ಸುಶಾಂತ್ ಪ್ರಕರಣ : ತನಿಖೆಗಾಗಿ ಮುಂಬೈಗೆ ಬಂದಿದ್ದ ಪಾಟ್ನಾ ಎಸ್ಪಿಗೆ ಬಲವಂತದ ಕ್ವಾರಂಟೈನ್‍

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಆ.3-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ದಿನಕ್ಕೊಂದು ಕುತೂಹಲಕಾರಿ ತಿರುವು ಪಡೆದುಕೊಳ್ಳುತ್ತಿದ್ದು, ಹೊಸ ಬೆಳವಣಿಗೆಗೆಳು ಕಂಡುಬರುತ್ತಲೇ ಇವೆ.

ಸುಶಾಂತ್ ಸಾವು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಮುಂಬೈಗೆ ಆಗಮಿಸಿದ್ದ ಪಾಟ್ನಾದ ಖಡಕ್ ಪೊಲೀಸ್ ವರಿಷ್ಠಾದಿಕಾರಿ ವಿನಯ್ ತಿವಾರಿ ಅವರಿಗೆ ಕೊರೊನಾ ಶಂಕಿತ ಎಂದು ಹೇಳಿ ಬೃಹನ್ ಮುಂಬೈ ನಗರಪಾಲಿಕೆ (ಬಿಎಂಸಿ) ಕ್ವಾರಂಟೈನ್‍ಗೆ ಒಳಪಡಿಸಿ ಆವರ ಕೈ ಮೇಲೆ ಸೋಂಕು ಶಂಕಿತ ಎಂಬ ಮುದ್ರೆ ಹಾಕಿದೆ.

ಆಗಸ್ಟ್ 15ರವರೆಗೆ ಎಸ್ಪಿ ತಿವಾರಿ ಐಸೋಲೇಷನ್‍ಗೆ ಒಳಪಟ್ಟಿದ್ದು, ಪ್ರಕರಣದ ತನಿಖೆಗೆ ಅಡ್ಡಿಯಾಗಿದೆ ಈ ಬೆಳವಣೆಗೆ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.

ಬಿಹಾರ ಪೊಲೀಸ್ ಇಲಾಖೆಯಿಂದ ಬಾಲಿವುಡ್ ನಟನ ಸಾವು ಪ್ರಕರಣದ ತನಿಖೆ ತೀವ್ರಗೊಂಡಿದೆ. ಹೆಚ್ಚಿನ ವಿಚಾರಣೆ ನಡೆಸಲು ಬಿಹಾರ ಸರ್ಕಾರದಿಂದ ನಿಯೋಜಿತರಾಗಿ ಮುಂಬೈಗೆ ನಿನ್ನೆ ಆಗಮಿಸಿದ್ದ ಎಸ್ಪಿ ವಿನಯ್ ತಿವಾರಿ ಅವರನ್ನು ಹಠಾತ್ ಕ್ವಾರಂಟೈನ್‍ಗೆ ಒಳಪಡಿಸಲಾಗಿದ್ದು, ಅವರು 14 ದಿನಗಳ ಕಾಲ ಗೋರೆಗಾಂವ್‍ನಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಕ್ವಾರ್ಟರ್ಸ್‍ನಲ್ಲಿ ಐಸೋಲೇಷನ್‍ನಲ್ಲಿ ಇರಿಸಲಾಗಿದೆ ಎಂದುಮುಂಬೈನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷ ಐಪಿಎಸ್ ಅಧಿಕಾರಿ ವಿನಯ್ ಅವರನ್ನು ಆಗಸ್ಟ್ 15ರವರೆಗೆ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದು ಸೂಚಿಸುವ ಮುದ್ರೆಯನ್ನು ಅವರ ಕೈ ಮೇಲೆ ಬಿಎಂಸಿ ಅಧಿಕಾರಿಗಳು ಹಾಕಿದ್ದಾರೆ.

ಮುಂಬೈನ ಬಿಎಂಸಿ ಅಧಿಕಾರಿಗಳು ಬಲವಂತವಾಗಿ ವಿನಯ್ ತಿವಾರಿ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಿದ್ದಾರೆ ಎಂದು ಬಿಹಾರ ಪೊಲೀಸ್ ಮಹಾ ನಿರ್ದೇಶಕ ಗುಪ್ತೇಶ್ವರ ಪಾಂಡೆ ಆರೋಪಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆಯಲ್ಲಿ ಮುಂಬೈ ಮತ್ತು ಪಾಟ್ನಾ ಪೊಲೀಸರು ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿದ್ದು, ತನಿಖೆಗೆ ಅಡ್ಡಿಯಾಗಿದೆ.

ಮುಂಬೈ ಪೊಲೀಸರು ಬಾಲಿವುಡ್ ಮಾಫಿಯಾ ಹಿಡಿತದಲ್ಲಿದ್ಧಾರೆ ಎಂಬ ಆರೋಪಗಳ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಹಲವಾರು ಅನುಮಾನಿಗಳಿಗೆ ಎಡೆ ಮಾಡಿಕೊಟ್ಟಿದೆ.

Facebook Comments

Sri Raghav

Admin