19 ಜನ ಬಲಿಯಾಗಿದ್ದ ನಕಲಿ ಮದ್ಯ ಪ್ರಕರಣದಲ್ಲಿ 9 ಮಂದಿಗೆ ಗಲ್ಲು ಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ, ಮಾ.6- ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿದ್ದ 2016ರ ನಕಲಿ ಮದ್ಯ ದುರಂತಕ್ಕೆ ಸಂಬಂಸಿದಂತೆ ಬಿಹಾರದ ನ್ಯಾಯಾಲಯ ಒಂಬತ್ತು ಮಂದಿಗೆ ಮರಣ ದಂಡನೆ ಮತ್ತು ನಾಲ್ಕು ಮಹಿಳೆಯರಿಗೆ ಜೀವಾವ ಶಿಕ್ಷೆ ವಿಸಿದೆ.
ಗೋಪಾಲ್‍ಗಂಜ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾೀಶ ಲವ್ ಕುಶ್ ಕುಮಾರ್ ಅವರು 19ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ವಿಷಪೂರಿತ ಮದ್ಯ ಸೇವನೆ ಪ್ರಕರಣಕ್ಕೆ ಸಂಬಂಧಪಟ್ಟ, ಪ್ರಮುಖ ಆರೋಪಿಗಳಿಗೆ ಶಿಕ್ಷೆ ವಿಸಿ ಆದೇಶ ಹೊರಡಿಸಿದ್ದಾರೆ.

2016ರ ಆಗಸ್ಟ್ 16 ರಂದು ಖರ್ಜ್‍ಬಾನಿ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿ 19 ಮಂದಿ ಸಾವನ್ನಪ್ಪಿದರೆ, ಆರಕ್ಕೂ ಹೆಚ್ಚು ಮಂದಿ ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಘಟನೆಗೆ ಸಂಬಂಧಪಟ್ಟಂತೆ ಗೋಪಾಲ್‍ಗಂಜ್ ಪೊಲೀಸರು ದೂರು ದಾಖಲಿಸಿಕೊಂಡು 14 ಮಂದಿ ವಿರುದ್ಧ ಎಫ್‍ಐಆರ್ ನೋಂದಾಯಿಸಿದ್ದರು. ಜಾರ್ಜ್‍ಶೀಟ್‍ನಲ್ಲಿ ಆರೋಪಿಗಳು ಮದ್ಯ ತಯಾರಿಕೆಯಲ್ಲಿ ಮಿಥೈಲ್ ಆಲ್ಕೋಹಾಲ್ ಬಳಸಿದ್ದರು ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಖುಲಾಸೆಗೊಳಿಸಲಾಗಿತ್ತು.

ನ್ಯಾಯಾಲಯದ ಪರ ವಕೀಲ ವೇದ್ ಪ್ರಕಾಶ್ ತಿವಾರಿ ಮಾತನಾಡಿ, 14 ಜನರಲ್ಲಿ 13 ಮಂದಿಗೆ ಕೋರ್ಟ್ ತಪ್ಪಿತಸ್ಥರು ಎಂದು ಗುರುತಿಸಿ ಶಿಕ್ಷೆ ವಿಸಿದೆ. ಒಂಬತ್ತು ಮಂದಿಗೆ ಮರಣ ದಂಡನೆ ವಿಸಿ, ನಾಲ್ವರು ಮಹಿಳೆಯರಿಗೆ ಜೀವಾವ ಶಿಕ್ಷೆ ಪ್ರಕಟಿಸಿದೆ. ಆದರೆ, ಕೆಳ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಮನವಿ ಸಲ್ಲಿಸಲಿದ್ದೇನೆ ಎಂದಿದ್ದಾರೆ.

ರಾಜೇಶ್ ಎಂಬ ಅಪರಾ ಪತ್ನಿ ಪ್ರಿಯಾಂಕಾ ಕುಮಾರ್, ನನ್ನ ಪತಿ ಮತ್ತು ಈ ವಿಷಕಾರಿ ಮದ್ಯ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಹಾಗೂ ಅವರನ್ನು ತಪ್ಪಾಗಿ ಈ ಕೇಸ್‍ನಲ್ಲಿ ಸಿಕ್ಕಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ದುರಂತ ಸಂಭವಿಸುವ ಮುನ್ನ ಏಪ್ರಿಲ್ 2016 ರಿಂದಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಬಿಹಾರದಲ್ಲಿ ಮದ್ಯ ನಿಷೇಧವನ್ನು ಜಾರಿಗೆ ತಂದಿತ್ತು.

ಭಾರಿ ಆಕ್ರೋಶಕ್ಕೆ ಕಾರಣವಾದ ಈ ಮದ್ಯ ದುರಂತದ ಹಿನ್ನೆಲೆಯಲ್ಲಿ ಹಲವಾರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು. ಅಲ್ಲದೆ, ಖರ್ಜ್‍ಬಾನಿಯ 25-30 ಮನೆಗಳ ಕ್ಲಸ್ಟರ್ ಮೇಲೆ ದಾಳಿ ನಡೆಸಿದ್ದರು. ಎಲ್ಲರೂ ಅಕ್ರಮ ಮದ್ಯ ವ್ಯಾಪಾರದಲ್ಲಿ ಭಾಗಿಯಾಗಿದ್ದರು ಹಾಗೂ ಈ ಸಂದರ್ಭದಲ್ಲಿ 500 ಲೀ.ಗಿಂತ ಹೆಚ್ಚು ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು.

Facebook Comments

Sri Raghav

Admin