ಬೈಕ್ ಸವಾರರಿಗೆ ಗುಡ್ ನ್ಯೂಸ್ : ಏ20ರ ನಂತರ ಪಾಸ್ ಇಲ್ಲದೆ ಸಂಚರಿಸಲು ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಸೋಮವಾರದಿಂದಲೇ ಅನ್ವಯವಾಗುವಂತೆ  ಕೊರೊನಾ ಲಾಕ್‌ಡೌನ್ ನಿಯಮ ಸಡಿಲಗೊಳಿಸಿರುವ ರಾಜ್ಯ ಸರ್ಕಾರ, ಏಪ್ರಿಲ್ 20ರ ನಂತರ ಯಾವುದೇ ಪಾಸ್ ಇಲ್ಲದೆ ದ್ವಿಚಕ್ರ ವಾಹನ ಗಳು ಸಂಚರಿಸಲು ಅನುಮತಿ ನೀಡುವ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.

ಕೊವಿಡ್ 19 ನಿರ್ವಹಣೆ ಕುರಿತಂತೆ ಇಂದು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಹಿರಿಯ ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಯಿತು. ಲಾಕ್ ಡೌನ್ ಉಲ್ಲಂಘನೆಯ ದೂರುಗಳು ಹೆಚ್ಚುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು,ಹಾಗೂ ಏಪ್ರಿಲ್ 20ರ ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಮಂತ್ರಿಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು, ಏಪ್ರಿಲ್ 20ರ ನಂತರ ದ್ವಿಚಕ್ರ ವಾಹಾನ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಅದಕ್ಕೆ ಯಾವುದೇ ಪಾಸ್ ಅನುಮತಿ ಬೇಕಾಗಿಲ್ಲ. ಹೊರ ಜಿಲ್ಲೆಗಳಿಗೆ ಹೋಗುವಂತಿಲ್ಲ, ಅದೇ ಜಿಲ್ಲೆಯ ಒಳಗೆ ಓಡಾಡಬೇಕು ಎಂದು ಸೂಚಿಸಿದರು.

ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಇತರ ವಲಯಗಳಲ್ಲಿ ದ್ವಿಚಕ್ರ ವಾಹನಗಳು, ಇಲ್ಲಿಯವರೆಗೆ ಪಾಸ್ ಪಡೆದಿರುವ ಕಾರುಗಳು ಹಾಗೂ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ಕಂಟೇನ್ಮೆಂಟ್ ಝೋನ್ ನಲ್ಲಿ ಇನ್ಸಿಡೆಂಟ್ ಕಮಾಂಡರ್ ನೇಮಕ ಮಾಡಿ ಅವರಿಗೆ ಮ್ಯಾಜಿಸ್ಟೀರಿಯಲ್ ಅಧಿಕಾರ ನೀಡಲಾಗುವುದು. ಜೊತೆಗೆ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿಯ ತಂಡ ರಚಿಸಲಾಗುವುದು. ಅವರು ಕಂಟೇನ್ಮೆಂಟ್ ಝೋನ್ ಗಳ ಮೇಲ್ಚಿಚಾರಣೆ ವಹಿಸುವುದು.

ಈ ಪ್ರದೇಶದಲ್ಲಿ ಲಾಕ್ ಡೌನ್ ಅನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಯಾರೂ ಮನೆಯಿಂದ ಹೊರ ಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ ತಲುಪಿಸಲಾಗುವುದು. ಬಫರ್ ಝೋನ್ ನಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಇಲ್ಲಿಯವರೆಗೆ ಪಾಸ್ ಪಡೆದುಕೊಂಡಿರುವವರಿಗೆ  ಮೇ 3ರ ವರೆಗೆ ಅನುಮತಿ ಮುಂದೂಡಲಾಗಿದೆ. ಯಾವುದೇ ಕಾರಣಕ್ಕೂ ಹೊಸ ಪಾಸ ವಿತರಣೆ ಇಲ್ಲ. ಅಂತರ್ ಜಿಲ್ಲಾ ಓಡಾಟವಿಲ್ಲ, ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಏಪ್ರಿಲ್ 20ರಿಂದ ಐಟಿ-ಬಿಟಿ ಕಂಪನಿಗಳು ಓಪನ್ ಆಗುತ್ತದೆ. ಆದರೆ ಶೇ.33ರಷ್ಟು ಉದ್ಯೋಗಿಗಳು ಮಾತ್ರ ಇರುತ್ತಾರೆ.

ಪಬ್, ಬಾರ್, ಹೋಟೆಲ್, ಮಾಲ್ ಯಾವುದೂ ಇರಲ್ಲ. ವಾಣಿಜ್ಯ ಉದ್ದೇಶದ ಶಾಪ್ ಓಪನ್ ಇರಲ್ಲ. ಅಲ್ಲದೇ ಬಸ್‍ಗಳ ಸಂಚಾರ ಇರಲ್ಲ. ಆದರೆ ಕಂಪನಿಗಳ ಬಸ್‍ಗಳು ಓಡಾಟ ಮಾಡಬಹುದು. ಲಾಕ್‍ಡೌನ್ ಮುಗಿಯುವ ಮೇ 3ರ ತನಕ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹೀಗಾಗಿ ಮೇ 3ರ ನಂತರ ಮದ್ಯ ಮಾರಾಟಕ್ಕೆ ತೀರ್ಮಾನ ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ನಗರ ಪ್ರದೇಶದಲ್ಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉಳಿದುಕೊಳ್ಳುವ ವ್ಯವಸ್ಥೆ ಇರುವಲ್ಲಿ ನಿರ್ಮಾಣ ಚಟುವಟಿಕೆಗಳು ಪ್ರಾರಂಭಿಸಲು ಅನುಮತಿ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನಾ ವಲಯದ ಕೈಗಾರಿಕೆಗಳು, ಹಾಗೂ ನಗರ ಪ್ರದೇಶದಲ್ಲಿ ಎಸ್ಇ ಝಡ್ ಗಳು, ಕೈಗಾರಿಕಾ ವಸಾಹತುಗಳು, ಕೈಗಾರಿಕಾ ಟೌನ್ ಷಿಪ್ ಗಳಲ್ಲಿ ಕೈಗಾರಿಕೆಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗುವುದು.

ಅಂತರ ಜಿಲ್ಲೆ ಪ್ರಯಾಣಕ್ಕೆ ಅವಕಾಶವಿಲ್ಲ. ಬೆಂಗಳೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕೈಗಾರಿಕೆಗಳ ಉದ್ಯೋಗಿಗಳ ಓಡಾಟದ ದೃಷ್ಟಿಯಿಂದ ಒಂದು ಜಿಲ್ಲೆಯಾಗಿ ಪರಿಗಣಿಸಲಾಗುವುದು. ಹಿರಿಯ ನಾಗರಿಕರು ಮನೆಯಿಂದ ಹೊರಬರಬಾರದು. ಮಾಸ್ಕ್ ಧರಿಸುವುದು ಕಡ್ಡಾಯ.

ಎಲ್ಲ ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ಉಗುಳುವುದನ್ನು ನಿಷೇಧಿಸಲಾಗಿದೆ. ಮೇ 03ರ ವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಮುಂದುವರೆಸಲಾಗುವುದು ಎಂದು ಮಾಹಿತಿ ನೀಡಿದರು.  ಕಟ್ಟಡ ಕಾರ್ಮಿಕರನ್ನು ಕಟ್ಟಡ ನಿರ್ಮಾಣ ಮಾಡುವ ಬಳಿಯೇ ಇರಿಸಿಕೊಳ್ಳುವುದು ,ಆ ಕಾರ್ಮಿಕರಿಗೆ ಊಟ , ತಿಂಡಿ ವ್ಯವಸ್ಥೆ ಅಲ್ಲೇ ಮಾಡಬೇಕು ಎಂದರು.

# ಕರ್ನಾಟಕದಲ್ಲಿ 262 ಪ್ರಕರಣಗಳು ಆಕ್ಟಿವ್  : 
ಕರ್ನಾಟಕದಲ್ಲಿ 371 ಪ್ರಕರಣಗಳ ಪೈಕಿ 262 ಪ್ರಕರಣಗಳು ಮಾತ್ರ ಆಕ್ಟಿವ್ ಆಗಿವೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.  ಲಾಕ್‌ಡೌನ್ ಉಲ್ಲಂಘನೆ ಕಂಟೇನ್ಮೆಂಟ್ ಝೋನ್‌ಗಳೆಂದು ಕರೆಯಲಾಗಿದೆ.ಯಾರು ಮನೆಯಿಂದ ಹೊರಗೆ ಬರುವಂತಿಲ್ಲ ಕಂಟೈನ್ ಮೆಂಟ್ ಜೋನ್ ನಲ್ಲಿ ದ್ವಿಚಕ್ರ ವಾಹನ ಓಡಾಡುವಂತಿಲ್ಲ ,ಮೇ3 ರ ವರೆಗೂ ಕೋವಿಡ್ ಪಾಸ್ ಇರುತ್ತದೆ ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರನ ವಿವಾಹ ವಿಚಾರ ಕುರಿತು ಮಾತನಾಡಿ, ಅವರದ್ದು ಕುಟುಂಬ ಅತ್ಯಂತ ದೊಡ್ಡ ಕುಟುಂಬ, ಸರ್ಕಾರದಿಂದ ಅನುಮತಿ‌ಪಡೆದು ಮದುವೆ ಮಾಡಿದ್ದಾರೆ. ಅನುಮತಿಯಂತೆ ಅತ್ಯಂತ ಕಡಿಮೆ ಜನರು ಭಾಗವಹಿಸಿದ್ದರು.  ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ, ಲಾಕ್‌ಡೌನ್ ಪಾಲಿಸಿದ್ದಕ್ಕೆ ಕುಮಾರಸ್ವಾಮಿಗೆ ಅಭಿನಂದನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Facebook Comments

Sri Raghav

Admin