ಚಿತ್ರದುರ್ಗ ಹೆದ್ದಾರಿಯಲ್ಲಿ ಬೈಕ್‍ಗೆ-ಬಸ್ ಡಿಕ್ಕಿಯಾಗಿ ಬಾಲಕಿ ದುರ್ಮರಣ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಜೂ. 21- ಬೈಕ್‍ನಲ್ಲಿ ತಂದೆಯೊಂದಿಗೆ ಶಾಲೆಗೆ ಸೇರಲು ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದು ಬಾಲಕಿ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಲ್ಲೂರು ಗ್ರಾಮದ ಅಮೃತಾ (13) ಮೃತ ಬಾಲಕಿ.

ಈಕೆ ಇಂದು ಬೆಳಿಗ್ಗೆ ತನ್ನ ತಂದೆಯೊಂದಿಗೆ ಮೊರಾರ್ಜಿ ಶಾಲೆಗೆ ಸೇರಲು ಹೊರಟಿದ್ದಾಗ ಜೆಎಂಐಸಿ ಕಾಲೇಜು ಮುಂಭಾಗದ ಎನ್‍ಎಚ್-4 ರಸ್ತೆಯಲ್ಲಿ ರಸ್ತೆ ದಾಟುವಾಗ ಖಾಸಗಿ ಬಸ್ ಬೈಕ್‍ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‍ನಿಂದ ಕೆಳಗಿ ಬಿದ್ದ ಬಾಲಕಿ ಅಮೃತಾ ಸ್ಥಳದಲ್ಲೇ ಅಸುನೀಗಿದಾಳೆ ತಂದೆ ಮಂಜುನಾಥ್ ರೆಡ್ಡಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments