Friday, March 29, 2024
Homeರಾಜ್ಯವರ್ಷಾಚರಣೆ ತಂದ ಆಪತ್ತು: ಟೆಕ್ಕಿ ಸೇರಿ ಮೂವರ ದುರ್ಮರಣ..

ವರ್ಷಾಚರಣೆ ತಂದ ಆಪತ್ತು: ಟೆಕ್ಕಿ ಸೇರಿ ಮೂವರ ದುರ್ಮರಣ..

ಬೆಂಗಳೂರು,ಜ.1- ಹೊಸ ವರ್ಷಾಚರಣೆ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಟೆಕ್ಕಿ ಸೇರಿ ಮೂವರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಬೆಳ್ಳಂದೂರು:
ವರ್ಷಾಚರಣೆಯಲ್ಲಿ ಪಾಲ್ಗೊಂಡು ಸ್ನೇಹಿತರೊಂದಿಗೆ ಆಟೋದಲ್ಲಿ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದ
ಪರಿಣಾಮ ಹರಿಯಾಣ ಮೂಲದ ಸಾಫ್ಟ್‍ವೇರ್ ಎಂಜನಿಯರ್ ಮೃತಪಟ್ಟಿದ್ದಾರೆ. ನಗರದ ಕಸವನಹಳ್ಳಿಯಲ್ಲಿ ವಾಸವಾಗಿದ್ದ ರವಿ ಕಾರ್ತಿಕೇಯರ್(28) ಮೃತಪಟ್ಟ ಟೆಕ್ಕಿ.

ಹರಿಯಾಣ ಮೂಲದ ರವಿ ಕಾರ್ತಿಕೇಯನ್ ರಾತ್ರಿ ಮೂವರು ಸ್ನೇಹಿತರೊಂದಿಗೆ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಧ್ಯರಾತ್ರಿ 12.45ರ ಸುಮಾರಿನಲ್ಲಿ ಆಟೋದಲ್ಲಿ ಬರುತ್ತಿದ್ದಾಗ ಸರ್ಜಾಪುರ ರಸ್ತೆಯ ಅಪಾರ್ಟ್‍ಮೆಂಟ್ ಬಳಿ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋದಲ್ಲಿದ್ದ ಚಾಲಕ ಸೇರಿದಂತೆ ಐದು ಮಂದಿ ಗಾಯಗೊಂಡರು. ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ರವಿ ಕಾರ್ತಿಕೇಯನ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ . ಈ ಬಗ್ಗೆ ಬೆಳ್ಳಂದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೆಣ್ಣೂರು:
ಹೊಸವರ್ಷಾರಣೆ ಪಾರ್ಟಿಯಲ್ಲಿ ಪಾಲ್ಗೊಂಡು ವಾಪಸ್ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ನಿಯಂತ್ರಣತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾರೆ. ಕಾಚರಕನಹಳ್ಳಿ ನಿವಾಸಿ ಚೇತನ್(22) ಮೃತಪಟ್ಟ ಬೈಕ್ ಸವಾರ. ರಾತ್ರಿ ಪಾರ್ಟಿ ಮುಗಿಸಿಕೊಂಡು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಚೇತನ್ ಮನೆಗೆ ಹೋಗುತ್ತಿದ್ದಾಗ ಕೊತ್ತನೂರು ಮುಖ್ಯರಸ್ತೆಯಲ್ಲಿ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದು ತೀವ್ರ ಪೆಟ್ಟಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಾಮ ಜನ್ಮಭೂಮಿ ಕರ ಸೇವಕರ ಮೇಲೆ ಸರ್ಕಾರ ಸೇಡು: ಅಶೋಕ್

ವೈಟ್‍ಫೀಲ್ಡ್:
ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡು ಉತ್ತರಪ್ರದೇಶ ಮೂಲದ ಇಬ್ಬರು ಸ್ನೇಹಿತರು ಆಕ್ಟೀವ್ ಹೋಂಡಾ ಸ್ಕೂಟರ್‍ನಲ್ಲಿ ರೂಮ್‍ಗೆ ಹಿಂದಿರುಗುತ್ತಿದ್ದಾಗ ಅತಿವೇಗದಿಂದಾಗಿ ನಿಯಂತ್ರಣತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸವಾರ ಮೃತಪಟ್ಟಿದ್ದಾನೆ. ಉತ್ತರಪ್ರದೇಶ ಮೂಲದ ಧಿ ೀರಜ್(21) ಮೃತಪಟ್ಟ ಸವಾರ. ಈತ ವೃತ್ತಿಯಲ್ಲಿ ಪೈಂಟರ್. ಸ್ನೇಹಿತ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇವರಿಬ್ಬರು ಸಿದ್ದಪುರದಲ್ಲಿ ರೂಮ್ ಮಾಡಿಕೊಂಡು ವಾಸವಿದ್ದರು. ವರ್ಷಾಚರಣೆಗೆ ತೆರಳಿ ರಾತ್ರಿ 12.30ರ ಸುಮಾರಿನಲ್ಲಿ ವಾಪಸ್ಸಾಗುತ್ತಿದ್ದಾಗ ನಲ್ಲೂರಹಳ್ಳಿ ರಸ್ತೆಯಲ್ಲಿ ನಿಯಂತ್ರಣತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ವೈಟ್‍ಫೀಲ್ಡ್ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News