ ಸಚಿವರಾದ ಸದಾನಂದಗೌಡ ಮತ್ತಿತರ ಸ್ಥಳೀಯ ನಾಯಕರ ಸಲಹೆಗಳನ್ನು ಪಡೆದು ಪಟ್ಟಿ ಸಿದ್ದಪಡಿಸಲಾಗಿದೆ.  ಬಿರುಸಿನ ಸ್ಪರ್ಧೆ ಇರುವ ಶಿವಮೊಗ್ಗ ನಗರ, ಸಾಗರ, ಸೊರಬ, ಹರಿಹರ, ಹೊನ್ನಾಳಿ, ಹರಪನಹಳ್ಳಿ , ತುಮಕೂರು ನಗರ ಸೇರಿದಂತೆ ಮತ್ತಿತರ ಕ್ಷೇತ್ರಗಳಿಗೆ ಇನ್ನು ಎರಡು ಸುತ್ತಿನ ಸಮೀಕ್ಷೆ ನಂತರ ಪಟ್ಟಿ ಬಿಡುಗಡೆ ಮಾಡಲು ವರಿಷ್ಟರು ತೀರ್ಮಾನ ಕೈಗೊಂಡಿದ್ದಾರೆ.

# ಬೆಂಗಳೂರು ಮಹಾನಗರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ : 
ಮಲ್ಲೇಶ್ವರಂ-ಅಶ್ವಥ್ ನಾರಾಯಣ
ರಾಜಾಜಿನಗರ- ಎಸ್.ಸುರೇಶ್‍ಕುಮಾರ್
ಪದ್ಮನಾಭನಗರ- ಆರ್.ಅಶೋಕ್
ಜಯನಗರ-ವಿಜಯಕುಮಾರ್
ಬಸವನಗುಡಿ- ರವಿಸುಬ್ರಹ್ಮಣ್ಯ
ಬೆಂಗಳೂರು ದಕ್ಷಿಣ- ಎಂ.ಕೃಷ್ಣಪ್ಪ
ಯಲಹಂಕ -ಎಸ್.ಆರ್‍ವಿಶ್ವನಾಥ್
ದಾಸರಹಳ್ಳಿ- ವಿ.ಮುನಿರಾಜು
ಮಹದೇವಪುರ- ಅರವಿಂದ ಲಿಂಬಾವಳಿ
ಹೆಬ್ಬಾಳ-ವೈ.ಎ.ನಾರಾಯಣಸ್ವಾಮಿ
ಸರ್.ಸಿ.ವಿ.ರಾಮನ್‍ನಗರ- ಸಿ.ರಘು
ಬೊಮ್ಮನಹಳ್ಳಿ-ಸತೀಶ್ ರೆಡ್ಡಿ
ರಾಜರಾಜೇಶ್ವರಿನಗರ -ಶಿಲ್ಪಾ ಗಣೇಶ್/ಮುನಿರಾಜು/ರಾಮಚಂದ್ರಪ್ಪ
ಮಹಾಲಕ್ಷ್ಮಿಲೇಔಟ್-ಎಸ್.ಹರೀಶ್/ಎಂ.ನಾಗರಾಜ್
ಸರ್ವಜ್ಞನಗರ-ಪದ್ಮನಾಭರೆಡ್ಡಿ /ಶರವಣ
ಗೋವಿಂದರಾಜನಗರ-ಶಾಂತಕುಮಾರಿ /ಉಮೇಶ್ ಶೆಟ್ಟಿ
ವಿಜಯನಗರ-ಅಶ್ವಥನಾರಾಯಣ ಗೌಡ/ರವೀಂದ್ರ
ಚಾಮರಾಜಪೇಟೆ-ಲಹರಿ ವೇಲು/ಬಿ.ವಿ.ಗಣೇಶ್/ಲಕ್ಷ್ಮಿನಾರಾಯಣ
ಆನೇಕಲ್-ಎ.ನಾರಾಯಣಸ್ವಾಮಿ/ಕೆ.ಶಿವರಾಂ
ಬಿಟಿಎಂ ಲೇಔಟ್-ವಿವೇಕ್ ರೆಡ್ಡಿ/ಪ್ರಸಾದ್ ರೆಡ್ಡಿ
ಪುಲಿಕೇಶಿನಗರ- ಸಿ.ಮುನಿಕೃಷ್ಣ
ಶಾಂತಿನಗರ -ವಾಸುದೇವ ಮೂರ್ತಿ/ಶ್ರೀಧರ್ ರೆಡ್ಡಿ
ಕೆ.ಆರ್.ಪುರಂ-ನಂದೀಶ್ ರೆಡ್ಡಿ /ಪೂರ್ಣಿಮಾ
ಗಾಂಧಿನಗರ-ಎಂ.ಬಿ.ಶಿವಪ್ಪ /ಶಿವಕುಮಾರ್
ಚಿಕ್ಕಪೇಟೆ- ಡಾ.ಹೇಮಚಂದ್ರ ಸಾಗರ್/ ಉದಯ ಗರುಡಾಚಾರ್, /ಎನ್.ಆರ್.ರಮೇಶ್

# ಬೆಂಗಳೂರು ಗ್ರಾಮಾಂತರ
ಹೊಸಕೋಟೆ-ಬಿ.ಎನ್.ಬಚ್ಚೇಗೌಡ,
ದೊಡ್ಡಬಳ್ಳಾಪುರ- ಜೆ.ನರಸಿಂಹ ಸ್ವಾಮಿ
ನೆಲಮಂಗಲ- ನಾಗರಾಜ್

# ತುಮಕೂರು
ತುಮಕೂರು ನಗರ-ಜ್ಯೋತಿ ಗಣೇಶ್/ಸೊಗಡು ಶಿವಣ್ಣ
ತುಮಕೂರ ಗ್ರಾಮಾಂತರ- ಸುರೇಶ್ ಗೌಡ
ಚಿಕ್ಕನಾಯಕನಹಳ್ಳಿ -ಜೆ.ಮಾದುಸ್ವಾಮಿ
ತುರುವೇಕೆರೆ-ಮಸಾಲೆ ಜಯರಾಮ್
ಕುಣಿಗಲ್-ಕೃಷ್ಣಕುಮಾರ್

# ಕೋಲಾರ
ಕೆಜಿಎಫ್-ರಾಮಕ್ಕ
ಮಾಲೂರು-ಕೃಷ್ಣಯ್ಯ ಶೆಟ್ಟಿ
ಚಿಂತಾಮಣಿ-ಎಂ.ಸಿ.ಸುಧಾಕರ್

# ಶಿವಮೊಗ್ಗ
ಶಿವಮೊಗ್ಗ ನಗರ-ಕೆ.ಎಸ್.ಈಶ್ವರಪ್ಪ /ರುದ್ರೇಗೌಡ
ತೀರ್ಥಹಳ್ಳಿ- ಅರಗ ಜ್ಞಾನೇಂದ್ರ
ಶಿಕಾರಿಪುರ-ಬಿ.ಎಸ್.ಯಡಿಯೂರಪ್ಪ
ಸಾಗರ-ಬೇಳೂರು ಗೋಪಾಲಕೃಷ್ಣ/ಹರತಾಳ್ ಹಾಲಪ್ಪ
ಸೊರಬ-ಕುಮಾರ್ ಬಂಗಾರಪ್ಪ / ಹರತಾಳ್ ಹಾಲಪ್ಪ

# ದಾವಣಗೆರೆ
ದಾವಣಗೆರೆ ಉತ್ತರ-ಎಸ್.ಎ.ರವೀಂದ್ರನಾಥ್
ದಾವಣಗೆರೆ ದಕ್ಷಿಣ- ಅರವಿಂದ್ ಜಾದವ್
ಚನ್ನಗಿರಿ-ಮಾಡಾಳ್ ವಿರೂಪಾಕ್ಷಪ್ಪ
ಹರಪನಹಳ್ಳಿ -ಕರುಣಾಕರ ರೆಡ್ಡಿ /ಕೊಟ್ರೇಶ್
ಹೊನ್ನಾಳಿ- ಎಂ.ಪಿ.ರೇಣುಕಾಚಾರ್ಯ/ಡಾ.ಡಿ.ಬಿ.ಗಂಗಪ್ಪ
ಹರಿಹರ- ಬಿ.ಪಿ.ಹರೀಶ್/ ದೇವೇಂದ್ರಪ್ಪ

# ಚಾಮರಾಜನಗರ
ಚಾಮರಾಜನಗರ ಜಿಲ್ಲೆ -ಪ್ರೊ .ಮಲ್ಲಿಕಾರ್ಜುನಯ್ಯ
ಹನೂರು- ಪರಿಮಳಾ ನಾಗಪ್ಪ/ ಬಿ.ಕೆ.ಶಿವಕುಮಾರ್
ಕೊಳೇಗಾಲ- ನಂಜುಂಡಸ್ವಾಮಿ

# ಬೆಳಗಾವಿ
ನಿಪ್ಪಾಣಿ-ಜೊಲ್ಲೆ ಶಶಿಕಲಾ
ಅಥಣಿ-ಲಕ್ಷ್ಮಣ್ ಸವದಿ
ಬೆಳಗಾವಿ ಉತ್ತರ-ಸಂಜಯ್ ಪಾಟೀಲ್
ಬೈಲಹೊಂಗಲ -ಡಾ.ವಿಶ್ವನಾಥ್ ಪಾಟೀಲ್
ಅರಬಾವಿ-ಬಾಲಚಂದ್ರ ಜಾರಕಿಹೊಳಿ
ಹುಕ್ಕೇರಿ- ಉಮೇಶ್ ಕತ್ತಿ
ಸವದತ್ತಿ ಯಲ್ಲಮ್ಮ -ಆನಂದ್

# ಬಾಗಲಕೋಟೆ
ಮುಧೋಳ-ಗೋವಿಂದ ಕಾರಜೋಳ
ತೆರದಾಳ-ಸಿದ್ದು ಸವದಿ
ಬಾಗಲಕೋಟೆ- ಈರಣ್ಣ ಚರಂತಿಮಠ
ಬಿಳಗಿ-ಮುರುಗೇಶ್ ನಿರಾಣಿ

# ಕಲಬುರಗಿ
ಕಲಬುರಗಿ ದಕ್ಷಿಣ -ದತ್ತಾತ್ರೇಯ ಸಿ.ಪಾಟೀಲ್ ದೇವೂರ
ಸೇಡಂ-ರಾಜಕುಮಾರ್‍ಖೇಲ್ಕರ್
ಜೇವರ್ಗಿ-ದೊಡ್ಡಪ್ಪಗೌಡ ನರಿಬೋಳ
ಶಹಪುರ- ಗುರುಪಾಟೀಲ್ ಶಿರುವಾಳ್
ಕಲಬುರಗಿ ಗ್ರಾಮಾಂತರ-ರೇವು ನಾಯಕ್ ಬೆಳಮಗಿ

# ರಾಯಚೂರು
ರಾಯಚೂರು ನಗರ- ಡಾ.ಶಿವರಾಜ್ ಪಾಟೀಲ್
ರಾಯಚೂರು ಗ್ರಾಮಾಂತರ- ತಿಪ್ಪರಾಜು
ಲಿಂಗಸಗೂರು-ಮಾನಪ್ಪ ವಜ್ಜಲ್
ದೇವದುರ್ಗ-ಕೆ.ಶಿವನಗೌಡ ನಾಯ್ಕ್
ಯಲಬುರ್ಗ- ಆಚಾರ್ ಹಾಲಪ್ಪ

# ಬಳ್ಳಾರಿ
ಬಳ್ಳಾರಿ ನಗರ- ಸೋಮಶೇಖರ ರೆಡ್ಡಿ
ಬಳ್ಳಾರಿ ಗ್ರಾಮಾಂತರ-ಶ್ರೀರಾಮುಲು/ಕೆ.ಶಾಂತ
ವಿಜಯನಗರ -ಗವಿಯಪ್ಪ
ಕೂಡ್ಲಗಿ-ಮುತ್ತಯ್ಯ
ಹಗರಿ ಬೊಮ್ಮನಹಳ್ಳಿ-ನೇಮಿರಾಜ ನಾಯಕ್
ಕಂಪ್ಲಿ- ಸುರೇಶ್ ಬಾಬು
ಶಿರಗುಪ್ಪ-ಸೋಮ ಲಿಂಗಪ್ಪ
ಹೂವಿನಹಡಗಲಿ-ಚಂದ್ರ ನಾಯಕ್

# ಚಿತ್ರದುರ್ಗ
ಚಿತ್ರದುರ್ಗ-ತಿಪ್ಪಾರೆಡ್ಡಿ
ಮೊಳಕಾಲ್ಮೂರು-ಎಸ್.ತಿಪ್ಪೇಸ್ವಾಮಿ
ಹೊಳಲ್ಕೆರೆ-ಎಂ.ಚಂದ್ರಪ್ಪ

# ಚಿಕ್ಕಮಗಳೂರು
ಚಿಕ್ಕಮಗಳೂರು-ಸಿಟಿ.ರವಿ
ಶೃಂಗೇರಿ- ಡಿ.ಎನ್.ಜೀವರಾಜ್
ಮೂಡಿಗೆರೆ-ಎಂ.ಪಿ.ಕುಮಾರಸ್ವಾಮಿ
ಕಡೂರು-ಬೆಳ್ಳಿ ಪ್ರಕಾಶ್/ಡಾ.ವಿಶ್ವನಾಥ್
ತರೀಕೆರೆ-ಸುರೇಶ್

# ಉಡುಪಿ
ಕಾರ್ಕಳ-ಸುನೀಲ್‍ಕುಮಾರ್
ಕುಂದಾಪುರ-ಹಾಲಾಡಿ ಶ್ರೀನಿವಾಸ್ ಶೆಟ್ಟಿ
ಉಡುಪಿ-ಬಿ.ಸುಧಾಕರ್ ಶೆಟ್ಟಿ /ರಘುಪತಿ
ಮಡಿಕೇರಿ
ಮಡಿಕೇರಿ-ಅಪ್ಪಚ್ಚು ರಂಜನ್
ವಿರಾಜಪೇಟೆ-ಕೆ.ಜಿ.ಬೋಪಯ್ಯ

# ಹಾವೇರಿ
ಹಾನಗಲ್-ಸಿ.ಎಂ.ಉದಾಸಿ
ಶಿಂಗ್ಗಾವಿ-ಬಸವರಾಜ್‍ಬೊಮ್ಮಾಯಿ
ಹಿರೆಕೆರೂರು-ಬಣಕಾರ್

# ದಕ್ಷಿಣ ಕನ್ನಡ
ಸುಳ್ಯ-ಅಂಗಾರ

# ಉತ್ತರ ಕನ್ನಡ
ಶಿರಸಿ-ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ
ಹಳಿಡಿಯಾಳ-ಸುನೀಲ್ ಹೆಗಡೆ
ಭಟ್ಕಳ-ಶಿವಾನಂದ ನಾಯಕ್

# ಧಾರವಾಡ
ಹುಬ್ಬಳ್ಳಿ-ಧಾರವಾಡ ಕೇಂದ್ರ-ಜಗದೀಶ್ ಶೆಟ್ಟರ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ-ಅರವಿಂದ ಚಂದ್ರಕಾಂತ್ ಬೆಲ್ಲದ್

Facebook Comments

Sri Raghav

Admin