ಶಾಕಿಂಗ್: ದಂಡ ಹಾಕಿದ್ದಕ್ಕೆ ಬೈಕ್‍ಗೆ ಬೆಂಕಿಯಿಟ್ಟ ಸವಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.6- ನೂತನವಾಗಿ ಜಾರಿಗೆ ಬಂದಿರುವ ಸಂಚಾರ ದಂಡದ ವಿರುದ್ಧ ಎಲ್ಲೆಡೆಯೂ ವ್ಯಾಪಕ ಪ್ರತಿರೋಧ ಉಂಟಾಗಿದ್ದು ಸವಾರರು ಹಾಗೂ ಸಂಚಾರಿ ಪೊಲೀಸರ ನಡುವೆ ಸಂಘರ್ಷವೇ ಉಂಟಾಗಿದೆ.ಎಷ್ಟೋ ಸವಾರರು ದಂಡ ಕಟ್ಟುವ ಸಹವಾಸವೇ ಬೇಡ ಎಂದು ವಾಹನಗಳಿಂದ ದೂರವಿದ್ದರೆ, ಮತ್ತಷ್ಟು ಸವಾರರು ಭಾರೀ ದಂಡ ಕಟ್ಟಿ ಬರೀ ಜೇಬಲ್ಲಿ ಮನೆಗಳಿಗೆ ತೆರಳುತ್ತಿದ್ದಾರೆ.

ಇನ್ನೂ ಕೆಲವರು ಸಂಚಾರಿ ಪೊಲೀಸರೊಂದಿಗೆ ವಾಗ್ದಾಳಿ ನಡೆಸಿದರೂ ಬರುವ ಭಾರೀ ದಂಡದಿಂದ ತಮ್ಮ ವಾಹನಕ್ಕೆ ಹಾನಿಯನ್ನು ಮಾಡಿದ್ದಾರೆ. ಅಂಥದೇ ಪ್ರಕರಣ ನವದೆಹಲಿಯಲ್ಲಿ ಸಂಭವಿಸಿದೆ. ನವದೆಹಲಿಯ ಶೇಖ್ ಸರಾಯ್‍ನಲ್ಲಿ ನಿನ್ನೆ ಬೈಕ್‍ನಲ್ಲಿ ಹೋಗುತ್ತಿದ್ದ ರಾಕೇಶ್ ಎಂಬುವವರನ್ನು ಸಂಚಾರಿ ಪೊಲೀಸರು ತಡೆದು ದಾಖಲೆಗಳನ್ನು ಪರೀಕ್ಷಿಸಿದ ನಂತರ ಆತನಿಗೆ 16 ಸಾವಿರ ದಂಡ ಪ್ರಮಾಣದ ಬಿಲ್ ಅನ್ನು ನೀಡಿದ್ದಾರೆ.

ಈ ವೇಳೆ ಕೋಪಗೊಂಡ ರಾಕೇಶ್ ತನ್ನ ಬೈಕಿಗೆ ಬೆಂಕಿ ಹೊತ್ತಿಸಿದ್ದಾನೆ, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಅಗ್ನಿಯನ್ನು ನಂದಿಸಿದ್ದಾರೆ. ಪಾನಮತ್ತನಾಗಿದ್ದ ರಾಜೇಶನ ಈ ದುರ್ವತನೆ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments