2 ತಲೆ, 3 ಕಣ್ಣುಗಳೊಂದಿಗೆ ವಿಚಿತ್ರ ಕರು ಜನನ..!

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ, ಅ. 13- ನವರಾತ್ರಿಯ ಸಮಯದಲ್ಲಿ 2 ತಲೆ ಹಾಗೂ 3 ಕಣ್ಣುಗಳುಳ್ಳ ಕರು ಜನಿಸಿರುವುದರಿಂದ ಇದು ದೇವರ ವರ ಪ್ರಸಾದ ಎಂದು ತಿಳಿದು ಜನರು ಕರುವನ್ನು ಪೂಜಿಸುತ್ತಿರುವ ಘಟನೆಯು ಒರಿಸ್ಸಾದ ನಬ್ರಂಗ್ ಪುರ್ ಜಿಲ್ಲೆಯಲ್ಲಿ ನಡೆದಿದೆ.


ನಬ್ರಂಗ್‍ಪುರ್ ಜಿಲ್ಲೆಯ ಬಿಜಾಪುರ ಗ್ರಾಮದಲ್ಲಿರುವ ಧನಿರಾಂ ಎಂಬ ರೈತನ ಮನೆಯಲ್ಲಿ ಈ ವಿಚಿತ್ರ ಕರು ಜನನವಾಗಿದ್ದು ಈ ಕರುವನ್ನು ನೋಡಲು ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಬಂದು ಪೂಜೆಯನ್ನು ಸಲ್ಲಿಸಿದ್ದಾರೆ. ಧನಿರಾಂ ಅವರು ಎರಡು ವರ್ಷಗಳ ಹಿಂದೆ ಹಸುವೊಂದನ್ನು ಮನೆಗೆ ತಂದಿದ್ದು ಅದೇ ಈಗ ವಿಚಿತ್ರ ಕರುವಿಗೆ ಜನ್ಮ ನೀಡಿದೆ.

ಹಸುವು ಗರ್ಭ ಧರಿಸಿದ್ದಾಗ ಅದು ಅನಾರೋಗ್ಯದಿಂದ ಬಳಲುತ್ತಿದೆ ಎಂದು ನೆರೆಮನೆಯಾತ ಧನಿರಾಂಗೆ ತಿಳಿಸಿದ್ದರು, ಕರು ಜನಿಸಲಿ ಆಮೇಲೆ ನೋಡೋಣ ಎಂದು ಅವರು ಹೇಳಿದ್ದರು. ಆದರೆ ಈಗ ಹಸುವು 2 ತಲೆ ಹಾಗೂ 3 ಕಣ್ಣಿರುವ ಕರುವಿಗೆ ಜನ್ಮ ನೀಡಿದೆ.
ಕರುವು 2 ತಲೆ ಹೊಂದಿರುವುದರಿಂದ ಹಾಲು ಕುಡಿಯಲು ಪರದಾಡುವಂತಾಗಿದೆ.

Facebook Comments